AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಶಿಕಾರಿ ವೇಳೆ ಹಾರಿಸಿದ್ದ ಗುಂಡು ಮಿಸ್​ಫೈರ್; ಅರಣ್ಯ ಪ್ರದೇಶದಲ್ಲಿ ಮಾಜಿ ಗ್ರಾ.ಪಂ. ಸದಸ್ಯ ಸಾವು

ನೊಣಬೂರು, ಅರಳಸುರಳಿ ಬಳಿ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. 12 ಜನರ ಗುಂಪು ಕಾಡಿಗೆ ಬೇಟೆಯಾಡುವುದಕ್ಕೆ ಹೋಗಿತ್ತು. ಈ ವೇಳೆ, ಮಿಸ್​ ಫೈರ್​ ಆಗಿ ಗುಂಡು ತಗುಲಿ ಕಾಂತರಾಜ್​ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಶಿವಮೊಗ್ಗ: ಶಿಕಾರಿ ವೇಳೆ ಹಾರಿಸಿದ್ದ ಗುಂಡು ಮಿಸ್​ಫೈರ್; ಅರಣ್ಯ ಪ್ರದೇಶದಲ್ಲಿ ಮಾಜಿ ಗ್ರಾ.ಪಂ. ಸದಸ್ಯ ಸಾವು
ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕಾಂತರಾಜ್
TV9 Web
| Edited By: |

Updated on:Mar 26, 2022 | 10:36 PM

Share

ಶಿವಮೊಗ್ಗ: ಶಿಕಾರಿ ವೇಳೆ ಹಾರಿಸಿದ್ದ ಗುಂಡು ಮಿಸ್​​ಫೈರ್​ ಆಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ನೊಣಬೂರು ಗ್ರಾಮದಲ್ಲಿ ನಡೆದಿದೆ. ಗುಂಡು ತಗುಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕಾಂತರಾಜ್​ (40) ಸಾವನ್ನಪ್ಪಿದ್ದಾರೆ. ನೊಣಬೂರು, ಅರಳಸುರಳಿ ಬಳಿ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. 12 ಜನರ ಗುಂಪು ಕಾಡಿಗೆ ಬೇಟೆಯಾಡುವುದಕ್ಕೆ ಹೋಗಿತ್ತು. ಈ ವೇಳೆ, ಮಿಸ್​ ಫೈರ್​ ಆಗಿ ಗುಂಡು ತಗುಲಿ ಕಾಂತರಾಜ್​ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಳ್ಳಾರಿ: ಖೋಟಾನೋಟು ಚಲಾವಣೆಗೆ ಯತ್ನ; ಮೂವರ ಬಂಧನ

ಖೋಟಾನೋಟು ಚಲಾವಣೆಗೆ ಯತ್ನ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ ಘಟನೆ ಜೋಳದರಾಶಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. 500 ಮುಖಬೆಲೆಯ ಖೋಟಾನೋಟು ಚಲಾವಣೆ ಮಾಡಲು ಆರೋಪಿಗಳು ಯತ್ನಿಸಿದ್ದರು. ಪಿಡಿ ಹಳ್ಳಿ ಪೊಲೀಸರಿಂದ ಮೂವರು ಆರೋಪಿಗಳ ಬಂಧನ ಮಾಡಲಾಗಿದೆ. ಆಂದ್ರಪ್ರದೇಶದ ಪತ್ತಿಕೊಂಡದ ರಾಘವ, ಗುತ್ತಿಯ ಕಮ್ಮಗಿರಿ, ಹಾಗೂ ರಮೇಶ ಬಂಧಿತ ಆರೋಪಿಗಳು. ಬಂಧಿತರಿಂದ 500 ಮುಖಬೆಲೆಯ 300 ಖೋಟಾನೋಟು ಜಪ್ತಿ ಮಾಡಲಾಗಿದೆ. ಪಿಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮಂಡ್ಯ: ಮೇಲುಕೋಟೆಯ ಕಣಿವೆ ಬಳಿ ಕಾರಿಗೆ ಸರ್ಕಾರಿ ಬಸ್ ಡಿಕ್ಕಿ

ಮೇಲುಕೋಟೆಯ ಕಣಿವೆ ಬಳಿ ಕಾರಿಗೆ ಸರ್ಕಾರಿ ಬಸ್ ಡಿಕ್ಕಿ ಆದ ದುರ್ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ನಡೆದಿದೆ. ಕಾರು ಚಾಲಕ, ಮನ್​ಮುಲ್​ ನಿರ್ದೇಶಕನ ಸ್ಥಿತಿ ಗಂಭೀರವಾಗಿದೆ. ಮನ್​ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರ, ಕಾರು ಚಾಲಕನಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೇಲುಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನೆಲಮಂಗಲ: ಕಿಡಿಗೇಡಿಗಳಿಂದ ಹುಲ್ಲಿನ ಬಣವೆಗೆ ಬೆಂಕಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಕಿಡಿಗೇಡಿಗಳಿಂದ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಹೊಸಪಾಳ್ಯದ ತಿಮ್ಮಪ್ಪಗೌಡ ಅವರಿಗೆ ಸೇರಿದ ಹುಲ್ಲಿನ ಬಣವೆಗೆ ಬೆಂಕಿ ಹಾಕಲಾಗಿದೆ. ಒಂದು ಲಕ್ಷ ಮೌಲ್ಯದ ಬೆಲೆಬಾಳುವ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿದೆ. ನೆಲಮಂಗಲ ಅಗ್ನಿಶಾಮಕ ದಳದಿಂದ ಅಗ್ನಿ ನಂದಿಸುವ ಕಾರ್ಯ ನಡೆದಿದೆ. ಮನೆಯಲ್ಲಿ ಸಾಕಿದ ಹಸುಗಳಿಗೂ ಹುಲ್ಲು ಇಲ್ಲದೆ ರೈತ ತಿಮ್ಮಪ್ಪಗೌಡ ಕಂಗಾಲಾಗಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: BBMP ಕಸದ ಲಾರಿ ಹರಿದು ಬಾಲಕಿ ಸಾವು ಪ್ರಕರಣ: ಕರ್ತವ್ಯ ನಿರ್ವಹಣೆಯಲ್ಲಿ ವಿಫಲ ಹಿನ್ನೆಲೆ ಎಇಇ ಅಶೋಕ್ ಬಾಗಿ ಬಿಡುಗಡೆ

ಇದನ್ನೂ ಓದಿ: Golden Hour ಎಂಬ ಅಮೂಲ್ಯ ಕ್ಷಣವೂ ಇಲ್ಲದಂತೆ ಹಾರಿಹೋದ ಪ್ರಾಣಪಕ್ಷಿ! ಬೈಯಪ್ಪನಹಳ್ಳಿ ಜಿಮ್‌ನಲ್ಲಿ ಕುಸಿದುಬಿದ್ದು ಮಹಿಳೆ ಸಾವು

Published On - 8:10 pm, Sat, 26 March 22