ಕಾಡಿನ ಮಧ್ಯೆ ನಿರ್ಮಿಸಿದ ದೇವಸ್ಥಾನದಿಂದ ಕಾಡು ಬೆಳೆಸುವ ಪಣ; ಈ ದೇಗುಲಕ್ಕೆ ಬರುವ ಭಕ್ತರಿಗೆ ಗಿಡವೆ ಪ್ರಸಾದ

ದೇವಸ್ಥಾನದಲ್ಲಿ ಬರುವ ಭಕ್ತರಿಗೆ ತೀರ್ಥ, ಪ್ರಸಾದ ನೀಡೋದು ಸಾಮಾನ್ಯ .ಆದ್ರೆ, ಇಲ್ಲೊಂದು ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದವಾಗಿ ಗಿಡಗಳನ್ನು ನೀಡುವ ಮೂಲಕ ಹಸಿರು ಕ್ರಾಂತಿಗೆ ಹೊಸ ಅಡಿಪಾಯ ಹಾಕಿದೆ. ಎಲ್ಲಿ ಅಂತೀರಾ ಈ ಸ್ಟೋರಿ ಓದಿ.

ಕಾಡಿನ ಮಧ್ಯೆ ನಿರ್ಮಿಸಿದ ದೇವಸ್ಥಾನದಿಂದ ಕಾಡು ಬೆಳೆಸುವ ಪಣ; ಈ ದೇಗುಲಕ್ಕೆ ಬರುವ ಭಕ್ತರಿಗೆ ಗಿಡವೆ ಪ್ರಸಾದ
ಅಂಕೋಲಾ ತಾಲೂಕಿನ ಬಿಳಿಹೊಂಯ್ಗಿ ಗ್ರಾಮದಲ್ಲಿರುವ ಜೈನ ಸಂಪ್ರದಾಯದ ದೇವಸ್ಥಾನ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 11, 2024 | 6:54 PM

ಉತ್ತರ ಕನ್ನಡ, ಜೂ.11: ಜಿಲ್ಲೆಯ ಅಂಕೋಲಾ(Ankola) ತಾಲೂಕಿನ ಬಿಳಿಹೊಂಯ್ಗಿ ಗ್ರಾಮದಲ್ಲಿರುವ ಜೈನ ಸಂಪ್ರದಾಯದ ಶ್ರೀ ಜೈನಜಟಕ, ಶ್ರೀ ಮಹಾದೇವಿ, ಶ್ರೀ ನಾಗದೇವತೆ  ದೇವಸ್ಥಾನ(Temple)ಕ್ಕೆ ಜೈನರು, ಮೀನುಗಾರರು, ಹಾಲಕ್ಕಿ ಜನಾಂಗ ಸೇರಿದಂತೆ ಹಲವರು ನಡೆದುಕೊಳ್ಳುತ್ತಾರೆ. ಪ್ರತಿ ವರ್ಷದ ಜೂನ್ ತಿಂಗಳಲ್ಲಿ ಉತ್ತಮ ಮಳೆ, ಬೆಳಗಾಗಿ ಈ ಗ್ರಾಮದ ಜನರು ಈ ದೇವರಲ್ಲಿ ಸಸಿಗಳನ್ನು ಇಟ್ಟು ಬೇಡಿಕೊಳ್ಳುತ್ತಾರೆ. ನಂತರ ಪ್ರಸಾದವಾಗಿ ಸಿಗುವ ಈ ಸಸಿಗಳನ್ನು ತಮ್ಮ ಮನೆಯಲ್ಲಿ ನೆಟ್ಟು ಪೋಷಿಸುವ ಮೂಲಕ ಈ ಪರಿಸರಕ್ಕೆ ಕೊಡುಗೆ ನೀಡುತ್ತಾ ಬಂದಿದ್ದಾರೆ.

ಅಂಕೊಲಾ ತಾಲೂಕಿನ ಕಾಡಿನಲ್ಲಿರುವ ದೇವಸ್ಥಾನಕ್ಕಿದೆ ಭಾರಿ ಮಹಿಮೆ

ಈ ಬಾರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮವನ್ನು ಊರಿನ ಜನರ ಸಹಕಾರದಲ್ಲಿ ನೆರವೇರಿಸಿದ್ದು, ಹೋಮ-ಹವನಗಳ ಜೊತೆ ಗಿಡಗಳನ್ನು ಸಹ ಇಟ್ಟು ಪೂಜೆ ಮಾಡುವ ಮೂಲಕ ಪರಿಸರ ಪ್ರೇಮ ಮೆರೆದರೆ, ಬಂದ ಪುರೋಹಿತರಾದಿಯಾಗಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಗಿಡಗಳನ್ನು ನೀಡಿದ್ದು ಹೊಸ ಮುನ್ನುಡಿ ಬರದಿದ್ದಾರೆ. ಇನ್ನು ಈ ಊರಿನಲ್ಲಿ ಮಳೆಗಾಲ ಪ್ರಾರಂಭದಲ್ಲಿ ಇಲ್ಲಿನ ಜಟಕ ದೇವರನ್ನು ಊರಿನ ಗದ್ದೆಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಈ ಮೂಲಕ ತಮ್ಮ ಹೊಲದಲ್ಲಿ ಉತ್ತಮ ಬೆಳೆಯ ಆಶಿರ್ವಾದ ಬೇಡುವ ಇಲ್ಲಿನ ಜನರು, ದೇವರಿಗೆ ಕಾಣಿಕೆ ರೂಪದಲ್ಲಿ ಬೆಳೆದ ಬೆಳೆ ಜೊತೆ ಗಿಡವನ್ನು ಸಹ ನೀಡಿ ಕಾಣಿಕೆ ಅರ್ಪಿಸುತ್ತಾರೆ.

ಇದನ್ನೂ ಓದಿ:ಗೋಸುಂಬೆ ಮೇಲೆ ದಾಳಿ ಮಾಡಿ ನುಂಗಿದ ಹಸಿರು ಹಾವು; ವಿಡಿಯೋ ವೈರಲ್​

ಇನ್ನು ಪ್ರಸಾದ ರೂಪದಲ್ಲಿ ಗ್ರಾಮದ ಜನರಿಗೆ, ಬರುವ ಭಕ್ತರಿಗೆ ಗಿಡಗಳನ್ನು ನೀಡುವ ಮೂಲಕ ಮನೆಯಲ್ಲಿ ಗಿಡಗಳನ್ನು ಬೆಳಸಬೇಕು ಎಂಬ ಉದ್ದೇಶ ಈ ದೇವಸ್ಥಾನದ ಆಡಳಿತಮಂಡಳಿಯದ್ದು. ಹೀಗಾಗಿ ಈ ಬಾರಿ ಒಂದೇ ದಿನದಲ್ಲಿ 1500 ಕ್ಕೂ ಹೆಚ್ಚು ಗಿಡಗಳನ್ನು ಬಂದ ಭಕ್ತರಿಗೆ ನೀಡಿದ್ದು, ನೇರಳೆ, ನೆಲ್ಲಿ, ಸಂಪಿಗೆ, ಅಶೋಕ, ಹಲಸು ಹೀಗೆ ಹತ್ತು ಹಲವು ಜಾತಿಯ ಗಿಡಗಳನ್ನು ನೀಡಿದ್ದು, ಈ ಕಾರ್ಯಕ್ಕೆ ಅರಣ್ಯ ಇಲಾಖೆಯವರು ಸಹ ಕೈ ಜೋಡಿಸಿ ಹಸಿರು ಕಾಂತ್ರಿಗೆ ಮುನ್ನುಡಿ ಬರೆದರು. ಇಂದಿನ ಕಾಲದಲ್ಲಿ ದೇವಸ್ಥಾನಗಳು ಎಂದರೇ ದುಡ್ಡು ಮಾಡುವ ಕೇಂದ್ರ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುತ್ತಿರುವಾಗಲೇ, ಈ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಗಿಡಗಳನ್ನು ನೀಡುವ ಮೂಲಕ ಹಸಿರು ಕ್ರಾಂತಿಗೆ ತಳಹದಿ ಹಾಕಿದ್ದು ಎಲ್ಲರೂ ಮೆಚ್ಚುವಂತದ್ದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ