ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆ ಅರ್ಧಕ್ಕೆ ನಿಲ್ಲಿಸಿ ಅಗೌರವ

ಕಾಂಗ್ರೆಸ್ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆ ಅರ್ಧಕ್ಕೆ ನಿಲ್ಲಿಸಿ ಅಗೌರವ ತೋರಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿಯೇ ಈ ರೀತಿ ನಿರ್ಲಕ್ಷ್ಯ ತೋರಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆ ಅರ್ಧಕ್ಕೆ ನಿಲ್ಲಿಸಿ ಅಗೌರವ
ಕಾಂಗ್ರೆಸ್​ ನಾಯಕರು
TV9kannada Web Team

| Edited By: preethi shettigar

Mar 23, 2022 | 2:49 PM

ಯಾದಗಿರಿ: ನಗರದ ಇಂಪೀರಿಯಲ್ ಗಾರ್ಡನ್​ನಲ್ಲಿ ಕಾಂಗ್ರೆಸ್​ನ ಡಿಜಿಟಲ್ ನೊಂದಣಿ ಅಭಿಯಾನ ಪರಿಶೀಲನಾ ಸಭೆ ಇಂದು (ಮಾರ್ಚ್​ 23) ನಡೆದಿದೆ. ಈ ಕಾಂಗ್ರೆಸ್(Congress) ಕಾರ್ಯಕ್ರಮದಲ್ಲಿ ವಂದೇ ಮಾತರಂ(Vande Mataram) ಗೀತೆ ಅರ್ಧಕ್ಕೆ ನಿಲ್ಲಿಸಿ ಅಗೌರವ ತೋರಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿಯೇ ಈ ರೀತಿ ನಿರ್ಲಕ್ಷ್ಯ ತೋರಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಕಾರ್ಯಕರ್ತರಿಂದ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನ

ಯಾದಗಿರಿ ನಗರದ ಇಂಪಿರಿಯಲ್ ಗಾರ್ಡನ್​ನಲ್ಲಿ ನಡೆದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೊಂದಣಿ ಅಭಿಯಾನದ ಪರಿಶೀಲನಾ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಮಾಧ್ಯಮದವರಿಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ವಿಡಿಯೋ ಚಿತ್ರಿಕರಣ ವೇಳೆ ಕೈ ಕಾರ್ಯಕರ್ತರು ಗೂಂಡಾ ವರ್ತನೆ ತೋರಿದ್ದರಿಂದ ಇದನ್ನು ಖಂಡಿಸಿ ಕಾರ್ಯಕ್ರಮದಿಂದ ಪತ್ರಕರ್ತರು ಹೊರ ನಡೆದಿದ್ದಾರೆ.

ಕೆಪಿಸಿಸಿ ಅಧ್ಯಕ್ಷಗೆ ಗೌರವ ಕೊಡದ ಕಾಂಗ್ರೆಸ್ ಕಾರ್ಯಕರ್ತರು; ಅಶಿಸ್ತಿಗೆ ಡಿಕೆಶಿ ಗರಂ

ಯಾದಗಿರಿ ನಗರದ ಇಂಪಿರಿಯಲ್ ಗಾರ್ಡನ್​ನಲ್ಲಿ ನಡೆದ ಸಭೆ ಕಾಂಗ್ರೆಸ್ ಡಿಜಿಟಲ್ ನೊಂದಣಿ ಅಭಿಯಾನ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಕಾಂಗ್ರೆಸ್ ಕಾರ್ಯಕರ್ತರು ಅಗೌರವ ತೋರಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಮಾತಿಗೆ ಕಿಮ್ಮತ್ತು ಕೊಡಲಿಲ್ಲ. ಎಲ್ಲರೂ ಆಸನದ ಮೇಲೆ ಕುಳಿತುಕೊಳ್ಳಬೇಕು. ಇಲ್ಲದಿದ್ರೆ ನಾನು ವಾಪಸ್ ಹೋಗುತ್ತೇನೆ. ಎಲ್ಲರೂ ಸೈಲೆಂಟ್ ಆಗುವವರೆಗೆ ಕಾರ್ಯಕ್ರಮ ಆರಂಭಿಸಲ್ಲ ಎಂದು ಡಿಕೆಶಿ ಕಾಂಗ್ರೆಸ್​ ಕಾರ್ಯಕರ್ತರ ಅಶಿಸ್ತಿಗೆ ಗರಂ ಆಗಿದ್ದಾರೆ.

ಇದನ್ನೂ ಓದಿ: ಇದುವರೆಗೂ ಮೋದಿ ನನಗೆ ಅಗೌರವ ತೋರಿಲ್ಲ, ಮಂಡಿನೋವಿದ್ದ ಕಾರಣ ಅವರೇ ಬಾಗಿಲವರೆಗೂ ಬಿಟ್ಟರು: ಎಚ್​.ಡಿ. ದೇವೇಗೌಡ

ದೇವರಾಜ ಅರಸುಗೆ ಅಗೌರವ! ಕಾಂಗ್ರೆಸ್ ಕಿರುಚಿತ್ರದ ಬಗ್ಗೆ ಕೈ ನಾಯಕರಿಂದಲೇ ಅಸಮಾಧಾನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada