ದಾವಣಗೆರೆ: ಆಯತಪ್ಪಿ 60 ಅಡಿ ಆಳದ ಪಾಳುಬಾವಿಗೆ ಬಿದ್ದ ಮೇಕೆಯನ್ನು ರೈತನೊಬ್ಬ ರಕ್ಷಿಸಿರುವ ಘಟನೆ ಜಿಲ್ಲೆಯ ಮಲ್ಲಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ರೈತ ಕೃಷ್ಣ ನಾಯ್ಕ ಸ್ಥಳೀಯರ ಸಹಾಯದಿಂದ ಮೇಕೆಯನ್ನು ರಕ್ಷಿಸಿದ್ದಾನೆ. ಗ್ರಾಮದ ಹೊರವಲಯದಲ್ಲಿ ಮೇಯುತ್ತಿದ್ದ ಮೇಕೆ ಪಕ್ಕದಲ್ಲಿದ್ದ ಪಾಳುಬಿದ್ದ ಬಾವಿಗೆ ಆಯತಪ್ಪಿ ಬಿದ್ದಿದೆ. ಇದನ್ನು ಗಮನಿಸಿದ ರೈತ ಕೃಷ್ಣ ನಾಯ್ಕ 60 ಅಡಿ ಆಳಕ್ಕೆ ಇಳಿದು ಮೇಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ. ಸ್ಥಳೀಯರ ಸಹಾಯದಿಂದ ಟೊಂಕಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದು ಮೇಕೆ ರಕ್ಷಣೆ ಮಾಡಿದ್ದಾನೆ.
ದಾವಣಗೆರೆ: ಆಯತಪ್ಪಿ 60 ಅಡಿ ಆಳದ ಪಾಳುಬಾವಿಗೆ ಬಿದ್ದ ಮೇಕೆಯನ್ನು ರೈತನೊಬ್ಬ ರಕ್ಷಿಸಿರುವ ಘಟನೆ ಜಿಲ್ಲೆಯ ಮಲ್ಲಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ರೈತ ಕೃಷ್ಣ ನಾಯ್ಕ ಸ್ಥಳೀಯರ ಸಹಾಯದಿಂದ ಮೇಕೆಯನ್ನು ರಕ್ಷಿಸಿದ್ದಾನೆ.
ಗ್ರಾಮದ ಹೊರವಲಯದಲ್ಲಿ ಮೇಯುತ್ತಿದ್ದ ಮೇಕೆ ಪಕ್ಕದಲ್ಲಿದ್ದ ಪಾಳುಬಿದ್ದ ಬಾವಿಗೆ ಆಯತಪ್ಪಿ ಬಿದ್ದಿದೆ. ಇದನ್ನು ಗಮನಿಸಿದ ರೈತ ಕೃಷ್ಣ ನಾಯ್ಕ 60 ಅಡಿ ಆಳಕ್ಕೆ ಇಳಿದು ಮೇಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ. ಸ್ಥಳೀಯರ ಸಹಾಯದಿಂದ ಟೊಂಕಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದು ಮೇಕೆ ರಕ್ಷಣೆ ಮಾಡಿದ್ದಾನೆ.