AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ: ನವಗರದಲ್ಲಿ ಸಿದ್ದವಾಗುತ್ತಿದೆ ಹೈಟೆಕ್ ತರಕಾರಿ ಮಾರುಕಟ್ಟೆ; ನವೆಂಬರ್​ನಲ್ಲಿ​ ಉದ್ಘಾಟನೆ ಸಾಧ್ಯತೆ

ನವನಗರವು ಧಾರವಾಡ ಮತ್ತು ಹುಬ್ಬಳ್ಳಿ ನಗರದ ನಡುವೆ, ಹುಬ್ಬಳ್ಳಿ ನಗರ ಕೇಂದ್ರದಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ಹೊಸ ಮಾರುಕಟ್ಟೆಯು ನವನಗರದ ವಾರ್ಡ್ ನಂ. 27ರಲ್ಲಿ ನಿರ್ಮಾಣವಾಗುತ್ತಿದೆ. ಇದರಿಂದ ಈಶ್ವರನಗರ, ಅಮರಗೋಳ, ಸುತಗಟ್ಟಿ, ಬೈರಿದೇವರಕೊಪ್ಪ ಹಾಗೂ ಸುತ್ತಮುತ್ತಲಿನ ನಗರ ನಿವಾಸಿಗಳಿಗೆ ಅನುಕೂಲವಾಗಲಿದೆ.

ಹುಬ್ಬಳ್ಳಿ: ನವಗರದಲ್ಲಿ ಸಿದ್ದವಾಗುತ್ತಿದೆ ಹೈಟೆಕ್ ತರಕಾರಿ ಮಾರುಕಟ್ಟೆ; ನವೆಂಬರ್​ನಲ್ಲಿ​ ಉದ್ಘಾಟನೆ ಸಾಧ್ಯತೆ
ನವನಗರ ಮಾರುಕಟ್ಟೆ
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on: Oct 06, 2023 | 11:34 AM

Share

ಹುಬ್ಬಳ್ಳಿ ಅ.06: ಹುಬ್ಬಳ್ಳಿಯ (Hubballi) ನವನಗರದಲ್ಲಿ (Navanagar) ಹೈಟೆಕ್ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಮುಂದಿನ ತಿಂಗಳು ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಸುಸಜ್ಜಿತ ಮತ್ತು ಸುವ್ಯವಸ್ಥಿತ ಮಾರುಕಟ್ಟೆ (Market) ಇದಾಗಿದೆ. ಈ ಮಾರುಕಟ್ಟೆಯಿಂದ ದಶಕಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಮಾರಾಟಗಾರರಿಗೆ ಅನುಕೂಲವಾಗಲಿದೆ. ವ್ಯವಸ್ಥಿತ ಮಾರುಕಟ್ಟೆ ಇಲ್ಲದೆ ರೈತರು ಮತ್ತು ಮಾರಾಟಗಾರರು, ತರಕಾರಿ, ಹಣ್ಣು, ಹೂವುಗಳನ್ನು ರಸ್ತೆಯಲ್ಲೇ ಮಾರಾಟ ಮಾಡುತ್ತಿದ್ದಾರೆ.

ನವನಗರವು ಧಾರವಾಡ ಮತ್ತು ಹುಬ್ಬಳ್ಳಿ ನಗರದ ನಡುವೆ, ಹುಬ್ಬಳ್ಳಿ ನಗರ ಕೇಂದ್ರದಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ಹೊಸ ಮಾರುಕಟ್ಟೆಯು ನವನಗರದ ವಾರ್ಡ್ ನಂ. 27ರಲ್ಲಿ ನಿರ್ಮಾಣವಾಗುತ್ತಿದೆ. ಇದರಿಂದ ಈಶ್ವರನಗರ, ಅಮರಗೋಳ, ಸುತಗಟ್ಟಿ, ಬೈರಿದೇವರಕೊಪ್ಪ ಹಾಗೂ ಸುತ್ತಮುತ್ತಲಿನ ನಗರ ನಿವಾಸಿಗಳಿಗೆ ಅನುಕೂಲವಾಗಲಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC) ವತಿಯಿಂದ 1.5 ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಹಳೆಯ ಮಾರುಕಟ್ಟೆಯನ್ನು 1995 ರಲ್ಲಿ ನಿರ್ಮಿಸಲಾಗಿತ್ತು. ಕಾಲಾನಂತರದಲ್ಲಿ, ಮಾರುಕಟ್ಟೆಯು ಕೆಟ್ಟ ರೂಪಕ್ಕೆ ತಿರುಗಿದೆ. ನವನಗರ ಮತ್ತು ಹತ್ತಿರದ ಪ್ರದೇಶಗಳ ನಿವಾಸಿಗಳಿಗೆ ಮಾರುಕಟ್ಟೆಯಿಂದ ಸಹಾಯವಾಗಲಿದೆ. ಹೆಚ್​ಡಿಎಂಸಿ ಅನುದಾನ, ಶಾಸಕರ ನಿಧಿ ಹಾಗೂ ಕಾರ್ಪೊರೇಟರ್‌ ವಾರ್ಡ್‌ ನಿಧಿಯಿಂದ ಮಾರುಕಟ್ಟೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಎಂದು ವಲಯ ಸಹಾಯಕ ಆಯುಕ್ತ ರಮೇಶ್ ನೂಲ್ವಿ ತಿಳಿಸಿದರು.

ಇದನ್ನೂ ಓದಿ: ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್ ಮೇಲ್ಸೇತುವೆ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

ಸುಮಾರು ಒಂದು ಎಕರೆ ಪ್ರದೇಶದಲ್ಲಿ ಮಾರುಕಟ್ಟೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ವಾಹನಗಳ ನಿಲುಗಡೆಗೆ ಜಾಗ ನೀಡಲಾಗಿದೆ. ನಾವು ಮಾರಾಟಗಾರರನ್ನು ಮೂರು ವರ್ಗಗಳಾಗಿ ವಿಂಗಡಿಸಿದ್ದೇವೆ: ಪೂರ್ಣ ಸಮಯದ ಮಾರಾಟಗಾರರು, ಅರೆಕಾಲಿಕ ಮಾರಾಟಗಾರರು ಮತ್ತು ಮೊಬೈಲ್ ಮಾರಾಟಗಾರರು. ಮುಖ್ಯ ಕಟ್ಟಡದಲ್ಲಿ ಸುಮಾರು 35 ಪೂರ್ಣಾವಧಿ ಮಾರಾಟಗಾರರಿಗೆ ಜಾಗವನ್ನು ನೀಡಲಾಗುವುದು. ರೈತರು ಸೇರಿದಂತೆ ಅರೆಕಾಲಿಕ ಮಾರಾಟಗಾರರಿಗೆ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡಲು ಸ್ಥಳಾವಕಾಶವನ್ನು ಒದಗಿಸಲಾಗುವುದು ಎಂದು ಹೇಳಿದರು.

ಮಾರುಕಟ್ಟೆಯಲ್ಲಿನ ಹೈಟೆಕ್ ಸೌಲಭ್ಯಗಳು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲೂ ಯಾವುದೇ ತೊಂದರೆಯಿಲ್ಲದೆ ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳನ್ನು ಮಾರಾಟ ಮಾಡಬಹುದಾಗಿದೆ. ನವನಗರ ಮಾರುಕಟ್ಟೆಯ ಸುತ್ತಲಿನ ಸಂಚಾರ ದಟ್ಟಣೆಯಿಂದ ಪ್ರಯಾಣಿಕರು ಮತ್ತು ಪಾದಚಾರಿಗಳು ಕಿರಿಕಿರಿ ಅನುಭವಿಸುತ್ತಾರೆ. ಸದ್ಯ ನವನಗರ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವ 100ಕ್ಕೂ ಹೆಚ್ಚು ಮಾರಾಟಗಾರರು ಹೊಸ ಮಾರುಕಟ್ಟೆಗೆ ಸ್ಥಳಾಂತರಗೊಳ್ಳಲಿದ್ದಾರೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ 1-2 ತಿಂಗಳಲ್ಲಿ ಹೊಸ ಮಾರುಕಟ್ಟೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದರು.

ನವನಗರದ ನಿವಾಸಿ ಬಸವರಾಜ ಜಾಂಬೋಟಿ ಮಾತನಾಡಿ, ನವನಗರದಲ್ಲಿ ಖರೀದಿ ಕಷ್ಟವಾಗಿದೆ. ತರಕಾರಿ ವ್ಯಾಪಾರಿಗಳು ಸಿದ್ದಪ್ಪಜ್ಜ ದೇವಸ್ಥಾನದ ಬಳಿಯೇ ಕುಳಿತಿದ್ದು, ತರಕಾರಿ ಖರೀದಿಸಲು ಅಲ್ಲಿಯವರೆಗು ಹೋಗಬೇಕಾಗುತ್ತದೆ. ಮಾರುಕಟ್ಟೆ ತೆರೆದರೆ ತರಕಾರಿ, ಹಣ್ಣು ಮತ್ತಿತರ ವಸ್ತುಗಳು ಒಂದೇ ಕಡೆ ಸಿಗುತ್ತವೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಶೀಘ್ರ ಮಾರುಕಟ್ಟೆ ತೆರೆಯಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿವೇಕ ಬಿರಾದಾರ
ವಿವೇಕ ಬಿರಾದಾರ

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?