ಕೊರೊನಾ ಸೋಂಕಿತರ ಪ್ರಮಾಣ ಇಳಿಮುಖ: ಯಾವ ರಾಜ್ಯದಲ್ಲಿ ಎಷ್ಟು ಕಡಿಮೆಯಾಗಿದೆ? ಲೆಕ್ಕಾಚಾರ ಏನು?

ಪಟ್ಟಿಯಲ್ಲಿದ್ದ ಟಾಪ್​ 10 ರಾಜ್ಯಗಳ ಪೈಕಿ ಕರ್ನಾಟಕ ನವೆಂಬರ್​, ಡಿಸೆಂಬರ್​ ಮತ್ತು ಜನವರಿ ತಿಂಗಳಲ್ಲಿ ನಿರಂತರವಾಗಿ 10ನೇ ಸ್ಥಾನ ಕಾಪಾಡಿಕೊಂಡಿದೆ. ಗಮನಾರ್ಹ ಸಂಗತಿ ಎಂದರೆ ಬೇರೆಲ್ಲಾ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿರುವುದು ಕಂಡುಬಂದಿದೆ.

  • TV9 Web Team
  • Published On - 11:56 AM, 15 Jan 2021
ಕೊರೊನಾ ಸೋಂಕಿತರ ಪ್ರಮಾಣ ಇಳಿಮುಖ: ಯಾವ ರಾಜ್ಯದಲ್ಲಿ ಎಷ್ಟು ಕಡಿಮೆಯಾಗಿದೆ? ಲೆಕ್ಕಾಚಾರ ಏನು?
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ದೇಶಾದ್ಯಂತ ಕೊರೊನಾ ಲಸಿಕೆ ವಿತರಣೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದ ಎಲ್ಲಾ ರಾಜ್ಯಗಳಲ್ಲೂ ಲಸಿಕೆ ಹಂಚಿಕೆ ಶುರುಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ನಡುವೆ ಕಳೆದ ಆಗಸ್ಟ್​ ತಿಂಗಳಿನಿಂದ ಇಲ್ಲಿಯವರೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಯಾವ ಪ್ರಮಾಣದಲ್ಲಿ ಬದಲಾವಣೆ ಕಂಡಿದೆ? ಕರ್ನಾಟಕದಲ್ಲಿ ಕೊವಿಡ್​ ಎಷ್ಟರ ಮಟ್ಟಿಗೆ ಕಡಿಮೆಯಾಗಿದೆ ಎಂಬ ವಿವರಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.

ಕರ್ನಾಟಕ
ಆಗಸ್ಟ್​: ಶೇ.14.1
ಸೆಪ್ಟೆಂಬರ್​: ಶೇ.13.0
ಅಕ್ಟೋಬರ್​: ಶೇ.7.3
ನವೆಂಬರ್​: ಶೇ.1.9
ಡಿಸೆಂಬರ್​: ಶೇ.1.2
ಜನವರಿ: ಶೇ.0.7

ಆಗಸ್ಟ್​ ವೇಳೆಗೆ ಮಹಾರಾಷ್ಟ್ರದಲ್ಲಿ ಶೇ.18.4ರಷ್ಟು ಸೋಂಕಿತರು ಪತ್ತೆಯಾಗಿದ್ದರು. ನಂತರದ ಸ್ಥಾನದಲ್ಲಿದ್ದ ಆಂಧ್ರಪ್ರದೇಶದಲ್ಲಿ ಶೇ.16.4 ಮತ್ತು ಕರ್ನಾಟಕದಲ್ಲಿ ಶೇ.14.1ರಷ್ಟು ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರೆ ಕೇರಳದಲ್ಲಿ ಶೇ.5.7ರಷ್ಟು ಪ್ರಕರಣಗಳು ಕಂಡುಬಂದಿದ್ದವು.

ಸೆಪ್ಟೆಂಬರ್​ ತಿಂಗಳಲ್ಲಿ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೊಸ ಸೋಂಕಿತರ ಪ್ರಮಾಣ ಏರಿಕೆಯಾಗಿದೆ. ಆದರೆ, ಕರ್ನಾಟಕ ಮತ್ತು ಆಂಧ್ರಪ್ರದೇಶ ಹೊಸ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಬಹುಪಾಲು ಯಶಸ್ವಿಯಾಗಿರುವುದನ್ನು ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.

ಆಗಸ್ಟ್​ ಮತ್ತು ಸೆಪ್ಟೆಂಬರ್​ ತಿಂಗಳಲ್ಲಿ 3ನೇ ಸ್ಥಾನದಲ್ಲಿದ್ದ ಕರ್ನಾಟಕ ಅಕ್ಟೋಬರ್​ನಲ್ಲಿ ಏಳನೇ ಸ್ಥಾನಕ್ಕೆ ಕುಸಿತ ಕಂಡಿರುವುದು ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ. ಹೊಸ ಸೋಂಕಿತರ ಪ್ರಮಾಣ ಕರ್ನಾಟಕದಲ್ಲಿ ಶೇ.7.3ರಷ್ಟಿದ್ದರೆ, ಮೊದಲ ಸ್ಥಾನಕ್ಕೇರಿದ ಕೇರಳದಲ್ಲಿ ಶೇ.13.8ರಷ್ಟು ದಾಖಲಾಗಿತ್ತು.

ಪಟ್ಟಿಯಲ್ಲಿದ್ದ ಟಾಪ್​ 10 ರಾಜ್ಯಗಳ ಪೈಕಿ ಕರ್ನಾಟಕ ನವೆಂಬರ್​, ಡಿಸೆಂಬರ್​ ಮತ್ತು ಜನವರಿ ತಿಂಗಳಲ್ಲಿ ನಿರಂತರವಾಗಿ 10ನೇ ಸ್ಥಾನ ಕಾಪಾಡಿಕೊಂಡಿದೆ. ಗಮನಾರ್ಹ ಸಂಗತಿ ಎಂದರೆ ಬೇರೆಲ್ಲಾ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿರುವುದು ಕಂಡುಬಂದಿದೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟದಲ್ಲಿ ಪರೀಕ್ಷೆ ಪ್ರಮಾಣವೂ ಹೆಚ್ಚಾಗಿತ್ತು. ಒಂದುವೇಳೆ, ಉಳಿದೆಲ್ಲಾ ರಾಜ್ಯಗಳು ಕರ್ನಾಟದಷ್ಟೇ ಪರೀಕ್ಷೆ ನಡೆಸಿದ್ದರೆ ಅಲ್ಲಿನ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಇನ್ನೂ ದೊಡ್ಡಮಟ್ಟದ ಏರಿಕೆ ಕಾಣುವ ಸಾಧ್ಯತೆ ಇತ್ತು ಎಂದು ಹೇಳಲಾಗುತ್ತಿದೆ.

ಈ ಅಂಕಿ ಅಂಶಗಳನ್ನು ಕೆಳಗಿನ ಚಿತ್ರಗಳ ಮೂಲಕ ಗಮನಿಸಬಹುದು..

ಅವಾಗ ಉಸಿರು ಬಿಗಿಹಿಡಿದು ಪರೀಕ್ಷಿಸಿಕೊಳ್ಳಿ ಅಂದರು, ಈಗ ದಮ್ಮಯ್ಯ ಮೊದಲು ಉಸಿರು ಬಿಡಿ ಅಂತಿದ್ದಾರೆ! ಏನಿದು ಕೊರೊನಾ ಅಧ್ಯಯನ ವರದಿ?