ಲಾಕ್​ಡೌನ್ 4.O: ಕಂಟೇನ್ಮೆಂಟ್‌ ಜೋನ್‌ಗಳಿಗೆ ಕಠಿಣ ರೂಲ್ಸ್‌, ನಿಯಮ ಉಲ್ಲಂಘಿಸಿದ್ರೆ 1 ವರ್ಷ ಜೈಲು!

ಸಾಧು ಶ್ರೀನಾಥ್​

|

Updated on:May 18, 2020 | 7:23 AM

ಬೆಂಗಳೂರು: ಮೂರು ಲಾಕ್‌ಡೌನ್‌ ಮುಗಿದು ಇಂದಿನಿಂದ ನಾಲ್ಕನೇ ಲಾಕ್‌ಡೌನ್‌ಗೆ ಕಾಲಿಡುತ್ತಿದ್ದೇವೆ. ಈ ನಾಲ್ಕನೇ ಹಂತದಲ್ಲಿ ಹಲವು ಸಡಿಲಿಕೆಗಳಾಗಿವೆ. ಆದ್ರೆ ಬೆಂಗಳೂರಿನ ಆ ಹದಿನೇಳು ಏರಿಯಾಗಳಲ್ಲಿ ಮಾತ್ರ ಯಾವ ರಿಲ್ಯಾಕ್ಸ್‌ ಇಲ್ಲ.. ಯಾವ ರಿಲೀಫ್‌ ಇಲ್. ಆ ಏರಿಯಾಗಳಲ್ಲಿ ಮತ್ತಷ್ಟು ಕಠಿಣ ರೂಲ್ಸ್‌ಗಳು ಜಾರಿಯಾಗಿವೆ. ಇಲ್ಲ.. ಇಲ್ಲ.. ಮುಕ್ತಿಯೇ ಇಲ್ಲ. ಲಾಕ್‌ಡೌನ್‌ ಬಂಧನದಿಂದ ಬಿಡುಗಡೆಯೇ ಇಲ್ಲ. ಕಂಟೇನ್ಮೆಂಟ್‌ ಜೋನ್‌ನಲ್ಲಿದ್ದವರು ಹೊರಗೆ ಬರುವಂತೆಯೇ ಇಲ್ಲ. ಒಂದು.. ಎರಡು.. ಮೂರು ಅಂತಾ ದೇಶಕ್ಕೆ ಮೂರು ಬಾರಿ ಲಾಕ್‌ಡೌನ್‌ ವಿಧಿಸಿದ್ದ ಕೇಂದ್ರ, ಇವತ್ತು […]

ಲಾಕ್​ಡೌನ್ 4.O: ಕಂಟೇನ್ಮೆಂಟ್‌ ಜೋನ್‌ಗಳಿಗೆ ಕಠಿಣ ರೂಲ್ಸ್‌, ನಿಯಮ ಉಲ್ಲಂಘಿಸಿದ್ರೆ 1 ವರ್ಷ ಜೈಲು!

ಬೆಂಗಳೂರು: ಮೂರು ಲಾಕ್‌ಡೌನ್‌ ಮುಗಿದು ಇಂದಿನಿಂದ ನಾಲ್ಕನೇ ಲಾಕ್‌ಡೌನ್‌ಗೆ ಕಾಲಿಡುತ್ತಿದ್ದೇವೆ. ಈ ನಾಲ್ಕನೇ ಹಂತದಲ್ಲಿ ಹಲವು ಸಡಿಲಿಕೆಗಳಾಗಿವೆ. ಆದ್ರೆ ಬೆಂಗಳೂರಿನ ಆ ಹದಿನೇಳು ಏರಿಯಾಗಳಲ್ಲಿ ಮಾತ್ರ ಯಾವ ರಿಲ್ಯಾಕ್ಸ್‌ ಇಲ್ಲ.. ಯಾವ ರಿಲೀಫ್‌ ಇಲ್. ಆ ಏರಿಯಾಗಳಲ್ಲಿ ಮತ್ತಷ್ಟು ಕಠಿಣ ರೂಲ್ಸ್‌ಗಳು ಜಾರಿಯಾಗಿವೆ.

ಇಲ್ಲ.. ಇಲ್ಲ.. ಮುಕ್ತಿಯೇ ಇಲ್ಲ. ಲಾಕ್‌ಡೌನ್‌ ಬಂಧನದಿಂದ ಬಿಡುಗಡೆಯೇ ಇಲ್ಲ. ಕಂಟೇನ್ಮೆಂಟ್‌ ಜೋನ್‌ನಲ್ಲಿದ್ದವರು ಹೊರಗೆ ಬರುವಂತೆಯೇ ಇಲ್ಲ. ಒಂದು.. ಎರಡು.. ಮೂರು ಅಂತಾ ದೇಶಕ್ಕೆ ಮೂರು ಬಾರಿ ಲಾಕ್‌ಡೌನ್‌ ವಿಧಿಸಿದ್ದ ಕೇಂದ್ರ, ಇವತ್ತು ನಾಲ್ಕನೇ ಹಂತದ ಲಾಕ್‌ಡೌನ್‌ ಘೋಷಣೆ ಮಾಡಿದೆ. ಅದ್ರಲ್ಲೂ ಕಂಟೇನ್ಮೆಂಟ್‌ ಜೋನ್‌ಗಳ ಬಗ್ಗೆ ಹೆಚ್ಚು ಗಮನಹರಿಸಿರೋ ಮೋದಿ ಸರ್ಕಾರ ಮತ್ತಷ್ಟು ಕಠಿಣ ರೂಲ್ಸ್‌ಗಳನ್ನ ಬಿಡುಗಡೆ ಮಾಡಿದೆ.

ಅಷ್ಟಕ್ಕೂ ಬೆಂಗಳೂರಿನಲ್ಲಿರೋ ಕಂಟೇನ್ಮೆಂಟ್‌ ಜೋನ್‌ಗಳು ಯಾವುವು..? ಕಂಟೇನ್ಮೆಂಟ್‌ ರೂಲ್ಸ್‌ಗಳೇನು ಅನ್ನೋದನ್ನ ಡಿಟೇಲಾಗಿ ತೋರಿಸ್ತೀವಿ ನೋಡಿ.

ಯೆಸ್‌.. ಕೊರೊನಾ ಹೊಡೆದೊಡೆಸಲು ವಿಧಿಸಿದ್ದ ಮೂರನೇ ಹಂತದ ಲಾಕ್‌ಡೌನ್‌ ಅಂತ್ಯವಾಗಿದೆ. ಇಂದಿನಿಂದ ಲಾಕ್‌ಡೌನ್‌ 4.0 ಜಾರಿಗೆ ಬರಲಿದೆ. ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಹಲವು ಸಡಿಲಿಕೆ ನೀಡಿರೋ ಕೇಂದ್ರ ಸರ್ಕಾರ ಕಂಟೇನ್ಮೆಂಟ್‌ ಜೋನ್‌ಗಳಿಗೆ ಮಾತ್ರ ಮತ್ತಷ್ಟು ಕಠಿಣ ರೂಲ್ಸ್‌ ಜಾರಿಗೊಳಿಸಿದೆ. ಹಾಗಾದ್ರೆ ಹೊಸ ಮಾರ್ಗಸೂಚಿಯಲ್ಲಿ ಏನಿದೆ ಅನ್ನೋದನ್ನ ನೋಡೋದಾದ್ರೆ.

ಕಂಟೇನ್ಮೆಂಟ್‌ನಲ್ಲಿ ಕಮಕ್‌ಕಿಮಕ್‌ ಅನ್ನಂಗಿಲ್ಲ..!  ವಾಹನ ಓಡಾಟ, ಬಸ್‌ ಓಡಾಟಕ್ಕೆ ಬೇರೆ ಏರಿಯಾಗಳಲ್ಲಿ ನಾಳೆಯಿಂದ ಸ್ವಲ್ಪ ಸಡಿಲಿಕೆಯಾಗಲಿದೆ. ಆದ್ರೆ ಕಂಟೇನ್ಮೆಂಟ್‌ ಜೋನ್‌ಗಳಲ್ಲಿ ಮಾತ್ರ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಸಂಚಾರಕ್ಕೆ ಅವಕಾಶವೇ ಇರೋದಿಲ್ಲ. ಅದ್ರಲ್ಲೂ 10 ವರ್ಷದೊಳಗಿನವರು ಮನೆಯಿಂದ ಹೊರಬರುವಂತಿಲ್ಲ. ಅದ್ರಂತೆ 60 ವರ್ಷ ಮೇಲ್ಪಟ್ಟ ವೃದ್ಧರು ಕೂಡ ಮನೆಯಲ್ಲೇ ಇರಬೇಕು.

ಈ ಜೋನ್‌ಗಳ ಮನೆಮನೆಗಳಲ್ಲಿ ಆರೋಗ್ಯ ಸರ್ವೆ ಮಾಡಬೇಕು ಅಂತಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ಕೊಟ್ಟಿದೆ. ಅಷ್ಟೇ ಅಲ್ಲ ಈ ಜೋನ್‌ನಲ್ಲಿ ವಾಸಿಸೋ ಎಲ್ರೂ ತಮ್ಮ ಮೊಬೈಲ್‌ಗಳಲ್ಲಿ ಆರೋಗ್ಯ ಸೇತು ಌಪ್ ಬಳಸುವುದು ಕಡ್ಡಾಯವಾಗಿದೆ. ಇನ್ನು ಇಲ್ಲಿ ಅಗತ್ಯವಸ್ತು ಸಾಗಣೆ ವಾಹನಗಳಿಗೆ ಮಾತ್ರ ಅವಕಾಶ ಇರುತ್ತೆ.

ಇನ್ನು ಹೆಚ್ಚು ಸೋಂಕಿತರು ಇರೋ ಪ್ರದೇಶಗಳನ್ನ ಬೆಂಗಳೂರಿನಲ್ಲಿ ಸೀಲ್‌ಡೌನ್‌ ಮಾಡಲಾಗಿದ್ರೆ, ಸೋಂಕಿತರು ಇರೋ ಬಹುತೇಕ ಏರಿಯಾಗಳು ಕಂಟೇನ್ಮೆಂಟ್‌ ಜೋನ್‌ಗಳಾಗಿವೆ. ಬೆಂಗಳೂರಿನ 6 ವಲಯಗಳ ಪೈಕಿ 17 ಕಂಟೇನ್ಮೆಂಟ್ ಜೋನ್‌ಗಳನ್ನಾಗಿ ಮಾಡಲಾಗಿದೆ. ಈ ಏರಿಯಾಗಳಲ್ಲಿ ಯಾವುದಕ್ಕೂ ರಿಲೀಫ್‌ ಇರೋದಿಲ್ಲ. ಅಷ್ಟಕ್ಕೂ ನಗರದಲ್ಲಿರೋ ಕಂಟೇನ್ಮೆಂಟ್‌ ಜೋನ್‌ಗಳು ಯಾವುವು? ಅಲ್ಲಿ ಎಷ್ಟೆಷ್ಟು ಕೇಸ್‌ಗಳಿವೆ ಅನ್ನೋದನ್ನ ತೋರಿಸ್ತೀವಿ ನೋಡಿ.

ಕಂಟೇನ್ಮೆಂಟ್‌ ಜೋನ್‌ -ಎಷ್ಟು ಪ್ರಕರಣ? ಪಾದರಾಯನಪುರ -57 ಶಿವಾಜಿನಗರ -30 ಹೊಂಗಸಂದ್ರ -38 ಕೆ.ಆರ್.ಮಾರುಕಟ್ಟೆ -7 ಹಗದೂರು -6 ಹಂಪಿ ನಗರ -4 ಮಂಗಮ್ಮನ ಪಾಳ್ಯ -3 ವಸಂತ ನಗರ -2 ಭೈರಸಂದ್ರ -1 ಯಶವಂತಪುರ -1 ದೀಪಾಂಜಲಿನಗರ -1 ಬೀಳೇಕಹಳ್ಳಿ -1 ಬೇಗೂರು -1 ಬಿಟಿಎಂ ಲೇಔಟ್ -1 ಮಲ್ಲೇಶ್ವರಂ -1 ಹೆಚ್‌ಬಿಆರ್ ಲೇಔಟ್ -1 ಹೇರೊಹಳ್ಳಿ -1

ಒಟ್ನಲ್ಲಿ ದೇಶದ ಮೇಲೆ ನಾಲ್ಕನೇ ಹಂತದ ಲಾಕ್‌ಡೌನ್‌ ಏರಿರೋ ಕೇಂದ್ರ ಸರ್ಕಾರ, ಹಲವು ಸಡಿಲಿಕೆ ಕೊಟ್ಟಿದೆ. ರಾಜ್ಯ ಸರ್ಕಾರಗಳ ಅನುಮತಿ ಮೇರೆಗೆ ಬಸ್‌ ಸಂಚಾರಕ್ಕೂ ಯೆಸ್‌ ಎಂದಿದೆ. ಆದ್ರೆ ಬೆಂಗಳೂರಿನ ಈ ಎಲ್ಲಾ ಕಂಟೇನ್ಮೆಂಟ್‌ ಜೋನ್‌ಗಳಲ್ಲಿ ಮಾತ್ರ ಯಾವ ಸಡಿಲಿಕೆಯೂ ಇರೋದಿಲ್ಲ. ಮುಂದಿನ ಆದೇಶದ ವರೆಗೂ ಇಲ್ಲಿ ಯಾವುದು ಬದಲಾಗಲ್ಲ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada