ನೀತಿ ಸಂಹಿತೆ ಉಲ್ಲಂಘನೆ: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ದಾಖಲಾಯ್ತು FIR
ಆರ್ ಆರ್ ನಗರ ಉಪಚುನಾವಣೆಯ ಬಿಸಿ ಕಾವೇರುತ್ತಿರುವ ಹೊತ್ತಿನಲ್ಲಿಯೇ ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ಕಾಂಗ್ರೆಸ್ ನಾಯಕರ ವಿರುದ್ಧ ಕೇಸ್ ಹಾಕಿದ್ದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಕಾರ್ಯನಿರತ ಪೊಲೀಸರನ್ನು ತಳ್ಳಿ ಕೈ ನಾಯಕರು ಚುನಾವಣಾ ಅಧಿಕಾರಿಯ ಕೊಠಡಿ ಒಳಗೆ ಹೋಗಿದ್ದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ರಾಜರಾಜೇಶ್ವರಿ ನಗರ ಠಾಣೆಯ ಎ ಎಸ್ ಐ ನಾಗರಾಜ ಎನ್ […]

ಆರ್ ಆರ್ ನಗರ ಉಪಚುನಾವಣೆಯ ಬಿಸಿ ಕಾವೇರುತ್ತಿರುವ ಹೊತ್ತಿನಲ್ಲಿಯೇ ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ಕಾಂಗ್ರೆಸ್ ನಾಯಕರ ವಿರುದ್ಧ ಕೇಸ್ ಹಾಕಿದ್ದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಕಾರ್ಯನಿರತ ಪೊಲೀಸರನ್ನು ತಳ್ಳಿ ಕೈ ನಾಯಕರು ಚುನಾವಣಾ ಅಧಿಕಾರಿಯ ಕೊಠಡಿ ಒಳಗೆ ಹೋಗಿದ್ದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಈ ಸಂಬಂಧ ರಾಜರಾಜೇಶ್ವರಿ ನಗರ ಠಾಣೆಯ ಎ ಎಸ್ ಐ ನಾಗರಾಜ ಎನ್ ನೀಡಿರುವ ಫಿರ್ಯಾದಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ. ಕೇಸ್ ನಂಬರ್ 0258/2020 ಪ್ರಕಾರ, ಕುಸುಮಾ ಮತ್ತು ಇನ್ನಿಬ್ಬರು ಅನಾಮಧೇಯ ವ್ಯಕ್ತಿಗಳ ಮೇಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಏ ಎಸ್ ಐ ನಾಗರಾಜ ಅವರ ದೂರಿನ ಪ್ರಕಾರ, ಅವರು ಮತ್ತು ಇನ್ನಿತರೆ ಪೊಲೀಸರು ಬಿ ಬಿ ಎಮ್ ಪಿ ಕಛೇರಿ ಬಳಿ ಕಾರ್ಯನಿರತರಾಗಿದ್ದಾಗ ಕಾಂಗ್ರೆಸ್ ನಾಯಕರು ನಾಮಪತ್ರ ಸಲ್ಲಿಸಲು ಬರುತ್ತಾರೆ. ಮಾದರಿ ನೀತಿ ಸಂಹಿತೆ ಪ್ರಕಾರ ಜನರನ್ನು ನೂರು ಮೀಟರ್ ಹೊರಗೆ ನಿಲ್ಲಿಸಿ ಐದು ಜನರನ್ನು ಮಾತ್ರ ಒಳಗೆ ಬಿಡಲು ಅವಕಾಶ ಇರುತ್ತದೆ.
ಆ ಪ್ರಕಾರ ಪೊಲೀಸರು ಎಲ್ಲರನ್ನು ತಡೆದಾಗ, ಕಾಂಗ್ರೆಸ್ ನಾಯಕರು ಎಲ್ಲರನ್ನು ದೂಡಿ ಒಳಗೆ ಹೋಗಿರುತ್ತಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿರುತ್ತದೆ. ಅದ್ದರಿಂದ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಾವಲಿಗೆ ಇದ್ದವರ ವಿರುದ್ಧ ಕೇಸ್ ದಾಖಲಿಸಲಾಗಿದೆ.






