ಸರಳ ಜೀವಿ ಶಿವಣ್ಣ: ಬೀದಿ ಬದಿ ಟೀ ಕುಡಿದು ಫ್ಯಾನ್ಸ್​ಗಳ ಜತೆ ಕಾಲ ಕಳೆದ ಕರುನಾಡ ಚಕ್ರವರ್ತಿ

ಸರಳ ಜೀವಿ ಶಿವಣ್ಣ: ಬೀದಿ ಬದಿ ಟೀ ಕುಡಿದು ಫ್ಯಾನ್ಸ್​ಗಳ ಜತೆ ಕಾಲ ಕಳೆದ ಕರುನಾಡ ಚಕ್ರವರ್ತಿ

ಮೈಸೂರು: ಸ್ಯಾಂಡಲ್​ವುಡ್​ನಲ್ಲಿ ಸೆಂಚುರಿ ಸ್ಟಾರ್​ ಎನಿಸಿಕೊಂಡಿದ್ದರು ಯಾವುದೇ ಅದ್ಧೂರಿ ಜೀವನಕ್ಕೆ ಒಗ್ಗೂಡದೆ ತೀರ ಸರಳ ಜೀವನವನ್ನು ಇಷ್ಟಪಡುವ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ತಮ್ಮ ಸರಳತೆಯಿಂದಲೇ ಕರ್ನಾಟಕದಾದ್ಯಂತ ಲಕ್ಷಾಂತರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಈಗ ಅಂತದೆ ಸರಳತೆಯ ಮೂಲಕ ಶಿವಣ್ಣ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಸ್ಟಾರ್ ಗಿರಿ ಬಿಟ್ಟು ನಟ ಶಿವರಾಜ್‌ಕುಮಾರ್ ಪುಟ್ ಪಾತ್‌ನಲ್ಲಿ ಟೀ ಕುಡಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಮಾತೃಮಂಡಳಿ ಸರ್ಕಲ್ ಬಳಿಯ ಪುಟ್ ಪಾತ್ ಟೀ ಅಂಗಡಿಗೆ ಭೇಟಿ ಕೊಟ್ಟ ಶಿವಣ್ಣ ಸಾಮಾನ್ಯರಂತೆ ರಸ್ತೆ ಬದಿ ಕುಳಿತು ಸರಳತೆ ಮೆರೆದಿದ್ದಲ್ಲದೆ ಅಭಿಮಾನಿಗಳ ಜೊತೆ ಟೀ ಕುಡಿದು ಅಲ್ಲಿದ್ದವರ ಕುಶಲೋಪರಿ ವಿಚಾರಿಸಿ​ದ್ದಾರೆ.

20 ನಿಮಿಷಕ್ಕೂ ಹೆಚ್ಚು ಕಾಲ ಅಭಿಮಾನಿಗಳ ಜೊತೆ ಶಿವರಾಜ್ ಕುಮಾರ್ ಕಾಲ ಕಳೆದಿದ್ದಾರೆ. ತಮ್ಮ ನೆಚ್ಚಿನ ನಟನ ಜೊತೆ ಫೋಟೋ ತೆಗೆದುಕೊಂಡ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಶಿವಣ್ಣನ ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.