AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್: ಮತ್ತಷ್ಟು ದುಬಾರಿಯಾಗಲಿದೆ ಅಕ್ಕಿ, ಎಷ್ಟು ಗೊತ್ತಾ?

ರಾಜ್ಯದಲ್ಲಿ ಮಳೆ ಕೊರತೆ ಮತ್ತು ಕಚ್ಚಾ ವಸ್ತುಗಳ ಅಭಾವದಿಂದ ಅಕ್ಕಿ ದರ ಮತ್ತೊಮ್ಮೆ ಏರಿಕೆಯಾಗಿದೆ. ಅಷ್ಟೇ ಅಲ್ಲದೆ ಜುಲೈ ಎರಡನೇ ವಾರದಲ್ಲಿ ಮತ್ತೊಮ್ಮೆ ದರ ಏರಿಕೆ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅಕ್ಕಿ ಕೊರತೆ ಮತ್ತು ರಫ್ತು ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಗ್ರಾಹಕರು ಈ ಬೆಲೆ ಏರಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್: ಮತ್ತಷ್ಟು ದುಬಾರಿಯಾಗಲಿದೆ ಅಕ್ಕಿ, ಎಷ್ಟು ಗೊತ್ತಾ?
ಅಕ್ಕಿ Image Credit source: tv9 kannada
ಕಿರಣ್​ ಸೂರ್ಯ
| Edited By: |

Updated on: Jul 01, 2026 | 9:59 PM

Share

ಮುಖ್ಯಾಂಶಗಳು

  • ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಶಾಕ್
  • ಇಂದಿನಿಂದಲೇ ಹೊಸ ಅಕ್ಕಿ ದರ ಜಾರಿ
  • ಅಕ್ಕಿ ದರ ಏರಿಕೆಗೆ ಗ್ರಾಹಕರು ಬೇಸರ

ಬೆಂಗಳೂರು, ಜುಲೈ 01: ರಾಜ್ಯದಲ್ಲಿ ಉಂಟಾಗಿರುವ ಮಳೆ (Rain) ಕೊರತೆ ಹಾಗೂ ಕಚ್ಚಾ ವಸ್ತುಗಳ ಅಭಾವದಿಂದಾಗಿ ಅಕ್ಕಿ (Rice) ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ತಿಂಗಳಷ್ಟೇ ಪ್ರತಿ ಕೆಜಿ ಅಕ್ಕಿ ಬೆಲೆಯಲ್ಲಿ 3 ರಿಂದ 5 ರೂಪಾಯಿಯಷ್ಟು ಹೆಚ್ಚಳವಾಗಿತ್ತು. ಆದರೆ, ಇಂದಿನಿಂದ ಅಕ್ಕಿ ದರ ಮತ್ತೊಮ್ಮೆ ಏರಿಕೆಯಾಗಿದ್ದು, ಸಾಮಾನ್ಯ ತಳಿಯ ಅಕ್ಕಿ ಬೆಲೆ ಕೆಜಿಗೆ 5 ರೂ ಹಾಗೂ ಗುಣಮಟ್ಟದ ಅಕ್ಕಿ ಬೆಲೆ ಕೆಜಿಗೆ 10 ರೂಪಾಯಿಯಷ್ಟು ದುಬಾರಿಯಾಗಿದೆ.

ಹೊಸ ಅಕ್ಕಿಯ ದರ ಇಂದಿನಿಂದಲೇ ಜಾರಿ

ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಸಾಮಾನ್ಯ ಅಕ್ಕಿ ಚೀಲದ (ಕ್ವಿಂಟಾಲ್/ಮೂಟೆ) ಮೇಲೆ 130 ರೂಪಾಯಿ ಹಾಗೂ ಗುಣಮಟ್ಟದ ಅಕ್ಕಿ ಚೀಲದ ಮೇಲೆ 260 ರೂಪಾಯಿವರೆಗೆ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಹೊಸ ಅಕ್ಕಿಯ ದರ ಇಂದಿನಿಂದಲೇ ಜಾರಿಗೆ ಬಂದಿದ್ದು, ಹೋಲ್‌ಸೇಲ್ ದರದಲ್ಲಿ ಕೆಜಿಗೆ 5 ರಿಂದ 10 ರೂ ಏರಿಕೆಯಾಗಿದ್ದರೆ, ಚಿಲ್ಲರೆ ಮಾರುಕಟ್ಟೆಗೆ ತಲುಪುವಷ್ಟರಲ್ಲಿ ಗ್ರಾಹಕರಿಗೆ ಪ್ರತಿ ಕೆಜಿಗೆ 15 ರಿಂದ 20 ರೂಪಾಯಿಯಷ್ಟು ಹೊರೆ ಬೀಳಲಿದೆ.

ಜುಲೈನಲ್ಲಿ ಮತ್ತೆ ಏರಿಕೆ ಸಾಧ್ಯತೆ

ಇನ್ನು ಜುಲೈ ಎರಡನೇ ವಾರದಲ್ಲಿ ಅಕ್ಕಿ ದರ ಮತ್ತೊಮ್ಮೆ ಹೆಚ್ಚಾಗಲಿದೆ ಎಂದು ಹೋಲ್‌ಸೇಲ್ ವ್ಯಾಪಾರಿಗಳು ಮುನ್ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಮುಂಗಾರು ಮಳೆ ಸರಿಯಾಗಿ ಆಗದಿರುವುದು ಮತ್ತು ಜಲಾಶಯಗಳಲ್ಲಿ ನೀರಿನ ಕೊರತೆಯಿಂದಾಗಿ ಭತ್ತದ ಇಳುವರಿ ಕುಸಿದಿರುವುದು ಈ ಸತತ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ರಫ್ತು ಪ್ರಕ್ರಿಯೆಯೂ ಈ ಬೆಲೆ ಏರಿಕೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ.

ಬೇಸರ ವ್ಯಕ್ತಪಡಿಸುತ್ತಿರುವ ಗ್ರಾಹಕರು

ಪ್ರಸ್ತುತ ಭಾರತದಿಂದ ಶ್ರೀಲಂಕಾಕ್ಕೆ ಭಾರಿ ಪ್ರಮಾಣದಲ್ಲಿ ಅಕ್ಕಿ ಸರಬರಾಜಾಗುತ್ತಿದ್ದು, ಅಲ್ಲಿಂದ ಅದು ಬೇರೆ ಬೇರೆ ದೇಶಗಳಿಗೆ ಮರು ರಫ್ತಾಗುತ್ತಿದೆ. ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ, ಪ್ರಮುಖವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ಕಿಯ ತೀವ್ರ ಕೊರತೆ ಎದುರಾಗಿದೆ. ಈ ಕುರಿತು ಆತಂಕ ವ್ಯಕ್ತಪಡಿಸಿರುವ ಗ್ರಾಹಕರು, ಅಕ್ಕಿ ಮೂಟೆಯೊಂದಕ್ಕೆ ಈಗಾಗಲೇ 250 ರಿಂದ 300 ರೂಪಾಯಿವರೆಗೆ ಹೆಚ್ಚುವರಿ ಹಣ ನೀಡಬೇಕಾಗಿ ಬಂದಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮತ್ತೊಂದು ಬೆಲೆ ಏರಿಕೆ ಬಿಸಿ: ಗ್ಯಾಸ್ ಬೆನ್ನಲ್ಲೇ ಗಗನಕ್ಕೇರಿದ ಅಕ್ಕಿ ದರ, ಕೆಜಿಗೆ 10 ರಿಂದ 20 ರೂ. ಹೆಚ್ಚಳ

ಕೇವಲ ಎರಡು ತಿಂಗಳ ಅವಧಿಯಲ್ಲಿ ಎರಡು ಬಾರಿ ದರ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗಲಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಮಮಂದಿರದ ಹುಂಡಿ ಲೂಟಿ: ಆರೋಪಿಗಳ ಬಳಿ ಇದ್ದ ಹಣ ಜಪ್ತಿ
ರಾಮಮಂದಿರದ ಹುಂಡಿ ಲೂಟಿ: ಆರೋಪಿಗಳ ಬಳಿ ಇದ್ದ ಹಣ ಜಪ್ತಿ
ಪಿಚ್ಚರ್ ಚಿತ್ರದ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್; ಬರ್ತಿವೆ ಭರ್ಜರಿ ಆಫರ್ಸ್
ಪಿಚ್ಚರ್ ಚಿತ್ರದ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್; ಬರ್ತಿವೆ ಭರ್ಜರಿ ಆಫರ್ಸ್
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ವಿ ಸೋಮಣ್ಣ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ವಿ ಸೋಮಣ್ಣ
ಮೊಮ್ಮಕ್ಕಳನ್ನು ಹೇಗೆ ಸಾಕಲಿ’: ಗೋಳಾಡಿದ ಬೀದಿ ವ್ಯಾಪಾರಿ ಅಜ್ಜಿ
ಮೊಮ್ಮಕ್ಕಳನ್ನು ಹೇಗೆ ಸಾಕಲಿ’: ಗೋಳಾಡಿದ ಬೀದಿ ವ್ಯಾಪಾರಿ ಅಜ್ಜಿ
ಸೋಶಿಯಲ್ ಮೀಡಿಯಾ ಹಿರೋ ಆಗಬೇಕು ಅನ್ಕೊಂಡಿದ್ದಿಯಾ? ರೌಡಿಗೆ ಕಮಿಷನರ್ ವಾರ್ನ್
ಸೋಶಿಯಲ್ ಮೀಡಿಯಾ ಹಿರೋ ಆಗಬೇಕು ಅನ್ಕೊಂಡಿದ್ದಿಯಾ? ರೌಡಿಗೆ ಕಮಿಷನರ್ ವಾರ್ನ್
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ರಾಮಮಂದಿರ ದೇಣಿಗೆ ಕಳ್ಳತನ ಕೇಸ್​: ಅನಧಿಕೃತ ಕಾಣಿಕೆ ಹುಂಡಿಗಳು ಪತ್ತೆ
ರಾಮಮಂದಿರ ದೇಣಿಗೆ ಕಳ್ಳತನ ಕೇಸ್​: ಅನಧಿಕೃತ ಕಾಣಿಕೆ ಹುಂಡಿಗಳು ಪತ್ತೆ
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ