ಲಡಾಖ್ನ ಶಿನ್ಕುನ್ ಲಾ ಅಡಿ ಬಿಆರ್ಓ ಸುರಂಗ ಮಾರ್ಗ ನಿರ್ಮಿಸಲು ರಕ್ಷಣಾ ಸಚಿವಾಲಯ ಅಸ್ತು
ಲಭ್ಯವಿರುವ ಮಾಹಿತಿಯ ಪ್ರಕಾರ ಬಿಆರ್ಓ ನಿರ್ಮಿಸಲಿರುವ ಸುರಂಗಮಾರ್ಗದ ವಿನ್ಯಾಸ ಸರಳ ಮತ್ತು ಅದು ಮೂಲ ಎಲೆಕ್ಟ್ರೋಮೆಕ್ಯಾನಿಕ್ ಫಿಟ್ಟಿಂಗ್ಗಳನ್ನು ಹೊಂದಲಿರುವುದರಿಂದ ಯೋಜನೆಯ ಅಂದಾಜು ವೆಚ್ಚ ರೂ. 1,000 ಕೋಟಿ ಅಗಲಿದೆ.

ಲಡಾಖ್ ಸೆಕ್ಟರ್ನಲ್ಲಿರುವ ಭಾರತೀಯ ಸೇನಾ ತಾಣಗಳಿಗೆ ಅಗತ್ಯ ಸರಂಜಾಮುಗಳನ್ನು ಪೂರೈಸುವುದು ಸಾಧ್ಯವಾಗುವ ಹಾಗೆ 5,091 ಮೀಟರ್ ಎತ್ತರದ ಶಿನ್ಕುನ್ ಲಾ ಪಾಸ್ ಅಡಿಯಲ್ಲಿ ಎಲ್ಲ ಋತುಗಳಲ್ಲೂ ಮನಾಲಿಯಿಂದ ಡರ್ಚಾ-ಪದೂನ್-ನಿಮ್ಮು ಮೂಲಕ ಲೇಹ್ಗೆ ತಲುಪಲು 4.25 ಕಿಲೋಮೀಟರ್ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲು ಆಡಳಿತಾತ್ಮಕ ಅಡೆತಡೆಗಳನ್ನು ತೊಡೆದುಹಾಕಿ ಸದರಿ ಯೋಜನೆಯನ್ನು ಗಡಿ ರಸ್ತೆಗಳ ಸಂಸ್ಥೆಗೆ (ಬಾರ್ಡರ್ ರೋಡ್ಸ್ ಆರ್ಗನೈಸೇಷನ್, ಬಿಆರ್ಓ) ವಹಿಸಲು ಕೇಂದ್ರ ರಕ್ಷಣಾ ಸಚಿವಾಲಯ ನಿರ್ಧರಿಸಿದೆ.ಈ ಹಿಮರಹಿತ ಮಾರ್ಗವು 2024ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಸಚಿವಾಲಯದ ಅಧಿಕಾರಿಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಸದರಿ ಯೋಜನೆಯನ್ನು ಶಿನ್ಕುನ್ ಲಾ ಅಡಿಯಲ್ಲಿ 13.5 ಕಿಲೋಮೀಟರ್ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸುವ ಬಗ್ಗೆ ಶಿಫಾರಸ್ಸು ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿ ನಿಗಮ ನಿಯಮಿತ (ಎನ್ಹೆಚ್ಐಡಿಸಿಎಲ್) ಬದಲಿಗೆ ಬಿಆರ್ಓಗೆ ವಹಿಸುವ ನಿರ್ಧಾರ ತೆಗೆದುಕೊಂಡರು.
‘ಇದೇ ವರ್ಷ ಮಾರ್ಚ್ನಲ್ಲಿ ಬಿಆರ್ಒ ಮತ್ತು ಎನ್ಹೆಚ್ಐಡಿಸಿಎಲ್ ಎರಡೂ ರಕ್ಷಣಾ ಸಚಿವರ ಮುಂದೆ ಪ್ರಾತ್ಯಕ್ಷಿತೆಯನ್ನು ನೀಡಿದವು. ಎರಡೂ ಪ್ರಸ್ತಾವನೆಗಳನ್ನು ಅಧ್ಯಯನ ಮಾಡಿದ ನಂತರ ರಕ್ಷಣಾ ಸಚಿವಾಲಯವು ಕಡಿಮೆ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲು ನಿರ್ಣಯ ತೆಗೆದುಕೊಂಡಿತು. ಈ ಯೋಜನೆಯಲ್ಲಿ ಭಾಗಿಯಾಗಿರುವ ಹಲವಾರು ಹಿರಿಯ ಅಧಿಕಾರಿಗಳು ಕೊವಿಡ್-19 ಸೋಂಕಿಗೆ ತುತ್ತಾಗಿರುವುದರಿಂದ ಸಚಿವಾಲಯದ ನಿರ್ಧಾರವನ್ನು ಲಿಖಿತ ರೂಪದಲ್ಲಿ ಪ್ರಕಟಿಸಲಾಗಿಲ್ಲ,’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಚೀನಾದ ಸೇನೆ ಮೇ 2020ರಲ್ಲಿ ಲಡಾಕ್ ಪ್ರದೇಶದಲ್ಲಿ ಅತಿಕ್ರಮಣ ನಡೆಸಿದ ಮೂರು ವರ್ಷಗಳಷ್ಟು ಮುಂಚಿನಿಂದ ಅಂದರೆ 2017ರಿಂದ ಎನ್ಹೆಚ್ಐಡಿಸಿಎಲ್ ಈ ಯೋಜನೆಯ ಸಮಗ್ರ ಯೋಜನಾ ವರದಿಯನ್ನು ತಯಾರಿಸುತ್ತಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ ಬಿಆರ್ಓ ನಿರ್ಮಿಸಲಿರುವ ಸುರಂಗಮಾರ್ಗದ ವಿನ್ಯಾಸ ಸರಳ ಮತ್ತು ಅದು ಮೂಲ ಎಲೆಕ್ಟ್ರೋಮೆಕ್ಯಾನಿಕ್ ಫಿಟ್ಟಿಂಗ್ಗಳನ್ನು ಹೊಂದಲಿರುವುದರಿಂದ ಯೋಜನೆಯ ಅಂದಾಜು ವೆಚ್ಚ ರೂ. 1,000 ಕೋಟಿ ಅಗಲಿದೆ. 4.25 ಕಿಲೋಮೀಟರ್ ಸುರಂಗ ಮಾರ್ಗದಲ್ಲಿ ಗಾಳಿಗೋಸ್ಕರ ಉದ್ದನೆಯ ಬನಾನಾ ಫ್ಯಾನ್ಗಳನ್ನು ಬಳಸಲಿರುವುದರಿಂದ ವಿದ್ಯುತ್ ಮತ್ತು ನಿರ್ವಹಣಾ ವೆಚ್ಚ ಕಮ್ಮಿಯಾಗಲಿದೆ.
ಇದನ್ನೂ ಓದಿ: Ladakh standoff: ಭಾರತ-ಚೀನಾ ಶೀತಲ ಸಮರ; ಪ್ಯಾಂಗಾಂಗ್ ಸರೋವರದಿಂದ ಮರಳುತ್ತಿರುವ ಯುದ್ಧ ಟ್ಯಾಂಕ್ಗಳು
ಇದನ್ನೂ ಓದಿ: India China Border: ಚೀನಾಕ್ಕೆ ಭೂಭಾಗ ಬಿಟ್ಟುಕೊಟ್ಟಿಲ್ಲ; ರಾಹುಲ್ ಗಾಂಧಿ ಆರೋಪಕ್ಕೆ ಸ್ಪಷ್ಟನೆ ನೀಡಿದ ರಕ್ಷಣಾ ಇಲಾಖೆ




