AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್​ ವಿರುದ್ಧ ಕಮಿಷನ್​ ಆರೋಪ: ಬೋಗಸ್ ಕೆಲಸಗಳಿಗೂ ಬಿಲ್ ಮಾಡಬೇಕಾ ಎಂದ ಸಚಿವ ದರ್ಶನಾಪುರ

ಡಿಸಿಎಂ ಡಿಕೆ ಶಿವಕುಮಾರ್​ ವಿರುದ್ಧ ಗುತ್ತಿಗೆದಾರರಿಂದ ಕಮಿಷನ್​ ಆರೋಪ ವಿಚಾರವಾಗಿ ಯಾದಗಿರಿಯಲ್ಲಿ ಸಣ್ಣಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಪ್ರತಿಕ್ರಿಯೆ ನೀಡಿದ್ದು, ಡಿಕೆ ಶಿವಕುಮಾರ್​​ ಅವರು 120 ಕೋಟಿ ರೂ. ಬೋಗಸ್ ಬಿಲ್ ಆಗಿರೋದ್ದನ್ನ ಕಂಡು ಹಿಡಿದಿದ್ದಾರೆ. ಯಾವ ಕೆಲಸ ಪೂರ್ಣ ಆಗಿದೆ ಅದಕ್ಕೆ ಅಡೆತಡೆ ಇಲ್ಲ ಅಂತ ಹೇಳಿದ್ದಾರೆ. ಹಾಗಾದರೆ ಬೋಗಸ್ ಕೆಲಸಗಳಿಗೂ ಬಿಲ್ ಮಾಡಬೇಕಾ ಎಂದು ಪ್ರಶ್ನಿಸಿದ್ದಾರೆ.

ಡಿಕೆ ಶಿವಕುಮಾರ್​ ವಿರುದ್ಧ ಕಮಿಷನ್​ ಆರೋಪ: ಬೋಗಸ್ ಕೆಲಸಗಳಿಗೂ ಬಿಲ್ ಮಾಡಬೇಕಾ ಎಂದ ಸಚಿವ ದರ್ಶನಾಪುರ
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ
ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 10, 2023 | 7:34 PM

Share

ಯಾದಗಿರಿ, ಆಗಸ್ಟ್​ 10: ಡಿಸಿಎಂ ಡಿಕೆ ಶಿವಕುಮಾರ್​ ಅವರು 120 ಕೋಟಿ ರೂ. ಬೋಗಸ್ ಬಿಲ್ ಆಗಿರುವುದನ್ನು ಕಂಡು ಹಿಡಿದಿದ್ದಾರೆ. ಯಾವ ಕೆಲಸ ಪೂರ್ಣ ಆಗಿದೆ ಅದಕ್ಕೆ ಅಡೆತಡೆ ಇಲ್ಲ ಅಂತ ಹೇಳಿದ್ದಾರೆ. ಹಾಗಾದರೆ ಬೋಗಸ್ ಕೆಲಸಗಳಿಗೂ ಬಿಲ್ ಮಾಡಬೇಕಾ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ (S Darshanapur) ಪ್ರಶ್ನಿಸಿದ್ದಾರೆ. ಡಿಕೆ ಶಿವಕುಮಾರ್​ ವಿರುದ್ಧ ಗುತ್ತಿಗೆದಾರರಿಂದ ಕಮಿಷನ್​ ಆರೋಪ ವಿಚಾರವಾಗಿ ಅವರು ಮಾತನಾಡಿದರು.

ತನಿಖೆ ಎಂದಿದ್ದಕ್ಕೆ ಹೆದರಿಸುತ್ತಿದ್ದಾರೆ

ಬಿಜೆಪಿ ಅವಧಿಯಲ್ಲಿ ಕೆಲಸ ಮಾಡದೆ ಬಿಲ್ ಎತ್ತುವ ಕೆಲಸ ಮಾಡಿದ್ದಾರೆ. ಎಸ್ಐಟಿ ತನಿಖೆ ನಡೆಯುತ್ತಿದೆ, ಹೇಗೆ ಬಿಲ್ ಕೊಡಲು ಬರುತ್ತೆ? ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ತನಿಖೆ ಎಂದಿದ್ದಕ್ಕೆ ಹೆದರಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ: ಪ್ರತಿಪಕ್ಷದ ನಾಯಕನ ಸ್ಥಾನ ಆಗಸ್ಟ್ 15 ರ ನಂತರ ತೀರ್ಮಾನ: ಬಸವರಾಜ ಬೊಮ್ಮಾಯಿ

ಹೆಚ್​.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ವರ್ಗಾವಣೆ ಆಗಿಯೇ ಇಲ್ವಾ?

ಸುಳ್ಳು ಬಾಂಬ್ ಹಾಕುವುದಕ್ಕೆ ಮಾಜಿ ಸಿಎಂದ ಹೆಚ್​​.ಡಿ.ಕುಮಾರಸ್ವಾಮಿ ಕೆಲಸವಾಗಿದೆ. ಪೆನ್​ಡ್ರೈವ್​ನಲ್ಲಿ ಏನಿದೆ ಅಂತಾ ಕುಮಾರಸ್ವಾಮಿ ತೋರಿಸಿದ್ರಾ ಎಂದು ಪ್ರಶ್ನಿಸಿದರು. ಹೆಚ್​.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ವರ್ಗಾವಣೆ ಆಗಿಯೇ ಇಲ್ವಾ? ಹೊರ ಸರ್ಕಾರ ಬಂದ ಮೇಲೆ‌ ವರ್ಗಾವಣೆ ಮಾಡುವುದು ಸಾಮಾನ್ಯ. ಕುಮಾರಸ್ವಾಮಿ ಏನು ಸತ್ಯಹರಿಶ್ಚಂದ್ರನಾ, ಒಂದನೂ ವರ್ಗಾವಣೆ ಮಾಡಿಲ್ವಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮಹದಾಯಿ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಅನುಮತಿ ಕೊಟ್ಟರೆ ನಾಳೆಯೇ ಕೆಲಸ ಆರಂಭ: ಶಾಸಕ ಎನ್​ಹೆಚ್​ ಕೋನರೆಡ್ಡಿ

ಸಚಿವ ಚಲುವರಾಯಸ್ವಾವಿ ವಿರುದ್ಧ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಕೃಷಿ ಇಲಾಖೆಯಲ್ಲಿ ಎಲ್ಲಿ ಟ್ರಾನ್ಸ್‌ಫರ್ ಆಗಿವೆ. ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ಅವರದ್ದೆ ಇದೆ ತನಿಖೆ ಮಾಡಸಲಿ.

ಬಿಬಿಎಂಪಿ ಗುತ್ತಿಗೆದಾರರು ಸತ್ಯ ಹರಿಶ್ಚಂದ್ರರಲ್ಲ: ಎಸ್.ಎನ್.ನಾರಾಯಣಸ್ವಾಮಿ‌

ಕೋಲಾರದ ಬಂಗಾರಪೇಟೆ ಶಾಸಕ‌ ಎಸ್.ಎನ್.ನಾರಾಯಣಸ್ವಾಮಿ‌ ಹೇಳಿಕೆ ನೀಡಿದ್ದು, ಬಿಬಿಎಂಪಿ ಗುತ್ತಿಗೆದಾರರು ಸತ್ಯ ಹರಿಶ್ಚಂದ್ರರಲ್ಲ. ಮನಸೋ ಇಚ್ಛೆ ಕೆಲಸ ಮಾಡುತ್ತಿದ್ದರು. ಅಕ್ರಮಕ್ಕೆ‌ ಕಡಿವಾಣ ಹಾಕಲು ಮತ್ತು ಅಕ್ರಮ ಬಿಲ್ಲುಗಳ ತಡೆಯಿಡಿಯಲು, ಡಿಕೆ ಶಿವಕುಮಾರ್​ ಅವರು ಕಟ್ಟು ನಿಟ್ಟಿನ ಆದೇಶ ಮಾಡಿ ಬಿಲ್ಲುಗಳನ್ನು ತಡೆ ಹಿಡಿದಿದ್ದಾರೆ. ಅದಕ್ಕೆ ಗುತ್ತಿಗೆದಾರರಿಗೆ ಅಕ್ರೋಶ ಬಂದಿದೆ ಎಂದಿದ್ದಾರೆ.

ತನಿಖೆ ನಡೆಯಲಿ ಬಿಲ್ಲುಗಳು ಸಮಂಜಸವಾಗಿದರೆ ಬಿಲ್ಲುಗಳು ಆಗಲಿದೆ. ಹಣ ಕೇಳಿದರೆ ಎಂಬ ಅಪವಾದಕ್ಕೆ ನೀವು ಹಣ ಕೊಟ್ಟಿದ್ದೀರಿ ಎಂದು ಪ್ರಮಾಣ ಮಾಡಿ. ಯಾರು ಹಣ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ದಾಖಲೆ ಇದೆಯಾ? ನಮ್ಮಲ್ಲಿ ಪರ್ಸೆಂಟಿಜ್ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:33 pm, Thu, 10 August 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ