ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್​​ಗೆ ರಾಜ್ಯಪಾಲರು ಅನುಮತಿ ಕೊಡ್ಬಹುದಾ? ಒಂದು ವೇಳೆ ಕೊಟ್ರೆ ಏನಾಗುತ್ತೆ?

ವಾಲ್ಮೀಕಿ ಹಗರಣ ಪ್ರಕರಣದಲ್ಲಿ ಸಚಿವ ನಾಗೇಂದ್ರಗೆ ಮೇಲಿಂದ ಮೇಲೆ ಸಂಕಷ್ಟ ಎದುರಾಗ್ತಿದೆ. ನಾಗೇಂದ್ರ ರಾಜೀನಾಮೆ ಗಾಗಿ ವಿಪಕ್ಷ ಬಿಜೆಪಿ ಜೆಡಿಎಸ್ ಪಟ್ಟು ಹಿಡಿದಿವೆ. ರಾಜೀನಾಮೆ ವಿಚಾರವಾಗಿ ಈಗಾಗಲೇ ಸದನದ ಅರ್ಧ ಸಮಯ ಹಾಳಾಗಿದೆ. ಆದರೂ ತಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡೋದೇ ಇಲ್ಲ ಅಂತ ನಾಗೇಂದ್ರ ಪಟ್ಟು ಹಿಡಿದ್ದಾರೆ. ಇದರ ಮಧ್ಯೆ, ನಾಗೇಂದ್ರ ಗೆ ಸಿಬಿಐ ಮರ್ಮಾಘಾತ ನೀಡೋದಕ್ಕೆ ಹೆಜ್ಜೆ ಇಟ್ಟಿದೆ. ಸಚಿವ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್​​ಗೆ ರಾಜ್ಯಪಾಲರು ಅನುಮತಿ ಕೊಡ್ಬಹುದಾ? ಒಂದು ವೇಳೆ ಕೊಟ್ರೆ ಏನಾಗುತ್ತೆ? ಎನ್ನುವ ಡಿಟೇಲ್ಸ್ ಇಲ್ಲಿದೆ.

ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್​​ಗೆ ರಾಜ್ಯಪಾಲರು ಅನುಮತಿ ಕೊಡ್ಬಹುದಾ? ಒಂದು ವೇಳೆ ಕೊಟ್ರೆ ಏನಾಗುತ್ತೆ?
B Nagendra

Updated on: Aug 22, 2026 | 9:40 PM

ಬೆಂಗಳೂರು, (ಆಗಸ್ಟ್ 22): ವಾಲ್ಮೀಕಿ ನಿಗಮದಲ್ಲಿನ ಹಗರಣ (valmiki corporation scam) ಖಂಡಿಸಿ ಬಿಜೆಪಿ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ತಿದೆ. ಸಚಿವ ಬಿ.ನಾಗೇಂದ್ರ (B Nagendra) ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಸಾಲು ಸಾಲು ಪ್ರತಿಭಟನೆ, ಧರಣಿ ನಡೀತಿದೆ. ದಿನಕ್ಕೊಂದು ಜಿಲ್ಲೆಯಲ್ಲಿ ಪ್ರತಿಭಟನೆ ಆಗ್ತಿದೆ. ಸದನದಲ್ಲೂ ರಾಜೀನಾಮೆ ಕೇಳ್ತಿದ್ದಾರೆ. ಇದೀಗ ರಾಯಚೂರು ನಗರದ ಟಿಪ್ಪು ಸುಲ್ತಾನ್ ಗಾರ್ಡನ್​ನಲ್ಲಿನ ಹೋರಾಟ 4ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ಸಚಿವ ನಾಗೇಂದ್ರಗೆ ಸಿಬಿಐ ಸಂಕಷ್ಟ ಎದುರಾಗುತ್ತಾ? ಅನ್ನೋ ಪ್ರಶ್ನೆ ಎದ್ದಿದೆ. ಯಾಕೆಂದ್ರೆ ಅದಕ್ಕೆ ತಕ್ಕಂತೆ ಬೆಳವಣಿಗೆಗಳು ಆಗ್ತಿದೆ. ಸಿಬಿಐ ಅಧಿಕಾರಿಗಳು ರಾಜ್ಯಪಾಲರಿಗೆ (Governor) ಪತ್ರ ಬರೆದಿದ್ದು, ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೇಳಿದ್ದಾರೆ.

ಪ್ರಾಸಿಕ್ಯೂಷನ್ ಕೊಟ್ರೆ ಏನಾಗುತ್ತೆ?

ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ ಕೊಡೋ ಅಧಿಕಾರ ಗವರ್ನರ್​ಗೆ ಇದ್ಯಾ? ಮುಂದೆ ಏನೆಲ್ಲಾ ಬೆಳವಣಿಗೆ ಆಗುತ್ತೆ ಅನ್ನೋದನ್ನೇ ನೋಡೋದಾದ್ರೆ. ಭ್ರಷ್ಟಾಚಾರ ತಡೆ ಕಾಯ್ದೆ ಸೆ.19ರಡಿಯಲ್ಲಿ ರಾಜ್ಯಪಾಲರ ಅನುಮತಿ ಅಗತ್ಯ. ಒಂದು ವೇಳೆ ಅನುಮತಿ ಇಲ್ಲದೇ ಆರೋಪಪಟ್ಟಿಯನ್ನು ಕೋರ್ಟ್ ಪರಿಗಣಿಸುವುದಿಲ್ಲ. ಸಿಎಂ ವಿರುದ್ಧದ ಕೇಸ್ ಆಗಿದ್ದರೆ ರಾಜ್ಯಪಾಲರೇ ಅನುಮತಿ ಕೊಡಬಹುದು. ಆದರೆ ಸಚಿವರ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿಗೆ ಸಂಪುಟದ ಸಲಹೆ ನೀಡಬಹುದು. ಒಂದು ವೇಳೆ ಸಂಪುಟ ಅನುಮತಿ ನಿರಾಕರಿಸಿದ್ರೆ ರಾಜ್ಯಪಾಲರಿಗೆ ವಿವೇಚನಾಧಿಕಾರವಿದೆ. ದಾಖಲೆ ಪರಿಗಣಿಸಿ ರಾಜ್ಯಪಾಲರೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಬಹುದು.

ಇದನ್ನೂ ನೋಡಿ: ಸಚಿವ ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಸಿಬಿಐ ಪತ್ರ

ರಾಜ್ಯಪಾಲರು ಅನುಮತಿ ನೀಡಿದರೆ ಕೋರ್ಟ್‌ನಲ್ಲಿ ಸಾಕ್ಷ್ಯವಿಚಾರಣೆ ಆರಂಭವಾಗುತ್ತದೆ. ಇನ್ನು ರಾಜ್ಯಪಾಲರು ವಿವೇಚನೆ ಬಳಸಿ ಅನುಮತಿ ನೀಡಿದರೆ ನಾಗೇಂದ್ರ ಪ್ರಶ್ನಿಸಬಹುದು. ಸಚಿವ ಸಂಪುಟದ ಸಲಹೆ ಪಡೆದಿಲ್ಲವೆಂದು ಕೋರ್ಟ್‌ನಲ್ಲಿ ನಾಗೇಂದ್ರ ಪ್ರಶ್ನಿಸಬಹುದು.

  • ಯಾವುದು ಸೂಕ್ತ ಎಂಬುದು ಚಾರ್ಜ್‌ಶೀಟ್, ಸ್ಯಾಂಕ್ಷನ್ ಅರ್ಜಿ, ಅನ್ವಯಿಸಲಾದ ನಿಖರ ಸೆಕ್ಷನ್‌ಗಳು ಮತ್ತು ನ್ಯಾಯಾಲಯದ ಆದೇಶಗಳ ಮೇಲೆ ನಿರ್ಧಾರವಾಗುತ್ತದೆ.
  • ಸ್ಯಾಂಕ್ಷನ್ ಇನ್ನೂ ಬಾಕಿಯಿದ್ದರೆ, ವಿಶೇಷ ನ್ಯಾಯಾಲಯವು ಪಿಸಿ ಕಾಯ್ದೆಯ ಆರೋಪಗಳ ಮೇಲೆ ಕಾಗ್ನಿಜನ್ಸ್ ತೆಗೆದುಕೊಳ್ಳಬಾರದು ಎಂದು ವಾದಿಸುವುದು.
  • ಅನುಮತಿ ಸಿಕ್ಕ ನಂತರ, ಅದು ಸಮರ್ಥ ಪ್ರಾಧಿಕಾರದಿಂದ ಬಂದಿದೆಯೇ, ಸಿಬಿಐ ಎಲ್ಲ ಸಂಬಂಧಿತ ದಾಖಲೆಗಳನ್ನು ಕೊಟ್ಟಿದೆಯೇ, ಪ್ರಾಧಿಕಾರ ಸ್ವತಂತ್ರವಾಗಿ ಮನಸ್ಸು ಅನ್ವಯಿಸಿದ್ದೇ ಎಂಬ ಆಧಾರದಲ್ಲಿ ಸ್ಯಾಂಕ್ಷನ್ ಆದೇಶವನ್ನು ಪ್ರಶ್ನಿಸುವುದು.
  • ಕಾಗ್ನಿಜನ್ಸ್ ಅಥವಾ ಚಾರ್ಜ್ ಫ್ರೇಮಿಂಗ್ ಹಂತದಲ್ಲಿ, ತಮ್ಮ ವಿರುದ್ಧ ಮೇಲ್ನೋಟಕ್ಕೆ ಸಾಕ್ಷ್ಯ ಇಲ್ಲ ಎಂದು ಹೇಳಿ ಕೇಸ್ ವಜಾಕ್ಕೆ ಕೋರುಬಹುದು.
  • ಚಾರ್ಜ್‌ಶೀಟ್‌ನಲ್ಲಿನ ಹಣದ ಹಾದಿ, ಬ್ಯಾಂಕಿಂಗ್ ದಾಖಲೆ, ಕರೆ-ಡೇಟಾ, ಸಾಕ್ಷಿದಾರರ ಹೇಳಿಕೆ, ಸಚಿವರ ನೇರ ಪಾತ್ರ, ಅಪರಾಧ ಉದ್ದೇಶ ಮತ್ತು ಸಂಚು ಆರೋಪಗಳನ್ನು ಪ್ರಶ್ನಿಸಬಹುದು.
  • ಈಗಿರುವ ನಿರೀಕ್ಷಣಾ ಜಾಮೀನನ್ನು ಉಳಿಸಿಕೊಳ್ಳುವುದು ಮತ್ತು ಸಿಬಿಐ ಜಾಮೀನು ರದ್ದತಿ ಅರ್ಜಿಗೆ ವಿರೋಧಿಸುವುದು

ಸದ್ಯ ಹೈಕೋರ್ಟ್ ಈಗಾಗಲೇ ಸಿಬಿಐಯ ಜಾಮೀನು ರದ್ದು ಮನವಿಯ ಮೇಲೆ ನಾಗೇಂದ್ರರಿಗೆ ನೋಟಿಸ್ ನೀಡಿದೆ… ತನಿಖೆ, ಕಾಗ್ನಿಜನ್ಸ್ ಅಥವಾ ಸ್ಯಾಂಕ್ಷನ್ ಪ್ರಕ್ರಿಯೆಯಲ್ಲಿ ಮೂಲಭೂತ ಕಾನೂನು ದೋಷವಿದ್ದರೆ ಹೈಕೋರ್ಟ್‌ನಲ್ಲಿ ಸೂಕ್ತ ಪರಿಹಾರ ಕೋರಬೇಕಷ್ಟೇ.

Trouble Mounts For B Nagendra As CBI Seeks Sanction For Prosecution, BJP-Congress Leaders Lock Horns
ಇನ್ನು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ನಾಗೇಂದ್ರರ ಹೆಸರು ಇದೆ. ಪ್ರಕರಣದಲ್ಲಿ ಬಹುಕೋಟಿ ಹಣ ದುರುಪಯೋಗದ ಆರೋಪ ಇದೆ. ಇದಷ್ಟೇ ಅಲ್ಲ, ಸಿಬಿಐ ವಿಚಾರಣೆಗೆ ಮೇಲ್ನೋಟಕ್ಕೆ ಅರ್ಹವಾದ ಸಾಕಷ್ಟು ವಿಷಯಗಳಿವೆ ಅನ್ನೋದು ಬಿಜೆಪಿ ವಾದ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us