AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಯಡಿಯೂರು ಕೆರೆ ಭೂವಿವಾದ: ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್

1400 ವರ್ಷಗಳ ಹಳೆಯ ಹೊಯ್ಸಳರ ಕಾಲದ್ದು ಎನ್ನಲಾದ ಬೆಂಗಳೂರಿನ ಯಡಿಯೂರು ಕೆರೆ ಭೂ ವಿವಾದದಲ್ಲಿ ಮಹತ್ವದ ಬೆಳವಣಿಗೆ ಆಗಿದ್ದು, ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 56ರಡಿ ಮಹತ್ವದ ತೀರ್ಪು ಪ್ರಕಟಿಸಿದೆ. ಹಾಗಾದ್ರೆ, ಸುಪ್ರೀಂಕೋರ್ಟಿನ ತೀರ್ಪಿನಲ್ಲೇನಿದೆ? ಏನಿದು ವಿವಾದ? ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನ ಯಡಿಯೂರು ಕೆರೆ ಭೂವಿವಾದ: ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್
ಸುಪ್ರೀಂ ಕೋರ್ಟ್Image Credit source: PTI
ರಮೇಶ್ ಬಿ. ಜವಳಗೇರಾ
|

Updated on: Sep 03, 2026 | 7:22 PM

Share

ನವದೆಹಲಿ, (ಸೆಪ್ಟೆಂಬರ್ 03): ಬೆಂಗಳೂರಿನ ಯಡಿಯೂರು ಕೆರೆ ಭೂವಿವಾದ ಪ್ರಕರಣಕ್ಕ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.  ಯಡಿಯೂರು ಕೆರೆ ಪ್ರದೇಶದ ಜಮೀನಿನ ಸರ್ವೆ ನಂಬರ್‌ಗಳ ಕುರಿತು ಹೊಸದಾಗಿ ತನಿಖೆ ನಡೆಸಲು ಕಂದಾಯ ಅಧಿಕಾರಿಗಳಿಗೆ ಅನುಮತಿ ನೀಡಿದ್ದ ಹೈಕೋರ್ಟ್‌ನ ಆದೇಶ ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್  ಮಹತ್ವದ ತೀರ್ಪು ನೀಡಿದೆ

ಸರ್ವೆ ನಂಬರ್‌ಗಳಿಗೆ ಸಂಬಂಧಿಸಿದ ಹೊಸ ಸರ್ವೆ ಆದೇಶ ರದ್ದುಗೊಳಿಸಿ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್, ಸಚ್‌ದೇವ ಪೀಠ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಸೆಕ್ಷನ್ 56ರಡಿ ಮರುಪರಿಶೀಲನೆಗೆ ಮೂರು ವರ್ಷಗಳ ಕಾಲಮಿತಿ. ಈ ಮೂರು ವರ್ಷಗಳ ಅವಧಿ ಮೀರಿದ ಬಳಿಕ ಅಧಿಕಾರಿಗಳು ಮರು ಪರಿಶೀಲನಾ ಕ್ರಮ ಕೈಗೊಳ್ಳುವಂತಿಲ್ಲ. ಕಾಲಮಿತಿ ಕಾಯ್ದೆ 1963ರ ಪ್ರಕಾರ 3 ವರ್ಷಗಳ ನಿಗದಿತ ಅವಧಿಯನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ಸ್ಪಷ್ಟಪಡಿಸಿ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.

ಇದನ್ನೂ ಓದಿ: ವಿರೋಧ ತೀವ್ರಗೊಳ್ಳುತ್ತಿದ್ದಂತೆಯೇ ನಿಲುವು ಬದಲಿಸಿದ ಸರ್ಕಾರ, ಉದ್ಯಾನವನಗಳ(ಸಂರಕ್ಷಣೆ) ತಿದ್ದುಪಡಿ ವಿಧೇಯಕ ವಾಪಸ್

ಪ್ರಕರಣದ ಹಿನ್ನೆಲೆ ಮತ್ತು ಹೈಕೋರ್ಟ್ ಆದೇಶ

ವಿವಾದದ ಮೂಲ: ಯಡಿಯೂರು ಕೆರೆ ಒತ್ತುವರಿ ಮಾಡಲಾಗಿದೆ ಎಂಬ ದೂರಿನ ಮೇರೆಗೆ, ಕಂದಾಯ ದಾಖಲೆಗಳ ಜಂಟಿ ನಿರ್ದೇಶಕರು/ನೋಂದಣಾಧಿಕಾರಿಗಳು 2014 ರಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 56 ರ ಅಡಿಯಲ್ಲಿ ಹೊಸದಾಗಿ ತನಿಖೆ ನಡೆಸಲು ನೋಟಿಸ್ ನೀಡಿದ್ದರು.

ಏಕಸದಸ್ಯ ಪೀಠದ ಆದೇಶ: ಈ ನೋಟಿಸ್ ಅನ್ನು ಪ್ರಶ್ನಿಸಿ ಭೂಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನ ಏಕಸದಸ್ಯ ಪೀಠವು, ಕಾಯ್ದೆಯ ಪ್ರಕಾರ 3 ವರ್ಷಗಳ ಮಿತಿಯ ನಂತರ ಈ ರೀತಿಯ ಪರಿಷ್ಕರಣಾ ಅಧಿಕಾರವನ್ನು (Revisional Power) ಬಳಸಲು ಬರುವುದಿಲ್ಲ ಎಂದು ನೋಟಿಸ್ ರದ್ದುಗೊಳಿಸಿತ್ತು

ವಿಭಾಗೀಯ ಪೀಠದ ತೀರ್ಪು (2020): ಆದರೆ, ಜನವರಿ 2020 ರಲ್ಲಿ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ತಿರುಚಿ, ಅಧಿಕಾರಿಗಳು ಇನ್ನೂ ಯಾವುದೇ ಅಂತಿಮ ಆದೇಶ ಹೊರಡಿಸದ ಕಾರಣ ಹೊಸದಾಗಿ ತನಿಖೆ ನಡೆಸಲು ಅಧಿಕಾರಿಗಳಿಗೆ ಅನುಮತಿ ನೀಡಿತ್ತು. ಈ ಆದೇಶದ ವಿರುದ್ಧ ಸಲ್ಲಿಕೆಯಾಗಿದ್ದ ಮರುಪರಿಶೀಲನಾ ಅರ್ಜಿಯನ್ನೂ ಹೈಕೋರ್ಟ್ ಜೂನ್ 2023 ರಲ್ಲಿ ವಜಾಗೊಳಿಸಿತ್ತು

ಸುಪ್ರೀಂ ಕೋರ್ಟ್‌ನ ಇತ್ತೀಚಿನ ಮಹತ್ವದ ತೀರ್ಪು

ಹೈಕೋರ್ಟ್ ವಿಭಾಗೀಯ ಪೀಠದ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್‌ದೇವ್ ಅವರ ಪೀಠವು ಈ ಕೆಳಗಿನಂತೆ ಆದೇಶಿಸಿದೆ. ಮೂರು ವರ್ಷಗಳ ಕಾಲಮಿತಿ ಕಡ್ಡಾಯ: ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 56ರ ಅಡಿಯಲ್ಲಿ ಯಾವುದೇ ಆದೇಶ ಅಥವಾ ದಾಖಲೆಗಳನ್ನು ಮರುಪರಿಶೀಲಿಸುವ ಅಧಿಕಾರವನ್ನು ಕಾಯ್ದೆಯಲ್ಲಿ ನಿಗದಿಪಡಿಸಿದ 3 ವರ್ಷಗಳ ಶಾಸನಬದ್ಧ ಅವಧಿಯ ನಂತರ ಚಲಾಯಿಸಲು ಸಾಧ್ಯವಿಲ್ಲ ಎಂದಿದೆ.

ಹೈಕೋರ್ಟ್ ಆದೇಶ ರದ್ದು: ಕೆರೆ ಒತ್ತುವರಿ ತನಿಖೆಯ ನೆಪದಲ್ಲೂ ಕಾನೂನುಬದ್ಧ ಕಾಲಮಿತಿಯನ್ನು ಮೀರಿ ಕಂದಾಯ ಆದೇಶಗಳನ್ನು ಮರುಪರಿಶೀಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.

ನೋಟಿಸ್ ವಜಾ: ಅಧಿಕಾರಿಗಳು 2014 ರಲ್ಲಿ ಜಮೀನು ಮಾಲೀಕರಿಗೆ ನೀಡಿದ್ದ ಹೊಸ ತನಿಖೆಯ ನೋಟಿಸ್ ಅನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಾಗರದಲ್ಲಿ ಬೃಹತ್ ಪಾದಯಾತ್ರೆ
ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಾಗರದಲ್ಲಿ ಬೃಹತ್ ಪಾದಯಾತ್ರೆ
‘ಬೃಂದಾವಿಹಾರಿ’ ಸಿನಿಮಾ ಕತೆ ಬಗ್ಗೆ ರಂಗಾಯಣ ರಘು ಹೇಳಿದ್ದೇನು?
‘ಬೃಂದಾವಿಹಾರಿ’ ಸಿನಿಮಾ ಕತೆ ಬಗ್ಗೆ ರಂಗಾಯಣ ರಘು ಹೇಳಿದ್ದೇನು?
ಚಂದ್ರನ ಮೇಲೆ ಮನೆ ಕಟ್ಟಲಿದೆ ಭಾರತ; ಬೆಂಗಳೂರಿನ ವಿಜ್ಞಾನಿಗಳ 'ಭೀಮ್' ಯೋಜನೆ!
ಚಂದ್ರನ ಮೇಲೆ ಮನೆ ಕಟ್ಟಲಿದೆ ಭಾರತ; ಬೆಂಗಳೂರಿನ ವಿಜ್ಞಾನಿಗಳ 'ಭೀಮ್' ಯೋಜನೆ!
ಕಳುವಾಗಿದ್ದ ಬಂಗಾರ, ಹಣ ರಿಕವರಿ ಮಾಡಿ ಪೊಲೀಸರಿಂದಲೇ ಲೂಟಿ?
ಕಳುವಾಗಿದ್ದ ಬಂಗಾರ, ಹಣ ರಿಕವರಿ ಮಾಡಿ ಪೊಲೀಸರಿಂದಲೇ ಲೂಟಿ?
ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ IAS ಅಧಿಕಾರಿ ಎಸ್ಕೇಪ್ ಆಗಿದ್ದು ಹೇಗೆ?
ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ IAS ಅಧಿಕಾರಿ ಎಸ್ಕೇಪ್ ಆಗಿದ್ದು ಹೇಗೆ?
ಏರೋ ಇಂಡಿಯಾ ಏರ್ ಶೋ 16ನೇ ಆವೃತ್ತಿಯ ದಿನಾಂಕ ಘೋಷಣೆ
ಏರೋ ಇಂಡಿಯಾ ಏರ್ ಶೋ 16ನೇ ಆವೃತ್ತಿಯ ದಿನಾಂಕ ಘೋಷಣೆ
ನೈಸ್ ರಸ್ತೆ ವಿಚಾರದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿಯಿಂದ ಮಹತ್ವದ ತೀರ್ಮಾ‌ನ
ನೈಸ್ ರಸ್ತೆ ವಿಚಾರದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿಯಿಂದ ಮಹತ್ವದ ತೀರ್ಮಾ‌ನ
ರಾಜ್ಯ ಸರ್ಕಾರದಿಂದ ಉದ್ಯಾನವನ ತಿದ್ದುಪಡಿ ಮಸೂದೆ ವಾಪಸ್?
ರಾಜ್ಯ ಸರ್ಕಾರದಿಂದ ಉದ್ಯಾನವನ ತಿದ್ದುಪಡಿ ಮಸೂದೆ ವಾಪಸ್?
ಬೀಗ ಹಾಕಿದ್ದ ಮನೆಗೆ ಕನ್ನ, 40 ಗ್ರಾಂ ಚಿನ್ನ-ಬೆಳ್ಳಿ ಎಗರಿಸಿದ ಖದೀಮರು
ಬೀಗ ಹಾಕಿದ್ದ ಮನೆಗೆ ಕನ್ನ, 40 ಗ್ರಾಂ ಚಿನ್ನ-ಬೆಳ್ಳಿ ಎಗರಿಸಿದ ಖದೀಮರು
ನೇಗಿಲು ಹೊತ್ತು 3ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ ಬಿವೈ ವಿಜಯೇಂದ್ರ
ನೇಗಿಲು ಹೊತ್ತು 3ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ ಬಿವೈ ವಿಜಯೇಂದ್ರ