ಕೊರೊನಾ ಮುಕ್ತ ಜಿಲ್ಲೆಯಾಗಿದ್ದ ಮೈಸೂರು ಮತ್ತೆ ಸೋಂಕಿನ ರಾಜಧಾನಿಯಾಗ್ತಿದೆ. ಏಕೆ?
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಕಂಟ್ರೋಲ್ ತಪ್ಪಿದೆ. ಮೈಸೂರು ಸೋಂಕಿತರ ರಾಜಧಾನಿಯಾಗ್ತಿದೆ. ಡೆಡ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ಈ ಹಿಂದೆ ಕೊರೊನಾ ಮುಕ್ತವಾಗಿದ್ದ ಜಿಲ್ಲೆ ಮತ್ತೆ ಕೊರೊನಾ ಆರ್ಭಟಕ್ಕೆ ತತ್ತರಿಸಿದೆ. ಕೊರೊನಾ ದಿನದಿಂದ ದಿನಕ್ಕೆ ಏರಿಕೆ: ಆಗಸ್ಟ್ 24 ರಂದು 25 ಸಾವು, 202 ಪಾಸಿಟಿವ್ ಆಗಸ್ಟ್ 25 ರಂದು 16 ಸಾವು 1331 ಪಾಸಿಟಿವ್ ಆಗಸ್ಟ್ 26 ರಂದು 20 ಸಾವು 951 ಪಾಸಿಟಿವ್ ಆಗಸ್ಟ್ 27 ರಂದು 18 ಸಾವು […]
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಕಂಟ್ರೋಲ್ ತಪ್ಪಿದೆ. ಮೈಸೂರು ಸೋಂಕಿತರ ರಾಜಧಾನಿಯಾಗ್ತಿದೆ. ಡೆಡ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ಈ ಹಿಂದೆ ಕೊರೊನಾ ಮುಕ್ತವಾಗಿದ್ದ ಜಿಲ್ಲೆ ಮತ್ತೆ ಕೊರೊನಾ ಆರ್ಭಟಕ್ಕೆ ತತ್ತರಿಸಿದೆ.
ಕೊರೊನಾ ದಿನದಿಂದ ದಿನಕ್ಕೆ ಏರಿಕೆ: ಆಗಸ್ಟ್ 24 ರಂದು 25 ಸಾವು, 202 ಪಾಸಿಟಿವ್ ಆಗಸ್ಟ್ 25 ರಂದು 16 ಸಾವು 1331 ಪಾಸಿಟಿವ್ ಆಗಸ್ಟ್ 26 ರಂದು 20 ಸಾವು 951 ಪಾಸಿಟಿವ್ ಆಗಸ್ಟ್ 27 ರಂದು 18 ಸಾವು 895 ಪಾಸಿಟಿವ್ 4 ದಿನದಲ್ಲಿ ಕ್ರೂರಿ ಕೊರೊನಾಗೆ ಬಲಿಯಾದವರ ಸಂಖ್ಯೆ 79 4 ದಿನದಲ್ಲಿ ಮೈಸೂರಿನಲ್ಲಿ 3379 ಪಾಸಿಟಿವ್ ಪತ್ತೆ. ಈ ರೀತಿ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಏರುತ್ತಿದೆ.
ಮೈಸೂರಿನಲ್ಲಿ ಕೊರೊನಾ ಅಟ್ಟಹಾಸಕ್ಕೆ ಈ 5 ಅಂಶಗಳೇ ಕಾರಣ ಕಾರಣ ನಂಬರ್- 01 ಮೈಸೂರು ಜಿಲ್ಲೆಯಲ್ಲಿ ಹಳಿ ತಪ್ಪಿದ ಜಿಲ್ಲಾಡಳಿತದ ಯಂತ್ರ ಮೈಸೂರಿನಲ್ಲಿ ಅಧಿಕಾರಿಗಳಿಗೆ ವಕ್ಕರಿಸಿದ ಮಹಾಮಾರಿ ಕೊರೊನಾ ಮೈಸೂರು ಎಸ್‌ಪಿ ರಿಷ್ಯಂತ್‌ಗೆ ಪಾಸಿಟಿವ್- ಹೋಮ್ ಐಸೋಲೇಷನ್ ಮೈಸೂರು ಪೊಲೀಸ್ ಆಯುಕ್ತರಿಗೆ ಪಾಸಿಟಿವ್-ಹೋಮ್ ಐಸೋಲೇಷನ್ ಮೈಸೂರು ಡಿಸಿ ಅಭಿರಾಂ ಜಿ ಶಂಕರ್ ಪ್ರಾಥಮಿಕ ಸಂಪರ್ಕ- ಹೋಂ ಕ್ವಾರಂಟೈನ್ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಪ್ರಾಥಮಿಕ ಸಂಪರ್ಕ ಮೈಸೂರು ಜಿಲ್ಲೆಯ ಬಹುತೇಕ ಅಧಿಕಾರಿಗಳು ಐಸೋಲೇಷನ್, ಕ್ವಾರಂಟೈನ್
ಕಾರಣ ನಂಬರ್- 02 ಮೈಸೂರು ಜಿಲ್ಲೆಯಲ್ಲಿ ಅಧಿಕಾರಿಗಳ-ವೈದ್ಯರ ಮುಸುಕಿನ ಗುದ್ದಾಟ ಟಿಹೆಚ್‌ಒ ಡಾ. ನಾಗೇಂದ್ರ ಆತ್ಮಹತ್ಯೆ ನಂತರ ಬದಲಾದ ಪರಿಸ್ಥಿತಿ ಅಧಿಕಾರಿಗಳು-ವೈದ್ಯಾಧಿಕಾರಿಗಳ ನಡುವೆ ಸಮನ್ವಯದ ಕೊರತೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ನಿರ್ವಹಣೆಗೆ ಪೆಟ್ಟು
ಕಾರಣ ನಂಬರ್ -03 ಮೈಸೂರು ಜಿಲ್ಲೆಯಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಕೊವಿಡ್ ಡ್ಯೂಟಿಗೆ ಸಿಗುತ್ತಿಲ್ಲ ಗುತ್ತಿಗೆ ಆಧಾರದ ನರ್ಸ್‌ಗಳು ನರ್ಸ್‌ಗಳಿಗೆ 9 ಸಾವಿರ ಸಂಬಳ ನಿಗದಿ ಮಾಡಿರುವ ಸರ್ಕಾರ ₹20 ಸಾವಿರ ವೇತನಕ್ಕೆ ಒತ್ತಾಯಿಸಿ ಕೆಲಸದಿಂದ ದೂರವಿರುವ ನರ್ಸ್‌ಗಳು ಮೈಸೂರು ಜಿಲ್ಲೆಯಲ್ಲಿ ಡಿ ಗ್ರೂಪ್ ನೌಕರರ ಕೊರತೆ
ಕಾರಣ ನಂಬರ್- 04 ಮೈಸೂರಿನಲ್ಲಿ ಕೊರೊನಾ ವಾರಿಯರ್ಸ್‌ಗಳಲ್ಲಿ ಹೆಚ್ಚಾದ ಸೋಂಕು ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸ್, ಅಧಿಕಾರಿಗಳಿಗೆ ಪಾಸಿಟಿವ್ ಕೊರೊನಾ ಡ್ಯೂಟಿಯಲ್ಲಿರುವ ವೈದ್ಯರು, ನರ್ಸ್‌ಗಳಲ್ಲಿ ಹೆಚ್ಚಾದ ಪಾಸಿಟಿವ್ ಇದರಿಂದ ಕೊವಿಡ್ ಕೆಲಸ ಮಾಡಲು ಆತಂಕಪಡುತ್ತಿರುವ ವೈದ್ಯರು
ಕಾರಣ ನಂಬರ್- 05 ಕೊವಿಡ್ ಸೋಂಕಿತರಿಗೆ ಸಿಗುತ್ತಿಲ್ಲ ಸೂಕ್ತ ಮಾರ್ಗದರ್ಶನ ಕೊರೊನಾ ಸೋಂಕಿತರಿಗೆ ಸಿಗುತ್ತಿಲ್ಲ ಮೂಲ ಸೌಕರ್ಯ ಐಸೋಲೇಷನ್ ಆದವರಿಗೂ ಸಿಗುತ್ತಿಲ್ಲ ಮಾಹಿತಿ ಆಸ್ಪತ್ರೆಗಳಲ್ಲೂ ಸೋಂಕಿತರಿಗೆ ಸಿಗುತ್ತಿಲ್ಲ ಮೂಲ ಸೌಕರ್ಯ ಬಿಸಿ ನೀರು ಕೂಡ ಸೋಂಕಿತರಿಗೆ ಸೂಕ್ತ ಸಮಯಕ್ಕೆ ಸಿಗುತ್ತಿಲ್ಲ ಮೈಸೂರಿನಲ್ಲಿ ಹಿರಿಯ ವೈದ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿಲ್ಲ ವೈದ್ಯಕೀಯ ವಿದ್ಯಾರ್ಥಿಗಳ ಮೂಲಕ ಸೋಂಕಿತರಿಗೆ ಚಿಕಿತ್ಸೆ ಮೈಸೂರು ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಬೆಡ್, ಆಕ್ಸಿಜನ್ ಕೊರತೆ