ವಕ್ಫ್ ವಿವಾದಕ್ಕೆ ಬೇಸತ್ತು ರೈತ ಆತ್ಮಹತ್ಯೆ ಆರೋಪ: ಸರ್ಕಾರದ ವಿರುದ್ದ ಬಿಜೆಪಿ ಆಕ್ರೋಶ

ಹಾವೇರಿಯ ರೈತನ ಆತ್ಮಹತ್ಯೆ ಕರ್ನಾಟಕದಲ್ಲಿ ವಕ್ಫ್ ಭೂ ವಿವಾದದ ತೀವ್ರತೆಯನ್ನು ಎತ್ತಿ ತೋರಿಸಿದೆ. ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಇರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಬಿಜೆಪಿ ಈ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ವಕ್ಫ್ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿದೆ.

ವಕ್ಫ್ ವಿವಾದಕ್ಕೆ ಬೇಸತ್ತು ರೈತ ಆತ್ಮಹತ್ಯೆ ಆರೋಪ: ಸರ್ಕಾರದ ವಿರುದ್ದ ಬಿಜೆಪಿ ಆಕ್ರೋಶ
ವಕ್ಫ್ ವಿವಾದಕ್ಕೆ ಬೇಸತ್ತು ರೈತ ಆತ್ಮಹತ್ಯೆ ಆರೋಪ: ಸರ್ಕಾರದ ವಿರುದ್ದ ಬಿಜೆಪಿ ಆಕ್ರೋಶ
Edited By:

Updated on: Nov 07, 2024 | 10:51 PM

ಬೆಂಗಳೂರು, ನವೆಂಬರ್​ 07: ಕರ್ನಾಟಕದಲ್ಲಿ ವಕ್ಫ್‌ (waqf) ವಿವಾದ ದಿನದಿನಕ್ಕೂ ಹೆಚ್ಚಾಗುತ್ತಿದೆ. ರೈತರ ಪಹಣಿ, ಮಠಗಳ ಆಸ್ತಿ, ದೇಗುಲಗಳ ಆಸ್ತಿಗಳಲ್ಲಿ ವಕ್ಫ್‌ ಹೆಸರು ನಮೂದಿಸಿರುವುದು ಜನರು ಆತಂಕ್ಕೆ ಈಡುಮಾಡಿದೆ. ಇದೇ ವಕ್ಫ್ ವಿವಾದಕ್ಕೆ ಬೇಸತ್ತು ಹಾವೇರಿಯ ರೈತ ಓರ್ವ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಈ ವಿಚಾರವಾಗಿ ಸರ್ಕಾರದ ವಿರುದ್ದ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಹಾವೇರಿ ಜಿಲ್ಲೆಯ ಹರನಗಿ ಗ್ರಾಮದಲ್ಲಿ ಓರ್ವ ರೈತ ವಕ್ಫ್ ವಿವಾದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರುದ್ರಪ್ಪ ಎಂಬ ರೈತ 2022ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಇಂದು ಜಾಯಿಂಟ್‌ ಪಾರ್ಲಿಮೆಂಟರಿ ಕಮಿಟಿ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಹಾವೇರಿ ರೈತರು ಪ್ರಸ್ತಾಪಿಸಿದ ನಂತರ ಆತ್ಮಹತ್ಯೆ ವಿಚಾರ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: ವಕ್ಫ್​ ವಿವಾದ: ಕರ್ನಾಟಕಕ್ಕೆ ಬಂದ ಜಂಟಿ ಸದನ ಸಮಿತಿ ಅಧ್ಯಕ್ಷರ ವಿರುದ್ಧ ಮುಗಿಬಿದ್ದ ಕಾಂಗ್ರೆಸ್​​ ನಾಯಕರು

ಸದ್ಯ ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟ್ವೀಟ್ ಮಾಡಿದ್ದು, ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವುದಕ್ಕೆ ಮಾನಸಿಕವಾಗಿ ಆಘಾತಗೊಂಡು ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ರುದ್ರಪ್ಪ ಆತ್ಮಹತ್ಯೆಗೆ ಶರಣಾಗಿರುವುದು ತೀವ್ರ ಕಳವಳಕಾರಿ ಸುದ್ದಿಯಾಗಿದೆ.

ಕಾಂಗ್ರೆಸ್​ ಸರ್ಕಾರದ ಜನವಿರೋಧಿ ನೀತಿಗಳು, ತುಷ್ಟೀಕರಣ ರಾಜಕೀಯದ ಪರಾಕಾಷ್ಠೆಯ ಎಲ್ಲೆ ಮೀರಿದಂತೆ ವರ್ತಿಸುತ್ತಿರುವ ಸಚಿವರುಗಳಿಂದ ಅನ್ನದಾತರು ಹೆದರಿ ನೇಣಿಗೆ ಕೊರಳೊಡ್ಡುವ ಪರಿಸ್ಥಿತಿ ಬಂದೊದಗಿದ್ದು ದುರಂತವೇ ಸರಿ.

ಬಿವೈ ವಿಜಯೇಂದ್ರ ಟ್ವೀಟ್

ನಾಡಿನ ರೈತಬಂಧುಗಳು ಭಯ ಪಡುವ ಅಗತ್ಯವಿಲ್ಲ, ಬಿಜೆಪಿ ರೈತರ ಒಂದು ಅಡಿ ಜಾಗವನ್ನು ಕಿತ್ತಿಕೊಳ್ಳಲು ಬಿಡುವುದಿಲ್ಲ, ಅಲ್ಲದೇ ಈ ಬಹುದೊಡ್ಡ ಪ್ರಮಾದ ಸಂಭವಿಸಲು ಕಾರಣವಾಗಿರುವ ಕಾಂಗ್ರೆಸ್ ಸರ್ಕಾರ ರೈತನ ಸಾವಿನ ಹೊಣೆ ಹೊರಬೇಕು. ಈ ಕೂಡಲೇ ವಕ್ಫ್ ಕಾಯ್ದೆ ಹಿಂಪಡೆದು, ಮೃತ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:50 pm, Thu, 7 November 24