ದಾಳಿಂಬೆ ನಷ್ಟದಿಂದ ಬೇಸತ್ತ ರೈತನ ಹೊಸ ಆವಿಷ್ಕಾರ! ಇತರರಿಗೆ ಮಾದರಿಯಾದ ಅನ್ನದಾತ
ರಾಯಚೂರು: ದುಂಡಾಣು ರೋಗಕ್ಕೆ ಹೆದರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಾಳಿಂಬೆ ಬೆಳೆಗೆ ಬಹುತೇಕ ರೈತರು ಗುಡ್‌ಬೈ ಹೇಳಿದ್ದಾರೆ. ಆದ್ರೆ ಬಿಸಿಲನಾಡಿನಲ್ಲಿ ದಾಳಿಂಬೆ ಇಳುವರಿ ಕುಸಿತದಿಂದ ತಪ್ಪಿಸಿಕೊಳ್ಳಲು ಸಾಹಸಿ ರೈತನೋರ್ವ ಮಾಡಿದ ಹೊಸ ಪ್ರಯೋಗ ರೈತ ಸಮುದಾಯದಲ್ಲಿ ಸಂಚಲನ ಮೂಡಿಸಿದೆ. ಅನ್ನದಾತನಿಂದ ವಿನೂತನ ಪ್ರಯೋಗ: ಕಣ್ಣು ಹಾಯಿಸಿದ ಕಡೆಯೆಲ್ಲಾ ದಾಳಿಂಬೆ ಗಿಡಗಳು. ವಿಶಾಲವಾದ ಭೂಮಿಯಲ್ಲಿ 8 ಅಡಿಗೂ ಎತ್ತರ ಬೆಳೆದು ನಿಂತ ದಾಳಿಂಬೆ ಗಿಡಗಳು. ಇಲ್ಲಿ ಸುಮಾರು 22 ಎಕರೆ ಪ್ರದೇಶದಲ್ಲಿ 10 ಸಾವಿರಕ್ಕೂ ಹೆಚ್ಚು ದಾಳಿಂಬೆ ಗಿಡಗಳನ್ನ […]
ರಾಯಚೂರು: ದುಂಡಾಣು ರೋಗಕ್ಕೆ ಹೆದರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಾಳಿಂಬೆ ಬೆಳೆಗೆ ಬಹುತೇಕ ರೈತರು ಗುಡ್‌ಬೈ ಹೇಳಿದ್ದಾರೆ. ಆದ್ರೆ ಬಿಸಿಲನಾಡಿನಲ್ಲಿ ದಾಳಿಂಬೆ ಇಳುವರಿ ಕುಸಿತದಿಂದ ತಪ್ಪಿಸಿಕೊಳ್ಳಲು ಸಾಹಸಿ ರೈತನೋರ್ವ ಮಾಡಿದ ಹೊಸ ಪ್ರಯೋಗ ರೈತ ಸಮುದಾಯದಲ್ಲಿ ಸಂಚಲನ ಮೂಡಿಸಿದೆ.
ಅನ್ನದಾತನಿಂದ ವಿನೂತನ ಪ್ರಯೋಗ: ಕಣ್ಣು ಹಾಯಿಸಿದ ಕಡೆಯೆಲ್ಲಾ ದಾಳಿಂಬೆ ಗಿಡಗಳು. ವಿಶಾಲವಾದ ಭೂಮಿಯಲ್ಲಿ 8 ಅಡಿಗೂ ಎತ್ತರ ಬೆಳೆದು ನಿಂತ ದಾಳಿಂಬೆ ಗಿಡಗಳು. ಇಲ್ಲಿ ಸುಮಾರು 22 ಎಕರೆ ಪ್ರದೇಶದಲ್ಲಿ 10 ಸಾವಿರಕ್ಕೂ ಹೆಚ್ಚು ದಾಳಿಂಬೆ ಗಿಡಗಳನ್ನ ಬೆಳೆಯಲಾಗಿದೆ. ಗಿಡಗಳ ಕೊಂಬೆಗಳು ಒಂದಕ್ಕೊಂದು ಸೇರಿಕೊಂಡಿದ್ದರಿಂದ ಬುಡಕ್ಕೆ ಬಿಸಿಲು ತಾಗುತ್ತಿಲ್ಲ. ಈ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ನೀರಲಕೇರಾ ಗ್ರಾಮದ ರೈತ ಬಸವರಾಜಗೌಡ ಜಮೀನಿನಲ್ಲಿ.
ಗಿಡಗಳನ್ನು ಬೇರು ಸಮೇತ ಕಿತ್ತು, ಬೇರೆ ಭೂಮಿಯಲ್ಲಿ ಪ್ಲಾಂಟೇಷನ್: ಹೀಗೆ ಗಿಡಗಳು ಒಂದಕ್ಕೊಂದು ತಾಗಿದ್ದರಿಂದ ಇಳುವರಿಯಲ್ಲಿ ಕುಸಿತವಾಗಿದೆ. ಹೀಗಾಗಿ 1 ಕೋಟಿ 50 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದ್ರಿಂದ ಪ್ಲ್ಯಾನ್ ಮಾಡಿದ ರೈತ ಬಸವರಾಜಗೌಡ, ತಮ್ಮ ಜಮೀನಿನಲ್ಲಿ ಬೆಳೆದಿದ್ದ ದಾಳಿಂಬೆ ಗಿಡಗಳನ್ನೇ ಬೇರು ಸಮೇತ ಕಿತ್ತು, ಬೇರೆ ಭೂಮಿಯಲ್ಲಿ ಪ್ಲಾಂಟೇಷನ್ ಮಾಡೋ ಮೂಲಕ ಇತರೆ ಪ್ರಗತಿಪರ ರೈತರ ಹುಬ್ಬೇರುವಂತೆ ಮಾಡಿದ್ದಾರೆ.
ರಾಯಚೂರಿನಾದ್ಯಂತ ಹಲವಡೆ ದಾಳಿಂಬೆ ಬೆಳೆಗಾರರು ಇದೇ ರೀತಿಯ ಸಮಸ್ಯೆ ಎದುರಿಸ್ತಿದ್ದಾರೆ. ಆದ್ರೆ ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡ ರೈತ ಬಸವರಾಜಗೌಡ, ಜೆಸಿಬಿ ಮೂಲಕ ಅಚ್ಚುಕಟ್ಟಾಗಿ 22 ಎಕರೆ ಜಮೀನಲ್ಲಿ ಬೆಳೆದಿದ್ದ 3 ಸಾವಿರ ದಾಳಿಂಬೆ ಗಿಡಗಳನ್ನ ಕಿತ್ತು ಪಕ್ಕದ ಜಮೀನಿನಲ್ಲಿ ಪ್ಲಾಂಟೇಷನ್ ಮಾಡಿಸೋ ಕೆಲ್ಸದಲ್ಲಿ ತೊಡಗಿದ್ದಾರೆ.
ಒಟ್ನಲ್ಲಿ ಪ್ರತಿ ಬಾರಿಯೂ ದಾಳಿಂಬೆ ಬೆಳೆಗಾರರು ಒಂದಲ್ಲಾ ಒಂದು ಕಾರಣಕ್ಕೆ ನಷ್ಟ ಅನುಭವಿಸುತ್ತಲೇ ಇದ್ದಾರೆ. ಆದ್ರೆ ಈ ಸಾಹಸಿ ರೈತನ ವಿನೂತನ ಪ್ರಯೋಗದಿಂದ ನಿಜಕ್ಕೂ ಯಶಸ್ವಿಯಾಗ್ತಾರಾ? ಇಳುವರಿ ಹೆಚ್ಚಾಗುತ್ತಾ ಅನ್ನೋದು ಕುತೂಹಲಕ್ಕೆ ಕಾರಣವಾಗಿರೋದು ಸುಳ್ಳಲ್ಲ.
Published On - 1:20 pm, Fri, 17 January 20