ಚುನಾವಣಾ ಬಾಂಡ್ ಕೇಸ್​: ನಳಿನ್ ಕುಮಾರ್ ಕಟೀಲ್​ಗೆ ರಿಲೀಫ್ ನೀಡಿದ ಸುಪ್ರೀಂಕೋರ್ಟ್

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧದ ಚುನಾವಣಾ ಬಾಂಡ್ ಸುಲಿಗೆ ಆರೋಪ ಪ್ರಕರಣದ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಅಸ್ಪಷ್ಟ ದೂರು ಎಂದು ಹೇಳಿ ಮೇಲ್ಮನವಿಯನ್ನು ವಜಾಗೊಳಿಸಿದೆ. ಆ ಮೂಲಕ ನಳಿನ್ ಕುಮಾರ್ ಕಟೀಲ್​​ಗೆ ರಿಲೀಫ್ ಸಿಕ್ಕಿದೆ.

ಚುನಾವಣಾ ಬಾಂಡ್ ಕೇಸ್​: ನಳಿನ್ ಕುಮಾರ್ ಕಟೀಲ್​ಗೆ ರಿಲೀಫ್ ನೀಡಿದ ಸುಪ್ರೀಂಕೋರ್ಟ್
ಚುನಾವಣಾ ಬಾಂಡ್ ಕೇಸ್​: ನಳಿನ್ ಕುಮಾರ್ ಕಟೀಲ್​ಗೆ ರಿಲೀಫ್ ನೀಡಿದ ಸುಪ್ರೀಂಕೋರ್ಟ್
Follow us
Ramesha M
| Updated By: ಗಂಗಾಧರ​ ಬ. ಸಾಬೋಜಿ

Updated on: Feb 03, 2025 | 9:41 PM

ಬೆಂಗಳೂರು, ಫೆಬ್ರವರಿ 03: ಚುನಾವಣಾ ಬಾಂಡ್ (Electoral Bonds) ಹೆಸರಿನಲ್ಲಿ ಸುಲಿಗೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್​ ವಿರುದ್ಧದ ಎಫ್​ಐಆರ್​ ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಆ ಮೂಲಕ ಇದೀಗ ನಳಿನ್ ಕುಮಾರ್ ಕಟೀಲುಗೆ ಬಿಗ್ ರಿಲೀಫ್ ನೀಡಲಾಗಿದೆ.

ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠವು ಜನಾಧಿಕಾರ ಸಂಘರ್ಷ ಪರಿಷತ್ತಿನ ಆದರ್ಶ ಅಯ್ಯರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಇಂದು ವಿಚಾರಣೆ ಮಾಡಿದ್ದು, ಅಸ್ಪಷ್ಟ ದೂರು, ಸಂಪೂರ್ಣ ಊಹೆಯ ದೂರು ಎಂದು ಹೇಳಿದೆ. ಆ ಮೂಲಕ ಮೇಲ್ಮನವಿಯನ್ನು ವಜಾಗೊಳಿಸಿದೆ.

ಇದನ್ನೂ ಓದಿ: ಚುನಾವಣಾ ಬಾಂಡ್ ಕೇಸ್: ನಳಿನ್ ಕುಮಾರ್ ಕಟೀಲ್​ ವಿರುದ್ಧದ ಎಫ್​ಐಆರ್​ಗೆ ಹೈಕೋರ್ಟ್ ತಡೆಯಾಜ್ಞೆ

ಚುನಾವಣಾ ಬಾಂಡ್‌ ಮೂಲಕ ಕೋಟ್ಯಂತರ ರೂ. ಹಣ ಸುಲಿಗೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿ ಹಲವರ ವಿರುದ್ಧ ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು.

ಚುನಾವಣಾ ಬಾಂಡ್‌ಗಳ ಸೋಗಿನಲ್ಲಿ ಸುಲಿಗೆ ದಂಧೆ ನಡೆಸಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಸಂಘಟನೆಯ ಆದರ್ಶ ಅಯ್ಯರ್ ಎಂಬುವವರು ದೂರು ನೀಡಿದ್ದರು.

ಇದನ್ನೂ ಓದಿ: ಚುನಾವಣಾ ಬಾಂಡ್‌ ಅಕ್ರಮ: ನಿರ್ಮಲಾ ಸೀತಾರಾಮನ್‌, ಕಟೀಲ್​ ವಿರುದ್ಧದ ಎಫ್‌ಐಆರ್ ರದ್ದು

ಈ ಪ್ರಕರಣ ರದ್ದು ಕೋರಿ ಇತ್ತೀಚೆಗೆ ನಳೀನ್ ಕುಮಾರ್ ಕಟೀಲ್​​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಸೆಪ್ಟೆಂಬರ್ 30 ರಂದು ಅರ್ಜಿ ವಿಚಾರಣೆ ಮಾಡಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ತನಿಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿತ್ತು. ಹಾಗಾಗಿ ನಳೀನ್ ಕುಮಾರ್ ಕಟೀಲ್ ಮತ್ತು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೇರಿದಂತೆ ಇನ್ನಿತರರಿಗೂ ಬಿಗ್​ ರಿಲೀಫ್ ನೀಡಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಚಾಂಪಿಯನ್ಸ್ ಟ್ರೋಫಿ ಜೆರ್ಸಿ ಅನಾವರಣಗೊಳಿಸಿದ ಪಾಕಿಸ್ತಾನ್
ಚಾಂಪಿಯನ್ಸ್ ಟ್ರೋಫಿ ಜೆರ್ಸಿ ಅನಾವರಣಗೊಳಿಸಿದ ಪಾಕಿಸ್ತಾನ್
Delhi Result Live: ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ನೇರ ಪ್ರಸಾರ
Delhi Result Live: ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ನೇರ ಪ್ರಸಾರ
ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ