ಇದು ನನಗೆ ಅನಿರೀಕ್ಷಿತವಾಗಿ ಬಂದ ಅವಕಾಶ: ಗೆದ್ದು ತೋರಿಸ್ತೇನೆ ಎಂದ ಕೋಲಾರ ಕೈ ಅಭ್ಯರ್ಥಿ

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್, ಅನಿರೀಕ್ಷಿತವಾಗಿ ಕೊಟ್ಟ ಅವಕಾಶವನ್ನು ಬೇಡ ಅನ್ನೋಕೆ ಆಗಲಿಲ್ಲ. ಇದು ಒಳ್ಳೆಯ ಅವಕಾಶ ಗೆದ್ದು ತೋರಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಹೇಳಿದ್ದಾರೆ. ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವೆ ಎಂದು ಹೇಳಿದ್ದಾರೆ.​

ಇದು ನನಗೆ ಅನಿರೀಕ್ಷಿತವಾಗಿ ಬಂದ ಅವಕಾಶ: ಗೆದ್ದು ತೋರಿಸ್ತೇನೆ ಎಂದ ಕೋಲಾರ ಕೈ ಅಭ್ಯರ್ಥಿ
ಗೌತಮ್ ಕುಮಾರ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Mar 30, 2024 | 2:55 PM

ಬೆಂಗಳೂರು, ಮಾರ್ಚ್​ 30: ಅನಿರೀಕ್ಷಿತವಾಗಿ ಕೊಟ್ಟ ಅವಕಾಶವನ್ನು ಬೇಡ ಅನ್ನೋಕೆ ಆಗಲಿಲ್ಲ. ಇದು ಒಳ್ಳೆಯ ಅವಕಾಶ ಗೆದ್ದು ತೋರಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ (kv gautam) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕೋಲಾರ ಕ್ಷೇತ್ರದ ಟಿಕೆಟ್ ಬೇಕು ಎಂದು ಕೇಳಿರಲಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ನನ್ನನ್ನು ಕರೆದು ಕೇಳಿದಾಗ ನಾನು ಬೇಡ ಅನ್ನಲಿಲ್ಲ. ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವೆ ಎಂದು ಹೇಳಿದ್ದಾರೆ.

ಕೋಲಾರ ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ವೈಮನಸ್ಸು ಇರುವುದು ನಿಜ. ಅದನ್ನು ಮುಚ್ಚಿಡುವ ವಿಷಯ ಅಲ್ಲ, ಎಲ್ಲರಿಗೂ ಗೊತ್ತಿರುವ ವಿಚಾರ. ನನ್ನನ್ನು ಯಾರೂ ವಿರೋಧ ಮಾಡುವುದಿಲ್ಲವೆನ್ನುವ ಭಾವನೆಯಿದೆ. ಕೋಲಾರ ಜಿಲ್ಲೆಯ ಎಲ್ಲಾ ಮುಖಂಡರ ಜೊತೆ ನಾನು ಚೆನ್ನಾಗಿದ್ದೇನೆ ಎಂದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ 2024: ಕೋಲಾರ ಕಾಂಗ್ರೆಸ್​ ಅಭ್ಯರ್ಥಿಯಾಗಿ ಮಾಜಿ ಮೇಯರ್​ ಪುತ್ರ ಗೌತಮ್ ಕಣಕ್ಕೆ

ರಮೇಶ್ ಕುಮಾರ್​ ನನ್ನ ತಂದೆ ಜೊತೆ ಒಡನಾಟ ಇಟ್ಟುಕೊಂಡಿದ್ದರು. ನನ್ನ ತಂದೆ ಬಗ್ಗೆ ರಮೇಶ್ ಕುಮಾರ್​ಗೆ ಅಪಾರವಾದ ಗೌರವವಿದೆ. ಸಚಿವ ಮುನಿಯಪ್ಪ ಜೊತೆ 25 ವರ್ಷಗಳಿಂದಲೂ ಒಡನಾಟವಿದೆ. ರಾಜ್ಯದಲ್ಲಿ ಮುನಿಯಪ್ಪನವರೇ ಎಡಗೈ ಸಮುದಾಯದ ನಾಯಕ. ಕೆ.ಹೆಚ್.ಮುನಿಯಪ್ಪ ಜೊತೆ ನಿರಂತರವಾಗಿ ಸಂಕರ್ಪದಲ್ಲಿ ಇದ್ದರು ಎಂದು ಹೇಳಿದ್ದಾರೆ.

ಕೋಲಾರ ಕಾಂಗ್ರೆಸ್​​ನ ಭದ್ರಕೋಟೆ. 100% ಗೆಲ್ಲುವ ವಿಶ್ವಾಸವಿದೆ. ಈಗಿರುವ ವೈಮನಸ್ಸು ತಾತ್ಕಾಲಿಕ. ನನ್ನ ವಿಚಾರ ಬಂದಾಗ ಮುನಿಯಪ್ಪ, ರಮೇಶ್ ಕೆಲಸ ಮಾಡುತ್ತಾರೆಂಬ ವಿಶ್ವಾಸವಿದೆ. ಜೆಡಿಎಸ್ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ಆದರೆ ಕೋಲಾರದಲ್ಲಿ‌ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ ಎಂದರು.

ಇದನ್ನೂ ಓದಿ: ಬಿಜೆಪಿ ಜತೆ ಸಮನ್ವಯ ಸಭೆ ಬಳಿಕ ಜೆಡಿಎಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಪ್ರಕಟ, ಕೋಲಾರ ಅಭ್ಯರ್ಥಿ ಯಾರು?

ನಾನೊಬ್ಬ ಬಿಇ ಸಿವಿಲ್ ಇಂಜಿನಿಯರ್​. ಆರ್​ವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೇನೆ. ನಮ್ಮ ತಂದೆ ಕೆ.ಸಿ ವಿಜಯ್, 1991ರಲ್ಲಿ‌ ಬೆಂಗಳೂರಿಗೆ ಮೇಯರ್ ಆಗಿದ್ದರು. 2002ರಲ್ಲಿ‌ಎಸ್ಸಿ,ಎಸ್ಟಿ ಕಾರ್ಪೊರೇಷನ್ ಡೆವಲಪ್ಮೆಂಟ್ ಚೇರ್ಮನ್ ಆಗಿದ್ದರು. ಎಸ್ ಎಂ ಕೃಷ್ಣಗೆ ನಮ್ಮ‌ತಂದೆ ಬಹಳ ಆಪ್ತರು.

ನಮ್ಮ‌ ತಂದೆ ಕೂಡ ಯೂತ್ ಕಾಂಗ್ರೆಸ್​ನಿಂದ ಬಂದವರು. ಅದೇ ಹಿನ್ನೆಲೆಯಲ್ಲಿ‌ ನಾನು ಬಂದು ಎನ್​​ಎಸ್​​ಯುಐನಲ್ಲಿ‌ ಇದ್ದೆ. ಈಗ ಬೆಂಗಳೂರು ಕೇಂದ್ರಕ್ಕೆ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಇಬ್ಬರೂ ಸಹೋದರಿಯರು ಕೋಲಾರದಲ್ಲೇ ಇದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು