ಗೌರಿ ಹಬ್ಬದಂದು ಕಾವೇರಿ ಮಾತೆಗೆ ಸಿಎಂ BS ಯಡಿಯೂರಪ್ಪ ಬಾಗಿನ

ಮಂಡ್ಯ: ಗೌರಿ ಹಬ್ಬದಂದು ಕಾವೇರಿ ಮಾತೆಗೆ ಸಿಎಂ BSY ಬಾಗಿನ ಅರ್ಪಿಸಲಿದ್ದಾರೆ ಎಂದು ನಗರದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ  ತಿಳಿಸಿದ್ದಾರೆ. ಗೌರಿ ಹಬ್ಬದಂದು ಬಾಗಿನ ಕಾರ್ಯಕ್ರಮ ನಿಗದಿಯಾಗಿದೆ. KRSನಲ್ಲಿ ಬಾಗಿನ ಅರ್ಪಿಸಿದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಬಿನಿ ಡ್ಯಾಂಗೆ ಬಾಗಿನ ಅರ್ಪಿಸಲಿದ್ದಾರೆ. ಆದರೆ, ಈ ಬಾರಿ ಆಡಂಬರವಾಗಿ ಬಾಗಿನ ಕಾರ್ಯಕ್ರಮ ನಡೆಸಲ್ಲ ಅಂತಾ ಹೇಳಿದ್ದಾರೆ. ಕಳೆದ ಬಾರಿಯೂ ಆಗಸ್ಟ್​ ತಿಂಗಳಲ್ಲಿ KRS ತುಂಬಿ ತುಳುಕಿತ್ತು ಕಾವೇರಿ ಮಾತೆ ಶಕ್ತಿ ತುಂಬಿದ್ದು ಬಾಗಿನ ನೀಡುವುದು ನಮ್ಮ ಧರ್ಮ. ರೈತರಿಗೆ, […]

ಗೌರಿ ಹಬ್ಬದಂದು ಕಾವೇರಿ ಮಾತೆಗೆ ಸಿಎಂ BS ಯಡಿಯೂರಪ್ಪ ಬಾಗಿನ
KUSHAL V

|

Aug 15, 2020 | 1:26 PM

ಮಂಡ್ಯ: ಗೌರಿ ಹಬ್ಬದಂದು ಕಾವೇರಿ ಮಾತೆಗೆ ಸಿಎಂ BSY ಬಾಗಿನ ಅರ್ಪಿಸಲಿದ್ದಾರೆ ಎಂದು ನಗರದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ  ತಿಳಿಸಿದ್ದಾರೆ.

ಗೌರಿ ಹಬ್ಬದಂದು ಬಾಗಿನ ಕಾರ್ಯಕ್ರಮ ನಿಗದಿಯಾಗಿದೆ. KRSನಲ್ಲಿ ಬಾಗಿನ ಅರ್ಪಿಸಿದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಬಿನಿ ಡ್ಯಾಂಗೆ ಬಾಗಿನ ಅರ್ಪಿಸಲಿದ್ದಾರೆ. ಆದರೆ, ಈ ಬಾರಿ ಆಡಂಬರವಾಗಿ ಬಾಗಿನ ಕಾರ್ಯಕ್ರಮ ನಡೆಸಲ್ಲ ಅಂತಾ ಹೇಳಿದ್ದಾರೆ.

ಕಳೆದ ಬಾರಿಯೂ ಆಗಸ್ಟ್​ ತಿಂಗಳಲ್ಲಿ KRS ತುಂಬಿ ತುಳುಕಿತ್ತು ಕಾವೇರಿ ಮಾತೆ ಶಕ್ತಿ ತುಂಬಿದ್ದು ಬಾಗಿನ ನೀಡುವುದು ನಮ್ಮ ಧರ್ಮ. ರೈತರಿಗೆ, ಬೆಂಗಳೂರು ಸೇರಿದಂತೆ ಜನರ ಕುಡಿಯುವ ನೀರಿಗೆ ತೊಂದರೆಯಾಗದಿರಲಿ ಎಂದು ಪೂಜೆ ಸಲ್ಲಿಸಲಾಗುವುದು. ಕಳೆದ ಬಾರಿಯೂ ಯಡಿಯೂರಪ್ಪನವರು ಇದೇ ಆಗಸ್ಟ್​ ತಿಂಗಳಲ್ಲಿ ಬಾಗಿನ ಅರ್ಪಿಸಿದ್ದರು. ಆಗ, ಬೇಸಿಗೆಯಲ್ಲೂ ನೀರಿಗೆ ತೊಂದರೆಯಾಗಿರಲಿಲ್ಲ ಎಂದು ಹೇಳಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada