ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ದಾಳಿ ಖಂಡಿಸಿ ಮುಸ್ಲಿಂ ಸಂಘಟನೆಗಳಿಂದ ಭಟ್ಕಳದಲ್ಲಿ ಪ್ರತಿಭಟನೆ
ಇಂದು(ನ.17) ಉತ್ತರ ಕನ್ನಡ ಜಿಲ್ಲೆಯ ಭಟ್ಕಳ(Bhatkal) ದಲ್ಲಿ ಪ್ಯಾಲೆಸ್ಟೈನ್ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಮೌನ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಭಾರತದ ಧ್ವಜದೊಂದಿಗೆ ಪ್ಯಾಲೆಸ್ತೇನ್ ಧ್ವಜ ಪ್ರದರ್ಶಿಸಿ ಬೆಂಬಲ ವ್ಯಕ್ತಪಡಿಸಿದ್ದು, ವಿವಿಧ ಘೋಷಣೆಗಳ ನಾಮಫಲಕ ಹಿಡಿದು ಎಸಿ ಕಚೇರಿಯೆದುರು ಐನೂರಕ್ಕೂ ಅಧಿಕ ಮುಸ್ಲಿಮರು ಜಮಾಯಿಸಿದ್ದಾರೆ.
ಉತ್ತರ ಕನ್ನಡ, ನ.17: ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ನ ಹಮಾಸ್(Israel-Hamas) ಉಗ್ರರ ನಡುವೆ ಯುದ್ಧ ನಡೆದಿದೆ. ಈ ಹಿನ್ನಲೆ ಇಂದು(ನ.17) ಉತ್ತರ ಕನ್ನಡ ಜಿಲ್ಲೆಯ ಭಟ್ಕಳ(Bhatkal) ದಲ್ಲಿ ಪ್ಯಾಲೆಸ್ಟೈನ್ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಮೌನ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಭಾರತದ ಧ್ವಜದೊಂದಿಗೆ ಪ್ಯಾಲೆಸ್ತೇನ್ ಧ್ವಜ ಪ್ರದರ್ಶಿಸಿ ಬೆಂಬಲ ವ್ಯಕ್ತಪಡಿಸಿದ್ದು, ವಿವಿಧ ಘೋಷಣೆಗಳ ನಾಮಫಲಕ ಹಿಡಿದು ಎಸಿ ಕಚೇರಿಯೆದುರು ಐನೂರಕ್ಕೂ ಅಧಿಕ ಮುಸ್ಲಿಮರು ಜಮಾಯಿಸಿದ್ದಾರೆ. ಪ್ಯಾಲೆಸ್ಟೈನ್ ವಿಷಯದಲ್ಲಿ ಭಾರತ ಸರ್ಕಾರದ ನಿಲುವಿಗೆ ಭಟ್ಕಳ ಮುಸ್ಲಿಂಮರು ಬೆಂಬಲ ಸೂಚಿಸಿ, ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಇನ್ನು ಇದೇ ತಿಂಗಳ 6 ರಂದು ವಿಜಯಪುರದ ಜುಮ್ಮಾ ಮಸೀದಿ ರಸ್ತೆಯಲ್ಲಿ ಎಸ್ಡಿಪಿಐ ಕಾರ್ಯಕರ್ತರು ಪ್ಯಾಲೆಸ್ಟೈನ್ ಪರವಾಗಿ ಘೋಷಣೆ ಕೂಗಿ, ಪ್ರತಿಭಟನೆ ನಡೆಸಿದ್ದರು. ಜೊತೆಗೆ ಪ್ಯಾಲೆಸ್ಟೈನ್ ಪರ ಭಿತ್ತಿಪತ್ರ ಕೂಡ ಪ್ರದರ್ಶನ ಮಾಡಲಾಗಿತ್ತು. ಇನ್ನು ಈ ಪ್ರತಿಭಟನೆಯಲ್ಲಿ ಅಪ್ರಾಪ್ತ ಮಕ್ಕಳು ಸಹಿತ ಭಾಗಿಯಾಗಿದ್ದರು. ಈ ಹಿನ್ನಲೆ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅತಾವುಲ್ಲ ಎಂಬುವವರ ವಿರುದ್ಧ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ನನ್ನ ಪತ್ನಿಗೆ ವಿದಾಯ ಹೇಳುತ್ತಿರುವೆ: ದೇಶಕ್ಕಾಗಿ ಹೋರಾಡಲು ಮುಂದಾದ ಇಸ್ರೇಲ್ ಪತ್ರಕರ್ತ
ಇಷ್ಟೇ ಅಲ್ಲ, ಭಟ್ಕಳ ಕ್ರಿಕೆಟ್ ಲೀಗ್-5 ನವೆಂಬರ್ 3 ರಿಂದ ಒಂದು ತಿಂಗಳಕಾಲ ಐಪಿಎಲ್ ಮಾದರಿಯಲ್ಲಿ ನಡೆಯಬೇಕಿತ್ತು. ಆದರೆ, ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದನ್ನು ಖಂಡಿಸಿ, ಮುಸ್ಲಿಂ ಯೂಥ್ ಫೆಡರೇಶನ್ ನಡೆಸುವ ಭಟ್ಕಳದ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ಕೂಡ ಅಂದು ರದ್ದು ಮಾಡಿತ್ತು. ಯುದ್ಧ ಮುಗಿಯುವವರೆಗೆ ಭಟ್ಕಳದ ಮುಸ್ಲಿಮರು ಮದುವೆ, ಮನರಂಜನೆಯನ್ನು ರದ್ದು ಮಾಡುವಂತೆ ಕರೆ ನೀಡಿತ್ತು. ಅವರು ಭಟ್ಕಳ ಮುಸ್ಲಿಂ ಯೂಥ್ ಫೆಡರೇಶನ್ ಕಳೆದ ತಿಂಗಳು 200 ಆಟಗಾರರನ್ನು ಗುರುತಿಸಿ ಹರಾಜು ಹಾಕಿ 12 ತಂಡವನ್ನು ಆಯ್ಕೆ ಮಾಡಿತ್ತು. ಮುಸ್ಲಿಮರ ಹತ್ಯೆ ವಿರೋಧಿಸಿ ಕ್ರಿಕೇಟ್ ಪಂದ್ಯಾವಳಿಯನ್ನು ರದ್ದು ಮಾಡಲಾಗಿತ್ತು. ಇದೀಗ ಮೌನ ಪ್ರತಿಭಟನೆಯನ್ನು ಮಾಡುವ ಮೂಲಕ ತಹಶೀಲ್ದಾರ್ಗೆ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ