ಚನ್ನಪಟ್ಟಣ: ನಿಖಿಲ್ ವಿರುದ್ಧ ಕಾಂಗ್ರೆಸ್ ನಾಯಕರು ಮೌನವಾಗಿದ್ದರ ಹಿಂದಿದೆ ಹೀಗೊಂದು ತಂತ್ರ!

ಚನ್ನಪಟ್ಟಣ ಉಪಚುನಾವಣಾ ಕಣ ರಂಗೇರುತ್ತಿದೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್​​ನಿಂದ ಸಿಪಿ ಯೋಗೇಶ್ವರ್ ಪ್ರಚಾರ ಜೋರಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್​ನ ಘಟಾನುಘಟಿ ನಾಯಕರು ಪ್ರಚಾರ ನಡೆಸುತ್ತಿದ್ದರೆ, ಅತ್ತ ಜೆಡಿಎಸ್​​ನಿಂದ ಕೇಂದ್ರ ಸಚಿವ ಕುಮಾರಸ್ವಾಮಿಯೇ ಖುದ್ದು ಪ್ರಚಾರದ ಅಖಾಡದಲ್ಲಿದ್ದಾರೆ. ಆದಾಗ್ಯೂ, ‘ಕೈ’ ನಾಯಕರು ನಿಖಿಲ್ ವಿರುದ್ಧ ನೇರ ವಾಗ್ದಾಳಿ ನಡೆಸುತ್ತಿಲ್ಲ. ಇದಕ್ಕೆ ಬಲವಾದ ಕಾರಣ ಇದೆಯಂತೆ!

ಚನ್ನಪಟ್ಟಣ: ನಿಖಿಲ್ ವಿರುದ್ಧ ಕಾಂಗ್ರೆಸ್ ನಾಯಕರು ಮೌನವಾಗಿದ್ದರ ಹಿಂದಿದೆ ಹೀಗೊಂದು ತಂತ್ರ!
ಚನ್ನಪಟ್ಟಣ: ನಿಖಿಲ್ ವಿರುದ್ಧ ಕಾಂಗ್ರೆಸ್ ನಾಯಕರು ಮೌನವಾಗಿದ್ದರ ಹಿಂದಿದೆ ಹೀಗೊಂದು ತಂತ್ರ!
Follow us
| Updated By: ಗಣಪತಿ ಶರ್ಮ

Updated on:Nov 05, 2024 | 11:07 AM

ರಾಮನಗರ, ನವೆಂಬರ್ 5: ಚನ್ನಪಟ್ಟಣ ಉಪಚುನಾವಣೆಯಲ್ಲಿ ಹೇಗಾದರೂ ಗೆಲುವು ಸಾಧಿಸಬೇಕೆಂದು ಒಂದೆಡೆ ಕಾಂಗ್ರೆಸ್ ನಾಯಕರು ಪಣತೊಟ್ಟಿದ್ದರೆ, ಮೈತ್ರಿ ನಾಯಕರೂ ಸಹ ನಿಖಿಲ್​ ಕುಮಾರಸ್ವಾಮಿಯನ್ನು ಈ ಬಾರಿ ಗೆಲ್ಲಿಸಬೇಕೆಂದು ಓಡಾಡುತ್ತಿದ್ದಾರೆ. ಆದರೆ, ಚುನಾವಣಾ ಪ್ರಚಾರದ ಕಣದಲ್ಲಿ ಎಲ್ಲೂ ಯೋಗೇಶ್ವರ್ ವಿರುದ್ಧ ನಿಖಿಲ್ ಆಗಲೀ, ನಿಖಿಲ್ ವಿರುದ್ಧ ಕಾಂಗ್ರೆಸ್ ನಾಯಕರಾಗಲೀ ವೈಯಕ್ತಿಕ ವಾಗ್ದಾಳಿ ನಡೆಸಿಲ್ಲ! ಕಾಂಗ್ರೆಸ್ ನಾಯಕರಂತೂ ನಿಖಿಲ್ ವಿಚಾರದಲ್ಲಿ ಮಾತನಾಡಲು ಬಹಳ ಎಚ್ಚರಿಕೆ ವಹಿಸುತ್ತಿದ್ದಾರೆ. ಇದಕ್ಕೆ ಬಲವಾದ ಕಾರಣ ಇದೆಯಂತೆ.

ರಾಜಕೀಯ ತಂತ್ರಗಾರಿಕೆಯ ಭಾಗವಾಗಿಯೇ ನಿಖಿಲ್ ಕುಮಾರಸ್ವಾಮಿ ವಿರುದ್ಧ ಯಾವುದೇ ಟೀಕೆ ಮಾಡದಿರಲು, ಮಾತನಾಡದಿರಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಿಖಿಲ್ ಎರಡು ಬಾರಿ ಈಗಾಗಲೇ ಸೋತಿದ್ದಾರೆ. ರಾಮನಗರ ಹಾಗೂ ಮಂಡ್ಯದಲ್ಲಿ ಸೋಲನುಭವಿಸಿದ್ದಾರೆ. ಒಂದು ವೇಳೆ ನಿಖಿಲ್ ಕುಮಾರಸ್ವಾಮಿ ವಿರುದ್ಧ ಮಾತನಾಡಿದರೆ ಅವರ ಬಗ್ಗೆ ಜನರಲ್ಲಿ ಅನುಕಂಪ ಹೆಚ್ಚಾಗುವ ಸಾಧ್ಯತೆ ಇದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.

ನಿಖಿಲ್ ತಂತ್ರಕ್ಕೆ ಕಾಂಗ್ರೆಸ್ ಪ್ರತಿ ತಂತ್ರ

ಮತ್ತೊಂದೆಡೆ, ಪ್ರಚಾರದ ವೇಳೆ ರಾಜಕೀಯವಾಗಿ ನಿಖಿಲ್ ಈವರೆಗೆ ಯಾರನ್ನೂ ಗುರಿಯಾಗಿಸಿಲ್ಲ. ರಾಜಕಾರಣಕ್ಕೆ ಬಂದಾಗಿನಿಂದಲೂ ಹಿರಿಯ ನಾಯಕರ ಬಗ್ಗೆ ಗೌರವ ಇಟ್ಟುಕೊಂಡೇ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಿಗೆ ಗೌರವಯುತವಾಗಿ ಸಂಬೋಧಿಸುತ್ತಾರೆ. ಯಾವುದೇ ಟೀಕೆ ಟಿಪ್ಪಣಿಗಳಿದ್ದರೂ ವಿರೋಧ ಪಕ್ಷದ ಯೋಜನೆ, ಕಾರ್ಯಗಳಿಗೆ ಮಾತ್ರ ಸೀಮಿತವಾಗಿರಿಸಿ ಮಾತನಾಡುತ್ತಾರೆ. ವೈಯಕ್ತಿಗವಾಗಿ ನಿಖಿಲ್ ಕುಮಾರಸ್ವಾಮಿ ವಯಕ್ತಿವಾಗಿ‌ ಯಾರನ್ನೂ ಟೀಕಿಸಿಲ್ಲ.

ಇದನ್ನೂ ಓದಿ: ಡಿಕೆ ಸುರೇಶ್ ಅಂಬ್ಯುಲೆನ್ಸ್ ಹೇಳಿಕೆಗೆ ಇಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಕೌಂಟರ್

ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ಮೊದಲ ದಿನದಿಂದಲೂ ನಿಖಿಲ್ ಬಹಳ ಪರಿಪಕ್ವವಾಗಿ ಮಾತನಾಡುತ್ತಿದ್ದಾರೆ. ಹೀಗಾಗಿಯೇ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಪಾಳಯ ಮೌನವಾಗಿದೆ. ಜನರ ಅನುಕಂಪ ಯಾವುದೇ ಕಾರಣಕ್ಕೂ ನಿಖಿಲ್ ಪರವಾಗದಂತೆ ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:44 am, Tue, 5 November 24

‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?
ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?
ಅಡುಗೆ ವಿಚಾರಕ್ಕೆ ಜಗಳ; ಜೊತೆಗಿದ್ದವನನ್ನು ರೂಂನಲ್ಲೇ ಹೊಡೆದು ಕೊಂದ ಯುವಕ
ಅಡುಗೆ ವಿಚಾರಕ್ಕೆ ಜಗಳ; ಜೊತೆಗಿದ್ದವನನ್ನು ರೂಂನಲ್ಲೇ ಹೊಡೆದು ಕೊಂದ ಯುವಕ
ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು
ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು
ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿ ಸಾವು
ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿ ಸಾವು
ಚುನಾವಣೆಗೆ ಸಜ್ಜಾದ ಜಾರ್ಖಂಡ್​ನಲ್ಲಿ ಪ್ರಧಾನಿ ಮೋದಿ ಮೊದಲ ರ್ಯಾಲಿ
ಚುನಾವಣೆಗೆ ಸಜ್ಜಾದ ಜಾರ್ಖಂಡ್​ನಲ್ಲಿ ಪ್ರಧಾನಿ ಮೋದಿ ಮೊದಲ ರ್ಯಾಲಿ
ಲೋಕಾಯುಕ್ತ ನೋಟೀಸ್​​ನಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ!
ಲೋಕಾಯುಕ್ತ ನೋಟೀಸ್​​ನಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ!