AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ ವಸತಿ ಶಾಲೆಯ ಉಪಾಹಾರದಲ್ಲಿ ಹಾವಿನ ಮರಿ ಪತ್ತೆ! ಉಪ್ಪಿಟ್ಟು ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಉಪ್ಪಿಟ್ಟು ಸೇವಿಸಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಯಾದಗಿರಿ ವಸತಿ ಶಾಲೆಯ ಉಪಾಹಾರದಲ್ಲಿ ಹಾವಿನ ಮರಿ ಪತ್ತೆ! ಉಪ್ಪಿಟ್ಟು ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
ಉಪ್ಪಿಟ್ಟಲ್ಲಿ ಹಾವಿನ ಮರಿ ಪತ್ತೆಯಾಗಿದೆ, ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ
TV9 Web
| Edited By: |

Updated on:Nov 18, 2021 | 4:31 PM

Share

ಯಾದಗಿರಿ: ವಸತಿ ಶಾಲೆಯ ಉಪಾಹಾರದಲ್ಲಿ ಹಾವಿನ ಮರಿ ಪತ್ತೆಯಾಗಿರುವ ಘಟನೆ ಯಾದಗಿರಿ ತಾಲೂಕಿನ ಅಬ್ಬೆತುಮಕೂರಿನ ವಿಶ್ವಾರಾಧ್ಯ ವಿದ್ಯಾವರ್ಧಕ ವಸತಿ ಶಾಲೆಯಲ್ಲಿ ನಡೆದಿದೆ. ಉಪ್ಪಿಟ್ಟು ಸೇವಿಸಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಉಪ್ಪಿಟ್ಟಲ್ಲಿ ಹಾವಿನ ಮರಿ ಹೇಗೆ ಬಂತು ಎಂಬ ಬಗ್ಗೆ ಮಾಹಿತಿ ಇನ್ನು ಬಂದಿಲ್ಲ. ಸದ್ಯ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಸತಿ ಶಾಲೆ ಸಂಬಂಧಪಟ್ಟವರಿಂದ ಯಾವ ಮಾಹಿತಿಯೂ ಸಿಕ್ಕಿಲ್ಲ.

100 ಕ್ಕೂ ಅಧಿಕ ಮಕ್ಕಳು ವಸತಿ ನಿಲಯದಲ್ಲೇ ಇರುತ್ತಾರೆ. ಶಾಲೆಗೆ ಹೋಗುವ ಮುನ್ನ ಉಪ್ಪಿಟ್ಟು ತಿಂದಿದ್ದಾರೆ. ಆದರೆ ಮಕ್ಕಳು ಅರ್ಧ ಉಪಹಾರ ಸೇವಿಸಿದ ಬಳಿಕ ಓರ್ವ ವಿದ್ಯಾರ್ಥಿಗೆ ಉಪ್ಪಿಟ್ಟನಲ್ಲಿ ಸತ್ತಿರುವ ಹಾವು ಕಂಡಿದೆ. ಹಾವು ಕಂಡ ತಕ್ಷಣ ವಿದ್ಯಾರ್ಥಿ ಅಲ್ಲೇ ಇದ್ದ ವಾರ್ಡನ್​ಗೆ ವಿಷಯ ತಿಳಿಸಿದ್ದಾನೆ. ಹಾವು ಇದ್ದ ಉಪಹಾರವನ್ನ ಸುಮಾರು 50 ಕ್ಕೂ ಅಧಿಕ ಮಕ್ಕಳು ಸೇವಿಸಿದ್ದಾರೆ. ಓರ್ವ ವಿದ್ಯಾರ್ಥಿಯ ಪ್ಲೇಟ್​ನಲ್ಲಿ ಹಾವಿನ ಕುತ್ತಿಗೆ ಭಾಗ ಕಂಡ ಕೂಡಲೆ ಉಳಿದ ವಿದ್ಯಾರ್ಥಿಗಳು ಗಾಬರಿಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾದ ಬಳಿಕ ಮೂವರು ವಿದ್ಯಾರ್ಥಿಗಳಿಗೆ ವಾಂತಿ ಶುರುವಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಸದ್ಯ ಜಿಲ್ಲಾಸ್ಪತ್ರೆಗೆ ಯಾದಗಿರಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಭೇಟಿ ನೀಡಿದ್ದಾರೆ. ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಎಲ್ಲಾ ಮಕ್ಕಳನ್ನ ಶಾಸಕ ಮುದ್ನಾಳ್ ಭೇಟಿಯಾಗಿದ್ದಾರೆ.

ಇದನ್ನೂ ಓದಿ

ನಡುರಾತ್ರಿ ರೈಲಿನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಅಮೂಲ್ಯ ಪ್ರಾಣತೆತ್ತ ಮಂಡ್ಯದ ಯುವಕ, ಶ್ರೀರಂಗಪಟ್ಟಣದ ಬಳಿ ಪತ್ತೆಯಾದ ಶವ

Shyam Singha Roy Teaser: ಶ್ಯಾಮ್ ಸಿಂಗಾ ರಾಯ್ ಟೀಸರ್ ರಿಲೀಸ್; ನಾನಿ, ಸಾಯಿ ಪಲ್ಲವಿ ನಟನೆಗೆ ಫ್ಯಾನ್ಸ್ ಫಿದಾ

Published On - 1:12 pm, Thu, 18 November 21