3 ತಿಂಗಳಿಂದ ಆಂಬ್ಯುಲೆನ್ಸ್​ ನೌಕರರ ವೇತನ ವಿಳಂಬ: ಮತ್ತೆ ಹೋರಾಟಕ್ಕೆ ಮುಂದಾದ 108 ಸಿಬ್ಬಂದಿ

ಕರ್ನಾಟಕದ 108 ಆ್ಯಂಬುಲೆನ್ಸ್ ನೌಕರರು ಮೂರು ತಿಂಗಳಿನಿಂದ ಸಂಬಳ ಪಡೆಯದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶನಿವಾರದೊಳಗೆ ಸಂಬಳ ಬಿಡುಗಡೆ ಮಾಡದಿದ್ದರೆ ಮುಷ್ಕರ ನಡೆಸುವುದಾಗಿ ಎಚ್ಚರಿಸಿದ್ದಾರೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಸಂಬಳ ಪಾವತಿಯಲ್ಲಿ ವಿಳಂಬವಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

3 ತಿಂಗಳಿಂದ ಆಂಬ್ಯುಲೆನ್ಸ್​ ನೌಕರರ ವೇತನ ವಿಳಂಬ: ಮತ್ತೆ ಹೋರಾಟಕ್ಕೆ ಮುಂದಾದ 108 ಸಿಬ್ಬಂದಿ
3 ತಿಂಗಳಿಂದ ಆಂಬ್ಯುಲೆನ್ಸ್​ ನೌಕರರ ವೇತನ ವಿಳಂಬ: ಮತ್ತೆ ಹೋರಾಟಕ್ಕೆ ಮುಂದಾದ 108 ಸಿಬ್ಬಂದಿ
Follow us
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ

Updated on:Nov 13, 2024 | 5:28 PM

ಬೆಂಗಳೂರು, ನವೆಂಬರ್​ 13: ತಮ್ಮ ಪ್ರಾಣವನ್ನೇ ಪಣಕ್ಕಿಡುವ ಸಿಬ್ಬಂದಿ, ಉಸಿರು ಹೋಗುವ ಜೀವಗಳಿಗೆ ಮರುಜನ್ಮ ನೀಡುವ ಜೀವಗಳು. ರಸ್ತೆಗಳಲ್ಲಿ ಸೈರನ್ ಹಾಕಿ ಶರವೇಗದಲ್ಲಿ ಆಸ್ಪತ್ರೆಗೆ ಸಾಗಿಸುವ ಈ ರಕ್ಷಕರು, ಈಗ ತಮ್ಮದೇ ಬದುಕಿಗಾಗಿ ಹೋರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ತಿಂಗಳಿನಿಂದ ಮತ್ತೆ 108 ಆಂಬ್ಯುಲೆನ್ಸ್​ (108 Ambulance) ನೌಕರರಿಗೆ ಆರೋಗ್ಯ ಇಲಾಖೆ ಸಂಬಳವೇ ನೀಡಿಲ್ಲ. ಶನಿವಾರದೊಳಗೆ ವೇತನ ನೀಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮತ್ತೆ ಹೋರಾಟಕ್ಕೆ ಮುಂದಾದ ಆಂಬ್ಯುಲೆನ್ಸ್ ಸಿಬ್ಬಂದಿಗಳು 

ಹೌದು. 108 ಆಂಬ್ಯುಲೆನ್ಸ್​ ನೌಕರರಿಗೆ ಆರೋಗ್ಯ ಇಲಾಖೆ ಮತ್ತೆ ಸಂಬಳ ನೀಡಿಲ್ಲ. ಹಿಗಾಗಿ ಸಂಬಳ ನೀಡದ ಹಿನ್ನೆಲೆ ಸಿಬ್ಬಂದಿಗಳು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಶನಿವಾರದೊಳಗೆ ವೇತನ ನೀಡದಿದ್ದರೆ ಸೇವೆಗೆ ಹಾಜರಾಗದಿರಲು ನೌಕರರು ನಿರ್ಧರಿಸಿದ್ದಾರೆ. ನಾಳೆ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ವೇತನಕ್ಕಾಗಿ ಮುಂದುವರಿದ ‘108 ಆಂಬ್ಯುಲೆನ್ಸ್’ ಸಿಬ್ಬಂದಿ ಹೋರಾಟ; ಬೀದಿಗಿಳಿದು ಪ್ರತಿಭಟಿಸುವ ಎಚ್ಚರಿಕೆ

ಆರೋಗ್ಯ ಕವಚ ಯೋಜನೆಯಲ್ಲಿ ಸುಮಾರು ಎರಡು ವರ್ಷಗಳಿಂದ ವೇತನದಲ್ಲಿ ಅನೇಕ ಸಮಸ್ಯೆ ಉಂಟಾಗಿದ್ದು ಹಲವು ಬಾರಿ ಸರ್ಕಾರ ಮತ್ತು ಸಂಸ್ಥೆ ಹಾಗೂ ಸಂಘಟನೆಗಳು ಸಭೆ ಮಾಡಿದರೂ ಸಹ ವೇತನದ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಸಂಘಟನೆಯ ವತಿಯಿಂದ ನ್ಯಾಯಾಲಯದ ಮೊರೆ ಹೋಗಿದ್ದು ಘನ ನ್ಯಾಯಾಲಯವು ಸೆಪ್ಟೆಂಬರ್​ 12ರಂದು ಮಧ್ಯಂತರ ಆದೇಶ ನೀಡಿತ್ತು.

ನ್ಯಾಯಾಲಯದ ಆದೇಶವನ್ನು ಮೂರು ಸಂಘಟನೆಯ ಸರ್ವ ಸದಸ್ಯರು ಸ್ವೀಕರಿಸಿದ್ದರೂ ಸಹ ಸಂಸ್ಥೆ ನಮಗೆ ಮೂರು ತಿಂಗಳಿನಿಂದ ವೇತನ ನೀಡಿಲ್ಲ. ಆ ಮೂಲಕ ಮೇಲ್ನೋಟಕ್ಕೆ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿರುವುದಾಗಿ ಸಂಘಟನೆ ವತಿಯಿಂದ ಸರ್ಕಾರದ ಅಧಿಕಾರಿಗಳ ಹತ್ತಿರ ಮನವಿ ಮಾಡಿದಾಗ ಸರ್ಕಾರದ ಅಧಿಕಾರಿಗಳು ನಮ್ಮ ಕಡೆಯಿಂದ ಜಿ.ವಿ.ಕೆ ಸಂಸ್ಥೆಯವರಿಗೆ ಸಂಪೂರ್ಣ ಅನುದಾನ ನೀಡಿರುತ್ತೇವೆ ಹಾಗಾಗಿ ನಮಗೆ ಯಾವುದೇ ಸಂಬಂಧ ಇರುವುದಿಲ್ಲ ಎನ್ನುವ ಉಡಾಫೆ ಉತ್ತರ ನೀಡಲಾಗಿತ್ತು.

ನಂತರ ನಾವುಗಳು ಸಂಸ್ಥೆಯ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡರೆ ಸರ್ಕಾರದಿಂದ ಹಣ ಬಂದಿಲ್ಲ ಎಂದು ಹೇಳುತ್ತಿದ್ದು, ಮೂರು ತಿಂಗಳು ಕಳೆದು ನಾಲ್ಕನೇ ತಿಂಗಳ ಮಧ್ಯಭಾಗವಾದರೂ ಸಹ ರಾಜ್ಯದ ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದು ಇಲ್ಲಿಯವರೆಗೂ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದೇವೆ.

ಇದನ್ನೂ ಓದಿ: ಇಂದಿನಿಂದ ಆಂಬ್ಯುಲೆನ್ಸ್​ ಸೇವೆ ಬಂದ್​​? ರಾಜ್ಯ ಸರ್ಕಾರಕ್ಕೆ ಕಿವಿ ಹಿಂಡಿದ ಕುಮಾರಸ್ವಾಮಿ

ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕರನ್ನು ನೋಡಿಕೊಂಡು ಹೋದರೆ ಕರ್ತವ್ಯ ನಿರತ ಸಿಬ್ಬಂದಿಗಳ ಸಂಸಾರಗಳು ಬೀದಿಗೆ ಬರುವ ಪ್ರಸಂಗ ಉದ್ಭವವಾಗುತ್ತದೆ. ಆದ್ದರಿಂದ ಅನಿವಾರ್ಯ ಕಾರಣಗಳಿಂದ ನವೆಂಬರ್​ 16ರ ರಾತ್ರಿ 8 ಗಂಟೆಯ ಒಳಗಾಗಿ ಮೂರು ತಿಂಗಳ ಸಂಪೂರ್ಣ ವೇತನ ಪಾವತಿ ಆಗದಿದ್ದ ಪಕ್ಷದಲ್ಲಿ ನ. 16ರ ರಾತ್ರಿ 8:00 ಗಂಟೆಯ ನಂತರ ಸಂಪೂರ್ಣ ಮೂರು ತಿಂಗಳ ವೇತನ ಪಾವತಿ ಆಗುವವರೆಗೂ ಎಲ್ಲಾ ಸಿಬ್ಬಂದಿಗಳು ಕರ್ತವ್ಯದಲ್ಲಿ ಇದ್ದುಕೊಂಡು ಯಾವುದೇ ತುರ್ತು ಸೇವೆಯನ್ನು ನೀಡದೆ ಆಂಬ್ಯುಲೆನ್ಸ್​ಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:26 pm, Wed, 13 November 24

‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ