ನಂಜನಗೂಡಿನಲ್ಲಿ ಸರಗಳ್ಳರ ಕೈಚಳಕ: ಬ್ಯಾಂಕ್ ಉದ್ಯೋಗಿಯ ಚಿನ್ನದ ಸರ ಕಸಿದು ಪರಾರಿ

ಮೈಸೂರು: ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ಸರಗಳ್ಳರು ಕೈಚಳಕ ತೋರಿಸಿದ್ದಾರೆ. ಪಟ್ಟಣದ ಬಸವನಗುಡಿ ಬಡಾವಣೆಯಲ್ಲಿ ಸರಗಳ್ಳತನ ಮಾಡಿ ಪರಾರಿಯಾಗಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬ್ಯಾಂಕ್ ಉದ್ಯೋಗಿಯ ಸರವನ್ನು ಖದೀಮರು ಕಸಿದು ಪರಾರಿಯಾಗಿದ್ದಾರೆ. ಪಟ್ಟಣದ MDCC ಬ್ಯಾಂಕ್ ಉದ್ಯೋಗಿಯಾದ ಪುಷ್ಪಾ ಅವರ 30 ಗ್ರಾಂ ಚಿನ್ನದ ಸರವನ್ನು ಕಳ್ಳರು ಕಸಿದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಡಿಯೋ ಗಾಡಿಯಲ್ಲಿ ಬಂದು ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಸರಗಳ್ಳರು ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಟೋಪಿ ಹಾಕಿಕೊಂಡಿದ್ದರಂತೆ. ಸ್ಥಳಕ್ಕೆ ASP ಶಿವಕುಮಾರ್, DySPಪ್ರಭಾಕರ್ ರಾವ್ […]

ನಂಜನಗೂಡಿನಲ್ಲಿ ಸರಗಳ್ಳರ ಕೈಚಳಕ: ಬ್ಯಾಂಕ್ ಉದ್ಯೋಗಿಯ ಚಿನ್ನದ ಸರ ಕಸಿದು ಪರಾರಿ
Follow us
KUSHAL V
|

Updated on: Sep 20, 2020 | 10:41 AM

ಮೈಸೂರು: ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ಸರಗಳ್ಳರು ಕೈಚಳಕ ತೋರಿಸಿದ್ದಾರೆ. ಪಟ್ಟಣದ ಬಸವನಗುಡಿ ಬಡಾವಣೆಯಲ್ಲಿ ಸರಗಳ್ಳತನ ಮಾಡಿ ಪರಾರಿಯಾಗಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬ್ಯಾಂಕ್ ಉದ್ಯೋಗಿಯ ಸರವನ್ನು ಖದೀಮರು ಕಸಿದು ಪರಾರಿಯಾಗಿದ್ದಾರೆ. ಪಟ್ಟಣದ MDCC ಬ್ಯಾಂಕ್ ಉದ್ಯೋಗಿಯಾದ ಪುಷ್ಪಾ ಅವರ 30 ಗ್ರಾಂ ಚಿನ್ನದ ಸರವನ್ನು ಕಳ್ಳರು ಕಸಿದು ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳು ಡಿಯೋ ಗಾಡಿಯಲ್ಲಿ ಬಂದು ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಸರಗಳ್ಳರು ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಟೋಪಿ ಹಾಕಿಕೊಂಡಿದ್ದರಂತೆ. ಸ್ಥಳಕ್ಕೆ ASP ಶಿವಕುಮಾರ್, DySPಪ್ರಭಾಕರ್ ರಾವ್ ಶಿಂಧೇ ಹಾಗೂ ಇನ್​ಸ್ಪೆಕ್ಟರ್ ಲಕ್ಷ್ಮಿಕಾಂತ ತಳವಾರ್ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.