AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನೆ ಫೇಲ್​​, ಇಂದು ಶಾಲೆಗೆ ಟಾಪರ್​​? ಅಂಧ ವಿದ್ಯಾರ್ಥಿನಿಯ SSLC ರಿಸಲ್ಟ್ ಗೊಂದಲ

ಶಿರಸಿಯ ಅಂಧ ವಿದ್ಯಾರ್ಥಿನಿಯ SSLC ಫಲಿತಾಂಶದ ಬಗ್ಗೆ ಕ್ಲ್ಯಾರಿಟಿ‌ ಸಿಗುತ್ತಿಲ್ಲ. ನಿನ್ನೆ ಫೇಲ್​​ ಅಂತ ಬಂದಿದ್ದು, ಇಂದು ಶಾಲೆಗೆ ಟಾಪರ್ ಎನ್ನಲಾಗುತ್ತಿದೆ. ಆದರೆ ಶಿರಸಿ ಡಿಡಿಪಿಐ ಅಧಿಕಾರಿ ರಿಸಲ್ಟ್ ಬರುವುದಕ್ಕೆ ಇನ್ನು ಎರಡು ದಿನ ಬೇಕು ಎಂದಿದ್ದಾರೆ. ಹೀಗಾಗಿ ವಿದ್ಯಾರ್ಥಿನಿಯ ರಿಸಲ್ಟ್ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.

ನಿನ್ನೆ ಫೇಲ್​​, ಇಂದು ಶಾಲೆಗೆ ಟಾಪರ್​​? ಅಂಧ ವಿದ್ಯಾರ್ಥಿನಿಯ SSLC ರಿಸಲ್ಟ್ ಗೊಂದಲ
ವಿದ್ಯಾರ್ಥಿನಿ ಲೀಸಾ ಖಾನಮ್Image Credit source: tv9 kannada
ಸೂರಜ್​, ಮಹಾವೀರ್​ ಉತ್ತುರೆ
| Edited By: |

Updated on:Apr 24, 2026 | 4:29 PM

Share

ಕಾರವಾರ, ಏಪ್ರಿಲ್​ 24: ಪರೀಕ್ಷಾ ಪ್ರಾಧಿಕಾರದ ಎಡವಟ್ಟಿನಿಂದ ಎಸ್​​ಎಸ್​ಎಲ್​ಸಿಯಲ್ಲಿ (SSLC Result) ಫೇಲ್​​ ಆಗಿದ್ದ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್​​ ಇದೀಗ ಶಾಲೆಗೆ ಟಾಪರ್​ ಎನ್ನಲಾಗುತ್ತಿದೆ. ಗುರುವಾರ ಬಂದಿದ್ದ ಅಧಿಕೃತ ರಿಸಲ್ಟ್​ನಲ್ಲಿ ಸಮಾಜ-ವಿಜ್ಞಾನ ವಿಷಯದಲ್ಲಿ ಗೈರು ಅಂತ ಬಂದಿತ್ತು. ಇಂದು ಪರೀಕ್ಷಾ ಪ್ರಾಧಿಕಾರದಿಂದ ಬಂದ ರಿಸಲ್ಟ್​​ನಲ್ಲಿ ವಿದ್ಯಾರ್ಥಿನಿ ಲೀಸಾ ಖಾನಮ್​​ ಶಾಲೆಗೆ ಟಾಪರ್​ ಆಗಿದ್ದಾರೆ. ಆದರೆ ಶಿರಸಿ ಡಿಡಿಪಿಐ ಇದು ಅಧಿಕೃತ ಪ್ರತಿ ಅಲ್ಲ ಎನ್ನುತ್ತಿದ್ದು, ವಿದ್ಯಾರ್ಥಿನಿಯ ಫಲಿತಾಂಶದ ಬಗ್ಗೆ ಸ್ಪಷ್ಟತೆ ಸಿಗುತ್ತಿಲ್ಲ. ಹೀಗಾಗಿ ಇದು ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಶಿರಸಿಯ ಇಂದಿರಾ ನಗರದಲ್ಲಿರುವ ಯೂನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿ ಲೀಸಾ ಖಾನಮ್,​ ಎಸ್​​ಎಸ್​ಎಲ್​ಸಿಯಲ್ಲಿ ಎಲ್ಲಾ ಪರೀಕ್ಷೆ ಬರೆದಿದ್ದರು. ಆದರೆ ಎಸ್​​ಎಸ್​ಎಲ್​ಸಿ ಪರೀಕ್ಷಾ ಪ್ರಾಧಿಕಾರ ಅದೊಂದು ಎಡವಟ್ಟಿನಿಂದ ಸಮಾಜ-ವಿಜ್ಞಾನ ಪರೀಕ್ಷೆಗೆ ಗೈರು ಅಂತ ನಮೂದು ಮಾಡಲಾಗಿತ್ತು. ಹೀಗಾಗಿ 84.16 % ಫಲಿತಾಂಶ ಬಂದಿದ್ದರು ಕೂಡ ರಿಸಲ್ಟ್‌ ಮಾತ್ರ ಫೇಲ್ ಅಂತ ಬಂದಿತ್ತು.

ಇದನ್ನೂ ಓದಿ: SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್

ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮರುಪರಿಶೀಲನೆ ನಡೆಸಿದಾಗ, ಇಂದು ಬಂದಿರುವ ಪ್ರಾಧಿಕಾರದ ಮಾಹಿತಿಯ ಪ್ರಕಾರ ಅದೇ ವಿಷಯದಲ್ಲಿ ಆಕೆಗೆ 97 ಅಂಕಗಳು ಲಭಿಸಿದ್ದು, ಆಕೆ ಶಾಲೆಯ ಟಾಪರ್ ಆಗಿ ಹೊರಹೊಮ್ಮಿದ್ದಾಳೆ ಎನ್ನಲಾಗುತ್ತಿದೆ.

ಇದು ಅಧಿಕೃತ ಪ್ರತಿ ಅಲ್ಲ ಎಂದ ಶಿರಸಿ ಡಿಡಿಪಿಐ

ಇನ್ನು ಈ ಬಗ್ಗೆ ಶಿರಸಿ ಡಿಡಿಪಿಐ ಮಾತನಾಡಿದ್ದು, ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಈಗ ಹರಿದಾಡುತ್ತಿರುವ ರಿಸಲ್ಟ್ ಅಧಿಕೃತ ಪ್ರತಿಯಲ್ಲ. ವಿದ್ಯಾರ್ಥಿನಿಯ ಪೇಪರ್ ಮಿಸ್ ಆಗಿದ್ದು ನಿಜ, ಅದರ ಪರಿಶೀಲನೆ ನಡೆಯುತ್ತಿದೆ. ಅಧಿಕೃತ ರಿಸಲ್ಟ್ ಬರಲು ಇನ್ನೂ ಎರಡು ದಿನಗಳ ಕಾಲಾವಕಾಶ ಬೇಕು. ಅಷ್ಟು ಬೇಗ ಫಲಿತಾಂಶ ಹೊರಬರಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ತಂದೆ ಸಾವಿನ ನಡುವೆಯೂ SSLC ಪರೀಕ್ಷೆ ಬರೆದು ಉತ್ತೀರ್ಣನಾದ ಶಿವಮೊಗ್ಗದ ವಿದ್ಯಾರ್ಥಿ

ಸದ್ಯ ಪರೀಕ್ಷಾ ಪ್ರಾಧಿಕಾರದ ಎಡವಟ್ಟಿನಿಂದಾಗಿ ಪ್ರತಿಭಾವಂತ ಅಂಧ ವಿದ್ಯಾರ್ಥಿನಿಯ ಎಸ್​​ಎಸ್​ಎಲ್​ಸಿ ಫಲಿತಾಂಶ ಸದ್ಯ ಅತಂತ್ರ ಸ್ಥಿತಿಗೆ ತಲುಪಿದೆ. ಭಾರಿ ಚರ್ಚೆಗೂ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:27 pm, Fri, 24 April 26

Follow Us
ಸೂರಜ್​, ಮಹಾವೀರ್​ ಉತ್ತುರೆ
ಸೂರಜ್​, ಮಹಾವೀರ್​ ಉತ್ತುರೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ