ಕೆರೆಯಲ್ಲಿ ಮುಳುಗಿ ಸಂಸದ ಬಿ ವೈ ರಾಘವೇಂದ್ರ ಅವರ ಫೋಟೋಗ್ರಾಫರ್ ಸಾವು

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಸಂಸದ ಬಿ ವೈ ರಾಘವೇಂದ್ರ ಅವರ ಫೋಟೋಗ್ರಾಫರ್ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೆರೆಯಲ್ಲಿ ಮುಳುಗಿ ಸಂಸದ ಬಿ ವೈ ರಾಘವೇಂದ್ರ ಅವರ ಫೋಟೋಗ್ರಾಫರ್ ಸಾವು
ಪ್ರಸನ್ನ ಭಟ್, ಮೃತ ಯುವಕImage Credit source: raghavendra photographer
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jan 01, 2023 | 10:57 PM

ರಾಮನಗರ: ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ (BY Raghavendra) ಅವರ ಫೋಟೋಗ್ರಾಫರ್ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಮನಗರ(ramanagara) ಜಿಲ್ಲೆ ಕನಕಪುರ ತಾಲೂಕಿನ ಮಾವತ್ತೂರಿನಲ್ಲಿ ನಡೆದಿದೆ. ಪ್ರಸನ್ನ ಭಟ್  ಮೃತ ವ್ಯಕ್ತಿ. ಇಂದು (ಜನವರಿ 01) ಸಂಜೆ ಕಾರಿನಲ್ಲಿ ಸ್ನೇಹಿತರ ಜೊತೆ ಬಂದಿದ್ದ ಮೃತ ಪ್ರಸನ್ನ ಭಟ್, ಮಾವತ್ತೂರು‌ ಕೆರೆಯಲ್ಲಿ (Mavathur Lake) ಈಜಾಡಲು  ಹೋಗಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ನ್ಯೂ ಇಯರ್ ಎಫೆಕ್ಟ್: ಶಿವಗಂಗೆ ಬೆಟ್ಟದಲ್ಲಿ ಕುಡಿದ ಮತ್ತಲ್ಲಿ ಆಯತಪ್ಪಿ ಬಿದ್ದು ವ್ಯಕ್ತಿ ದುರ್ಮರಣ

ಶಿವಮೊಗ್ಗ ಜಿಲ್ಲೆ ಹೊಸನಗರ ನಿವಾಸಿಯಾಗಿರುವ ಪ್ರಸನ್ನ ಭಟ್ (26), ಸಂಸದ ಬಿ ವೈ ರಾಘವೇಂದ್ರ ಅವರ ಫೋಟೋಗ್ರಾಫರ್ ಆಗಿದ್ದರು. ಕಾರಿನಲ್ಲಿ ಸ್ನೇಹಿತರ ಜೊತೆ ಮಾವತ್ತೂರು‌ ಕೆರೆ ಬಂದಿದ್ದು, ಈಜಾಡುವ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದು ಕನಕಪುರ ಗಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ‌ಪರೀಕ್ಷೆಗೆ ದಯಾನಂದ ಸಾಗರ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಆಯತಪ್ಪಿ ಬಿದ್ದು ಯುವಕ ಸಾವು

ಬೆಂಗಳೂರಿನ ಕೊಟ್ಟಿಗೆ ಪಾಳ್ಯದಲ್ಲೂ ಯುವಕರ ಗುಂಪು, ಪಾರ್ಟಿಗೆ ರೆಡಿಯಾಗಿತ್ತು. ಆದ್ರೆ, ಪಾರ್ಟಿ ಆರಂಭವಾಗೋ ಮುನ್ನ ಯುವಕರ ಗುಂಪಿನಲ್ಲಿದ್ದವನ ಪ್ರಾಣ ಹಾರಿಹೋಗಿದೆ. ಒಡಿಶಾ ಮೂಲದ 29 ವರ್ಷದ ಬಾಪಿ ಎಂಬಾತ ಕೊಟ್ಟಿಗೆಪಾಳ್ಯದ ಮಲ್ಟಿ ಸ್ಟೋರಿಡ್ ಬಿಲ್ಡಿಂಗ್‌ನಿಂದ ಪಕ್ಕದ ಬಿಲ್ಡಿಂಗ್‌ಗೆ ಹಾರಲು ಹೋಗಿದ್ದಾನೆ. 10.30ಕ್ಕೆ ಮನೆಗೆ ಫುಲ್ ನಶೆಯಲ್ಲಿ ಬಂದವನೇ ಪಕ್ಕದ ಬಿಲ್ಡಿಂಗ್‌ನಲ್ಲಿ ಸ್ನೇಹಿತರು ಪಾರ್ಟಿ ಮಾಡ್ತಿದ್ದನ್ನ ನೋಡಿದ್ದಾನೆ. ಬಳಿಕ ಜಂಪ್ ಮಾಡಿ ಸ್ನೇಹಿತರ ಎದುರೇ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾನೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:38 pm, Sun, 1 January 23