AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಟ್-2ನಲ್ಲಿ ಏನಿದೆ ಅಂತ ಗೊತ್ತಿದೆ, ಎಲ್ಲದಕ್ಕೂ ಸಿದ್ಧನಿರುವೆ: ಕುಮಾರಸ್ವಾಮಿ ನೈಸ್​​ ಆರೋಪಿಗಳಿಗೆ ಡಿಕೆಶಿ ನೇರಾ ನೇರ ತಿರುಗೇಟು

ನೈಸ್​ ರಸ್ತೆ ಟೋಲ್, ಭೂಸ್ವಾಧೀನ ವಿಚಾರದ ಬಗ್ಗೆ ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ಹಾಗೂ ಸಿಎಂ ಡಿಕೆ ಶಿವಕುಮಾರ್ ನಡುವಿನ ಆರೋಪ ಪ್ರತ್ಯಾರೋಪ ಮತ್ತೊಂದು ಹಂತಕ್ಕೆ ಹೋಗಿದೆ. ದೇಶವೇ ಅಲ್ಲೋಲ, ಕಲ್ಲೋಲ ಆಗೋ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದ ಕುಮಾರಸ್ವಾಮಿ, ಇಂದು (ಸೆ.28) ಪುಟಗಟ್ಟಲೆ ದಾಖಲೆ ಸಮೇತ, ಪಿಪಿಟಿ ಪ್ರಸೆಂಟೇಸನ್​ನೊಂದಿಗೆ ನಥಿಂಗ್ ನೈಸ್​ ಅನ್ನೋ ಮೂಲಕ ದಾಖಲೆಯೊಂದಿಗೆ ಡಿಕೆಶಿ ವಿರುದ್ಧ ಆರೋಪಗಳ ಮೇಲೆ ಆರೋಪ ಮಾಡಿದ್ದಾರೆ. ಇದೀಗ ಇದಕ್ಕೆ ಡಿಕೆ ಶಿವಕುಮಾರ್ ನೇರಾ ನೇರ ತಿರುಗೇಟು ನೀಡಿದ್ದಾರೆ.

ಪಾರ್ಟ್-2ನಲ್ಲಿ ಏನಿದೆ ಅಂತ ಗೊತ್ತಿದೆ, ಎಲ್ಲದಕ್ಕೂ ಸಿದ್ಧನಿರುವೆ: ಕುಮಾರಸ್ವಾಮಿ ನೈಸ್​​ ಆರೋಪಿಗಳಿಗೆ ಡಿಕೆಶಿ ನೇರಾ ನೇರ ತಿರುಗೇಟು
Dk Shivakumar
ರಮೇಶ್ ಬಿ. ಜವಳಗೇರಾ
|

Updated on: Sep 29, 2026 | 8:57 PM

Share

ನವದೆಹಲಿ, (ಸೆಪ್ಟೆಂಬರ್ 29): ನೈಸ್ ಯೋಜನೆ ಮತ್ತೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಬಂದಿದೆ. ಯೋಜನೆಯಲ್ಲಿ 3 ಲಕ್ಷ ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ ಆರೋಪಗಳಿಗೆ ಉತ್ತರ ಕೊಡುವುದಿಲ್ಲ. ಅವರಿಗೆ ಸಂಸ್ಕಾರ ಸಂಸ್ಕೃತಿ ಯಾವುದೂ ಇಲ್ಲ. ಬ್ಲ್ಯಾಕ್​ಮೇಲ್ ಮಾಡಿದರೆ ನಾನು ಹೆದರುತ್ತೇನೆ ಅಂದುಕೊಂಡಿದ್ದಾರೆ. ಹೆದರುವ ಜಾಯಮಾನ ನಂದಲ್ಲ. IT, ED ಎಲ್ಲಾ ಆಗೋಯ್ತು. ಇನ್ನೇನು ಮಾಡುತ್ತಾರೋ ಮಾಡ್ಲಿ. ನಾನು ಎಲ್ಲದಕ್ಕೂ ಸಿದ್ಧನಿರುವೆ ಎಂದು ನೇರ ನೇರವಾಗಿ ಸವಾಲು ಹಾಕಿದರು.

ನೈಸ್ ಪ್ಲ್ಯಾನಿಂಗ್ ಅಥಾರಿಟಿಯಲ್ಲಿ ಕುಮಾರಸ್ವಾಮಿ ಆಸ್ತಿ ಇಲ್ವಾ?

ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಇಷ್ಟು ದಿನ ಯಾಕೆ ಸುಮ್ನೆ ಇದ್ದರು? ಕುಮಾರಸ್ವಾಮಿಯವರ ತಂದೆಯೇ ಸಹಿ ಹಾಕಿದ್ದಾರೆ. ಈ ನಡುವೆ ಬೇಕಾದಷ್ಟು ಬೇನಾಮಿ ಹಗರಣ ನಡೆದಿದೆ. ಪಾಪ ಅವರು ಬಹಳ ಹತಾಶರಾಗಿದ್ದಾರೆ. ಬಿಜೆಪಿಯಿಂದ ಕುಮಾರಸ್ವಾಮಿಗೆ ಬಹಳ ಒತ್ತಡವಿದೆ. ನಂದು ಆಸ್ತಿ ಇದೆ, ನನ್ನ ಮಕ್ಕಳು ಆಸ್ತಿ ತೆಗೆದುಕೊಳ್ಳಬಾರದಾ? ಕಾನೂನಿನ ವ್ಯಾಪ್ತಿಯಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ನೈಸ್ ಪ್ಲ್ಯಾನಿಂಗ್ ಅಥಾರಿಟಿಯಲ್ಲಿ ಕುಮಾರಸ್ವಾಮಿ ಆಸ್ತಿ ಇಲ್ವಾ? ಊರು ಬಿಟ್ಟು ಬಂದು ಇಲ್ಲಿ ಆಸ್ತಿ ಮಾಡಿಲ್ವಾ? ನನ್ನ ಮಕ್ಕಳಿಗೆ ಶಕ್ತಿಯಿದ್ದರೆ ಇನ್ನೂ ಆಸ್ತಿ ಖರೀದಿ ಮಾಡುತ್ತಾರೆ. ನಾವು ಎಷ್ಟಾದರೂ ಖರೀದಿಸುತ್ತೇವೆ, ಅವರೇನು ಐಟಿ ಆಫಿಸರಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸಿಎಂ ಡಿಕೆ ಶಿವಕುಮಾರ್​​ ಕುಟುಂಬದ ವಿರುದ್ಧವೇ ಭೂಕಬಳಿಕೆ ಆರೋಪ ಮಾಡಿದ ಕುಮಾರಸ್ವಾಮಿ: ಹಲವು ದಾಖಲೆಗಳೂ ರಿಲೀಸ್​​

ವ್ಯಾಪಾರ ವ್ಯವಹಾರ ಮಾಡುವ ಶಕ್ತಿಯಿದೆ

ಲಂಚ ತೆಗೆದುಕೊಂಡ್ನಾ?, ವ್ಯಾಪಾರ ವ್ಯವಹಾರ ಮಾಡುವ ಶಕ್ತಿಯಿದೆ. ನಾನು ನನ್ನ ಆಸ್ತಿಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದ್ದೇನೆ. ಅವರು ಈಗಾಗಲೇ ಎಲ್ಲಾ ಸಂಸ್ಥೆಗಳಿಗೆ ಸಾಕಷ್ಟು ದಾಖಲೆ ನೀಡಿದ್ದಾರೆ. ಇನ್ನಷ್ಟು ದಾಖಲೆ ಕೊಡಲಿ, ಸುಳ್ಳೇ ಅವರ ಮನೆಯ ದೇವರು. ಎಷ್ಟೇ ಆದ್ರೂ ಸಿನಿಮಾ ನಿರ್ದೇಶಕ, ನಿರ್ಮಾಪಕ, ನಟ ಎಲ್ಲ ಇದ್ದಾರೆ. ಕುಮಾರಸ್ವಾಮಿ ಹೇಳಿದ್ದು ಎಲ್ಲವೂ ಸುಳ್ಳಿನ ಕಂತೆ. ನೈಸ್ ಜೊತೆ ವ್ಯವಹಾರ ಕಿತ್ತೋಯ್ತು ಎಂದು ಆರೋಪ ಮಾಡ್ತಿದ್ದಾರೆ. ಕುಮಾರಸ್ವಾಮಿ ಅಣ್ಣ ತಮ್ಮನ ಆಸ್ತಿ ಎಷ್ಟಿದೆ,ಎಲ್ಲಿದೆ ಎಂದುಗೊತ್ತಿಲ್ವಾ? ವಿಧಾನಸೌಧದ ಮುಂದೆ ಅಲ್ಲ, ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ ಎಂದು ಪ್ರತಿ ಸವಾಲು ಹಾಕಿದ ಡಿಕೆಶಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ, ಅದೇನು ಮಾಡುತ್ತಾರೋ ಮಾಡಲಿ. ಯಾವುದೇ ಗೊಡ್ಡು ಬೆದರಿಕೆಗೆ ಡಿ.ಕೆ.ಶಿವಕುಮಾರ್ ಹೆದರುವುದಿಲ್ಲ. ಇಂತಹ ಬ್ಲ್ಯಾಕ್​ಮೇಲ್​ಗೆ ನಾವು ಬಗ್ಗಲ್ಲ ಎಂದು ಖಡಕ್ ಆಗಿ ತಿರುಗೇಟು ನೀಡಿದರು.

ನನ್ನಿಂದ ನಮ್ಮಪ್ಪ ಅಂತಾರೆ

ನಮ್ಮ ಸರ್ಕಾರದ ಜನಪ್ರಿಯತೆ ತಡೆಯಲು ಸಾಧ್ಯವಾಗುತ್ತಿಲ್ಲ. ಅಸೂಯೆಗೆ ಮದ್ದಿಲ್ಲ, ಪಾರ್ಟ್-2ನಲ್ಲಿ ಏನಿದೆ ಎಲ್ಲ ಗೊತ್ತಿದೆ. ಇವರು ಸ್ವಾಮೀಜಿ ಫೋನ್ ಟ್ಯಾಪ್ ಮಾಡಿಸಿದವರು. ಇವರು ಯಾರನ್ನು ಬಿಟ್ಟಿದ್ದಾರೆ ಹೇಳಿ, ಇನ್ನು ನನ್ನನ್ನ ಬಿಡುತ್ತಾರಾ? ತಂದೆಯನ್ನೇ ಬಿಡಲ್ಲ, ನನ್ನಿಂದ ನಮ್ಮಪ್ಪ ಅಂತಾರೆ ಎಂದು ಕಿಡಿಕಾರಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More