ಧರ್ಮಸ್ಥಳದ ಆಯುರ್ವೇದಿಕ್ ಶಿಕ್ಷಣ ಸಂಸ್ಥೆಯ ಶಿಷ್ಯೋಪನಯನ

  • TV9 Web Team
  • Published On - 19:18 PM, 22 Dec 2019
ಧರ್ಮಸ್ಥಳದ ಆಯುರ್ವೇದಿಕ್ ಶಿಕ್ಷಣ ಸಂಸ್ಥೆಯ ಶಿಷ್ಯೋಪನಯನ

ಉಡುಪಿ: ಭಾರತೀಯ ಸಂಸ್ಕೃತಿಯಲ್ಲಿ ಗುರುಕುಲ ಪದ್ಧತಿಗೆ ವಿಶೇಷ ಸ್ಥಾನವಿದೆ. ಗುರು ಶಿಷ್ಯ ಸಂಬಂಧಕ್ಕೆ ಹಲವು ಮೌಲ್ಯಯುತ ಉದಾಹರಣೆಗಳಿವೆ. ಅಂದಿನ ಪರಂಪರೆಯನ್ನು ಉಳಿಸುವ ಸಲುವಾಗಿ ಆಯುರ್ವೇದ ಶಿಕ್ಷಣ ಸಂಸ್ಥೆಯೊಂದು ವಿದ್ಯಾರ್ಥಿಗಳಿಹೆ ಶಿಷ್ಯೋಪನಯನ ನೆರವೇರಿಸಿದೆ.

ಗುರು ಬ್ರಹ್ಮ ಗುರು ವಿಷ್ಣು.. ಗುರು ದೇವ ಮಹೇಶ್ವರ.. ಗುರುವಿನ ಗುಲಾಮನಾಗುವ ತನಕ ದೊರೆಯದ್ದನ್ನ ಮುಕುತಿ.. ಹೌದು, ಗೌರು ಮತ್ತು ಶಿಷ್ಯ ಸಂಬಂಧಕ್ಕೆ ಅಂಥಾ ಮಹತ್ವವಿದೆ. ಸನಾತನ ಸಂಸ್ಕೃತಿಯ ಗುರುವಿಗೆ ದೇವರ ಸ್ಥಾನ ನೀಡುವ ಅಪಾರ ಗೌರವವಿದೆ. ರಾಮಾಯಣ ಮಹಾಭಾರತದಿಂದ ಹಿಡಿದು ಇಂದಿಗೂ ಗುರ ಶಿಷ್ಯರ ಸಂಬಂಧಕ್ಕೆ ಮಹತ್ವದ ವ್ಯಾಖ್ಯಾನಗಳಿವೆ.

ಗುರುವಿಗೆ ಗೌರವಿಸಿ ತಮ್ಮನ್ನ ಶಿಷ್ಯರನ್ನಾಗಿ ಸ್ವೀಕರಿಸಿ ಎಂಬ ಶಿಷ್ಯ ನಿವೇದನೆಯ ವಿಶಿಷ್ಠ ಕಾರ್ಯಕ್ರಮವೇ ಶಿಷ್ಯೋಪನಯನ. ಇಂಥಾ ವಿಭಿನ್ನ ಕಾರ್ಯಕ್ರಮವನ್ನ ಧರ್ಮಸ್ಥಳದ ಆಯುರ್ವೇದಿಕ್ ಶಿಕ್ಷಣ ಸಂಸ್ಥೆಗಳು ಕಳೆದ 25 ವರ್ಷಗಳಿಂದ ನಡೆಸ್ತಿವೆ. ಸಂಸ್ಥೆಗಳಿಗೆ ಹೊಸದಾಗಿ ಸೇರ್ಪಡೆಯಾಗುವ ವಿದ್ಯಾರ್ಥಿಗಳನ್ನ, ಗುರುಗಳು ಶಿಷ್ಯರನ್ನಾಗಿ ಅಧಿಕೃತವಾಗಿ ಸ್ವೀಕರಿಸಿದ್ರು.

ಮುಂಜಾನೆ ಶ್ವೇತ ವಸ್ತ್ರಧಾರಿಗಳಾದ ಹೊಸ ವಿದ್ಯಾರ್ಥಿಗಳು ಧನ್ವಂತರೀ ಹೋಮದಲ್ಲಿ ಪಾಲ್ಗೊಳ್ಳುತ್ತಾರೆ. ಪೂರ್ಣಾಹುತಿ ಸಂದರ್ಭದಲ್ಲಿ ವಿದ್ಯಾರ್ಥಿಗಳೂ ಹೋಮಕ್ಕೆ ಹವಿಸ್ಸು ಅರ್ಪಿಸ್ತಾರೆ. ಬಳಿಕ ವಿದ್ಯಾರ್ಥಿಗಳು ಪವಿತ್ರ ಧಾರವನ್ನು ಕಟ್ಟಿಕೊಳ್ಳುತ್ತಾರೆ. ಆ ಬಳಿಕ ಗುರುಗಳ ಆಶೀರ್ವಾದ ಪಡೆಯೋ ಮೂಲಕ ಶಿಷ್ಯೋಪನಯನ ಕಾರ್ಯಕ್ರಮ ಸಂಪನ್ನಗೊಳ್ಳುತ್ತೆ.

ದೇಶದಲ್ಲಿ ಅನಾದಿ ಕಾಲದಿಂದಲೂ ಶಿಕ್ಷಣ ಮತ್ತು ಗುರು ಶಿಷ್ಯ ಸಂಬಂಧಕ್ಕೆ ಬಹಳ ಮೌಲ್ಯಯುತ ಸ್ಥಾನವಿತ್ತು. ಅದನ್ನ ಕಾಪಾಡುವ ಮತ್ತು ಮುಂದಿನ ಜನಾಂಗಕ್ಕೆ ಉಳಿಸುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.