ಕನ್ನಡ ಬಿಗ್ಬಾಸ್ 8ನೇ ಆವೃತ್ತಿಯಲ್ಲಿ ಭಾಗವಹಿಸುತ್ತಿರುವ ಇನ್ನೊಬ್ಬ ಹೊಸ ಮುಖ ಎಂದರೆ ಅದು ಸಿಂಗರ್ ಶಮಂತ್ ಗೌಡ (ಬ್ರೋ ಗೌಡ). ಮೂಲತಃ ಬೆಂಗಳೂರಿನವರಾಗಿರುವ ಬ್ರೋ ಗೌಡ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದು, ಯುವ ಪೀಳಿಗೆಗೆ ತಮ್ಮ ಮೋಟಿವೇಷನಲ್ ಮಾತುಗಳಿಂದ ಪ್ರೇರೆಪಿಸುತ್ತಿರುತ್ತಾರೆ. ಚಲನಚಿತ್ರ ರಂಗದಲ್ಲಿ ಸಕ್ರಿಯರಾಗಿರುವ ಶಮಂತ್ ಗೌಡ ನಟನೆಯ ಜೊತೆಗೆ ನಿರ್ದೇಶಕ ಹಾಗೂ ಸಿಂಗರ್ ಆಗಿಯು ತಮ್ಮ ಪ್ರತಿಭೆ ತೋರಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 8ರ 8ನೇ ಅಭ್ಯರ್ಥಿಯಾಗಿ ಬ್ರೋ ಗೌಡ ಮನೆ ಪ್ರವೇಶಿಸಿದ್ದಾರೆ.
ನನ್ನ ವೇದಿಕೆಯನ್ನು ನಾನೇ ಸೃಷ್ಟಿಸಿಕೊಂಡೆ. ಅಲ್ಲಿ ಹಾಡು, ಮೋಟಿವೇಷನಲ್ ಮಾತುಗಳು ಇತ್ಯಾದಿ ಆರಂಭಿಸಿದೆ ಎಂದು ಶಮಂತ್ ಗೌಡ ತಿಳಿಸಿದರು. ಶಮಂತ್ ಗೌಡ ತಮಗೆ ಬ್ರೋ ಗೌಡ ಎಂಬ ಹೆಸರು ಯಾಕೆ ಬಂತು ಎಂದು ವಿವರಿಸಿದರು. ತಾವು ವೆಬ್ ಸೀರೀಸ್ ಒಂದರಲ್ಲಿ ನಟಿಸಿದ್ದರು. ಅದರಲ್ಲಿ ತಮ್ಮ ಪಾತ್ರದ ಹೆಸರು ಬ್ರೋ ಗೌಡ ಎಂಬುದಾಗಿತ್ತು. ಆ ಬಳಿಕ ತಮ್ಮ ಹೆಸರು ಬ್ರೋ ಗೌಡ ಎಂದೇ ಜನಪ್ರಿಯವಾಯಿತು ಎಂದು ಹೇಳಿದರು.
ಬಿಗ್ ಬಾಸ್ ವೀಕ್ಷಣೆ ಮಾಡೋದು ಎಲ್ಲಿ? ಭಾನುವಾರ ಸಂಜೆ 6 ಗಂಟೆಗೆ ಬಿಗ್ ಬಾಸ್ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಪ್ರತಿ ದಿನ ರಾತ್ರಿ 9:30ರಿಂದ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಗ್ ಬಾಸ್ ಎಲ್ಲಿ ವೀಕ್ಷಣೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ 8 ಪ್ರಸಾರವಾಗುತ್ತದೆ. ಆನ್ಲೈನ್ನಲ್ಲಿ ಬಿಗ್ ಬಾಸ್ ನೋಡಬೇಕು ಎಂದಾದರೆ ನೀವು ವೂಟ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್ ಬಾಸ್ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್ ಕನ್ನಡ ಎಂದು ಸರ್ಚ್ ಮಾಡಿದರೆ ಕಲರ್ಸ್ ಕನ್ನಡ ವಾಹಿನಿ ಸಿಗಲಿದೆ. ಅದರಲ್ಲಿ ನೀವು ಬಿಗ್ ಬಾಸ್ ವೀಕ್ಷಿಸಬಹುದು.
ಇದನ್ನೂ ಓದಿ: Bigg Boss Kannada 8 Launch LIVE Updates: ಏಳನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ನಿಧಿ ಸುಬ್ಬಯ್ಯ
Dhanushree Profile: ಕನ್ನಡ ಬಿಗ್ ಬಾಸ್ ಮನೆಗೆ ಟಿಕ್ಟಾಕ್ ಸ್ಟಾರ್ ಧನುಶ್ರೀ ಎಂಟ್ರಿ