ಬೆಂಗಳೂರು ವಿದ್ಯುತ್ ಸರಬರಾಜು ವ್ಯವಸ್ಥೆ ಸುಧಾರಣೆಗೆ ಎಡಿಬಿಯಿಂದ 100 ಮಿಲಿಯನ್ ಡಾಲರ್ ಸಾಲ
ಏಷ್ಯಾ ಅಭಿವೃದ್ಧಿ ಬ್ಯಾಂಕ್ ಮೊಟ್ಟಮೊದಲ ಬಾರಿಗೆ ಭಾರತ ಸರ್ಕಾರಕ್ಕೆ ಮತ್ತು ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಗೆ (ಬೆಸ್ಕಾಂ) ಸಾರ್ವಭೌಮ ಮತ್ತು ಸಾರ್ವಭೌಮವಲ್ಲದ ಸಾಲಗಳನ್ನು ಜಂಟಿಯಾಗಿ ನೀಡುತ್ತಿದೆ.

ಕರ್ನಾಟಕದ ಬೆಂಗಳೂರು ನಗರದಲ್ಲಿ ವಿದ್ಯುತ್ ಪೂರೈಕೆಯನ್ನು ಆಧುನೀಕರಿಸಿ ಉನ್ನತೀಕರಣಗೊಳಿಸುವುದರೊಂದಿಗೆ ವಿದ್ಯುತ್ ಸರಬರಾಜು ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸಿ ಅದರ ಪೂರೈಕೆಯಲ್ಲಿ ವಿಶ್ವಾಸಾರ್ಹತೆಯನ್ನು ತರಲು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಭಾರತ ಸರ್ಕಾರಕ್ಕೆ 100 ಮಿಲಿಯನ್ ಡಾಲರ್ಗಳ ಸಾಲವನ್ನು ನೀಡಲಿದೆ ಮತ್ತು ಇದಕ್ಕೆ ಸಂಬಂಧಿಸಿದ ಒಪ್ಪಂದವೊಂದಕ್ಕೆ ಡಿಸೆಂಬರ್ 31ರಂದು ಎಡಿಬಿ ಮತ್ತು ಸರ್ಕಾರ ಸಹಿ ಹಾಕಿವೆ.
ಒಪ್ಪಂದಕ್ಕೆ ಬೆಂಗಳೂರು ಸ್ಮಾರ್ಟ್ ವಿದ್ಯುತ್ ವಿತರಣಾ ಯೋಜನೆ ಮತ್ತು ಭಾರತ ಸರ್ಕಾರದ ಹಣಕಾಸು ಸಚುವಾಲಯದ ಅಧೀನದಲ್ಲಿರುವ ಹಣಕಾಸು ವ್ಯವಹಾರಗಳ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಡಾ ಸಿ ಎಸ್ ಮೊಹಪಾತ್ರ, ಹಾಗೂ ಎಡಿಬಿಯ ಭಾರತೀಯ ವ್ಯವಹಾರಗಳ ಉಸ್ತುವಾರಿ ಅಧಿಕಾರಿ ಹೊ ಯುನ್ ಜಿಯಾಂಗ್ ಸಹಿ ಹಾಕಿದ್ದಾರೆ.
ಎಡಿಬಿ, ಭಾರತ ಸರ್ಕಾರಕ್ಕೆ 100ಮಿಲಿಯನ್ ಡಾಲರ್ಗಳ ಸಾರ್ವಭೌಮ ಸಾಲದ ಹೊರತಾಗಿ, ಕರ್ನಾಟಕದ 5 ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಒಂದಾಗಿರುವ ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತಕ್ಕೆ (ಬೆಸ್ಕಾಂ) 90 ಮಿಲಿಯನ್ ಡಾಲರ್ ಸಾಲವನ್ನು ಯಾವುದೇ ಗ್ಯಾರಂಟಿ ಇಲ್ಲದೆ ನೀಡಲಿದೆ.
ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾತಾಡಿದ ಮೊಹಾಪಾತ್ರ, ವಿದ್ಯತ್ ಕೇಬಲ್ಗಳನ್ನು ನೆಲದಡಿ ಅಳವಡಿಸುವುದು ವಿದ್ಯುತ್ ಪೂರೈಕೆಯ ಕ್ಷಮತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ, ಚಂಡಮಾರುತ ಮತ್ತು ನೈಸರ್ಗಿಕ ವಿಕೋಪಗಳಿದ ಉಂಟಾಗುವ ತಾಂತ್ರಿಕ ಮತ್ತು ವಾಣಿಜ್ಯ ನಷ್ಟವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು.

ಏಷ್ಯಾ ಅಭಿವೃದ್ಧಿ ಬ್ಯಾಂಕ್
ಇದೇ ಸಂದರ್ಭದಲ್ಲಿ ಮಾತಾಡಿದ ಜಿಯಾಂಗ್, ಎಡಿಬಿ ಮೊಟ್ಟಮೊದಲ ಬಾರಿಗೆ ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ಯಮಕ್ಕಾಗಿ ಸಾರ್ವಭೌಮ (ಸಾವರೀನ್) ಮತ್ತು ಸಾರ್ವಭೌಮವಲ್ಲದ ಸಾಲಗಳನ್ನು ಜಂಟಿಯಾಗಿ ನೀಡುತ್ತಿದ್ದು, ಇದು ಸಾರ್ವಭೌಮ ಸಾಲವನ್ನು ಗಣನೀಯವಾಗಿ ಮಾಡಿ ಬಂಡವಾಳ ವೆಚ್ಚಕ್ಕಾಗಿ ಹಣ ಸಂಗ್ರಹಿಸಲು ಮಾರುಕಟ್ಟೆ-ಆಧಾರಿತ ಅಪ್ರೋಚ್ ಅಳವಡಿಸಿಕೊಳ್ಳಲು ನೆರವಾಗುತ್ತದೆ ಅಂತ ಹೇಳಿದರು.
ನೆಲದೊಳಗಿನ ವಿದ್ಯುತ್ ಪೂರೈಕೆ ಕೇಬಲ್ಗಳಿಗೆ ಸಮನಾಂತರವಾಗಿ ಸಂಪರ್ಕ ಜಾಲವನ್ನು ಬಲಪಡಿಸಲು 2,800 ಕಿ.ಮೀಗಳಿಗೂ ಹೆಚ್ಚಿನ ಉದ್ದದ ಫೈಬರ್ ಆಪ್ಟಿಕಲ್ ಕೇಬಲ್ಗಳನ್ನು ಸ್ಥಾಪಿಸಲಾಗಿವುದು ಮತ್ತು ಸುಮಾರು 7,200 ಕಿ. ಮೀ ಉದ್ದದ ಸರಬರಾಜು ಮಾರ್ಗಗಳನ್ನು ನೆಲದಡಿ ಹಾಕಲಾಕುವುದು. ಇದು ವಾಣಿಜ್ಯ ಮತ್ತು ತಾಂತ್ರಿಕ ನಷ್ಟವನ್ನು ಶೇಕಡಾ 30ರಷ್ಟು ಕಡಿಮೆ ಮಾಡಲಿದೆ. ಫೈಬರ್ ಆಪ್ಟಿಕಲ್ ಫೈಬರ್ಗಳನ್ನು ಸ್ಮಾರ್ಟ್ ಮೀಟರಿಂಗ್ ವ್ಯವಸ್ಥೆ, ಸರಬರಾಜು ಗ್ರಿಡ್ನಲ್ಲಿನ ಸರಬರಾಜು ಯಾಂತ್ರೀಕೃತಗೊಂಡ ವ್ಯವಸ್ಥೆ ಮತ್ತು ಇತರ ಸಂವಹನ ಜಾಲಗಳಿಗೆ ಬಳಸಲಾಗುವುದು.
ಸದರಿ ಸಾಲವು ಬೆಸ್ಕಾಂ ನೆಲದಡಿ ಕೇಬಲ್ ಅಳವಡಿಕೆ ಮತ್ತು ನಿರ್ವಹಣೆ, ಪರಿಸರ ಮತ್ತು ಸಾಮಾಜಿಕ ಸುರಕ್ಷತೆಗಳು, ಹಣಕಾಸು ನಿರ್ವಹಣೆ ಸಾಮರ್ಥ್ಯವನ್ನು ಬಲಪಡಿಸುತ್ತವೆ ಅಲ್ಲದೆ ಬೆಸ್ಕಾಂ, ಸುಧಾರಿತ ಹಣಕಾಸು ನಿರ್ವಹಣಾ ಸಾಮರ್ಥ್ಯವು ದೇಶೀಯ ಮತ್ತು ಅಂತರರಾಷ್ಟ್ರೀಯ ವಾಣಿಜ್ಯ ಹಣಕಾಸು ಮಾರುಕಟ್ಟೆಯನ್ನು ಪ್ರವೇಶಿಲು ಸಹಾಯ ಮಾಡುತ್ತದೆ.
1966ರಲ್ಲಿ ಅಸ್ತಿತ್ವಕ್ಕೆ ಬಂದ ಎಡಿಬಿ ಬಡತನ ಮತ್ತು ದಾರಿದ್ರ್ಯವನ್ನು ಹೋಗಲಾಡಿಸುವ ಪ್ರಯತ್ನಗಳ ಮೂಲಕ ಸಮೃದ್ಧ, ಅಂತರ್ಗತ, ಸ್ಥಿತಿಸ್ಥಾಪಕ ಮತ್ತು ಬಲಾಢ್ಯ ಏಷ್ಯಾ ಮತ್ತು ಪೆಸಿಫಿಕ್ ನಿರ್ಮಿಸಲು ಬದ್ಧವಾಗಿದೆ. ಎಡಿಬಿ ಈ ಪ್ರಾಂತ್ಯದ 49 ಸದಸ್ಯರು ಸೇರಿದಂತೆ ಒಟ್ಟು 68 ಸದಸ್ಯರ ಒಡೆತನದಲ್ಲಿದೆ.