ಹಾವೇರಿ: ರಾಜ್ಯದಲ್ಲಿ ದಿನೇ ದಿನೆ ಪತ್ತೆಯಾಗುತ್ತಿರುವ ಮಾದಕ ಜಾಲದ ಬಗ್ಗೆ ಹಾವೇರಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಮೊನ್ನೆ ಒಂದೇ ದಿನ CCBಯವರು ಸುಮಾರು 200 ಕೆ.ಜಿ ಗಾಂಜಾ ಸೀಜ್ ಮಾಡಿದ್ದಾರೆ. ಜೊತೆಗೆ, ಕೇಂದ್ರದ Anti ನಾರ್ಕೋಟಿಕ್ಸ್ ಟೀಂನವರು ಸಹ ಡ್ರಗ್ಸ್ ಸೀಜ್ ಮಾಡಿದ್ದಾರೆ. ಅವರಿಗೆ ಕೆಲವೊಂದು ಸುಳಿವು ಸಿಕ್ಕಿವೆ. ಯಾರೇ ಇರಲಿ, ಎಷ್ಟೇ ಇರಲಿ, ಡ್ರಗ್ಸ್ ಮಾರಾಟ ಮತ್ತು ಸೇವನೆಯಂಥ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಅವರಿಗೆ ಜೈಲು ಶಿಕ್ಷೆ ಆಗೋದಕ್ಕೆ ಇರುವ ವಿಶೇಷ ಕಾನೂನಿನ ಅಡಿಯಲ್ಲಿ ಶಿಕ್ಷೆ ಕೊಡಿಸ್ತೇವೆ ಎಂದು ಹೇಳಿದ್ದಾರೆ
ನಾವು ಹಿಡಿದ ಮೇಲೆ ಅದು ದೊಡ್ಡ ಸುದ್ದಿಯಂತಲ್ಲ. ಹಲವಾರು ವರ್ಷದಿಂದ ಡ್ರಗ್ ಮಾಫಿಯಾ ವಿರುದ್ಧ ಯಾವುದೇ ಕ್ರಮವನ್ನ ಸರ್ಕಾರಗಳು ತೆಗೆದುಕೊಂಡಿರಲಿಲ್ಲ ಅಂತಾ ಹಾವೇರಿಯಲ್ಲಿ ಹೇಳಿದ್ದಾರೆ.
‘ನಾನು ವಾರ್ ಆನ್ ಡ್ರಗ್ ಅಂತಾ ಡಿಕ್ಲೇರ್ ಮಾಡಿದ್ದೇನೆ’ ನಾನು ವಾರ್ ಆನ್ ಡ್ರಗ್ ಅಂತಾ ಡಿಕ್ಲೇರ್ ಮಾಡಿದ್ದೇನೆ. ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಇಲ್ಲಿಗೆ ನಿಲ್ಲೋದಿಲ್ಲ. ಮಾದಕ ವಸ್ತುಗಳು ನಾನಾ ರೂಪದಲ್ಲಿ ಬರ್ತಾ ಇವೆ. ಚಾಕೊಲೇಟ್, ಸಣ್ಣ ಪೇಪರ್, ಟ್ಯಾಬ್ಲೆಟ್ ರೂಪದಲ್ಲಿ ಮಾದಕ ವಸ್ತುಗಳು ಲಭ್ಯವಾಗುತ್ತಿದೆ. ಆದರೆ, ಎಲ್ಲವನ್ನೂ ನಿಯಂತ್ರಣ ಮಾಡೋ ರೂಪದಲ್ಲಿ ಜಾಲ ಬೀಸಿದ್ದೇವೆ ಎಂಬ ಮಾಹಿತಿ ನೀಡಿದ್ದಾರೆ.
ಜೊತೆಗೆ, ವಿದೇಶಿಯರು ಈ ಅಪರಾಧದಲ್ಲಿ ತೊಡಗಿದ್ದಾರೆ. ಇನ್ನೂ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡಿ ಬೇರು ಸಮೇತ ಕಿತ್ತು ಒಗೆಯೋ ಕೆಲಸ ಮಾಡ್ತೇವೆ. ಇದಲ್ಲದೆ, ಶಾಲಾ ಕಾಲೇಜುಗಳು ಆರಂಭವಾದ ಮೇಲೆ ಈ ಬಗ್ಗೆ ಜಾಗೃತಿ ಕಾರ್ಯಕ್ರಮ ಸಹ ನಡೆಸುತ್ತೇವೆ ಅಂತಾ ತಿಳಿಸಿದ್ದಾರೆ.
ಯಾವ್ಯಾವ ಶಿಕ್ಷಣ ಸಂಸ್ಥೆ, ಹಾಸ್ಟೆಲ್ಗಳಲ್ಲಿ ಡ್ರಗ್ ಸಿಕ್ಕರೆ ಅಲ್ಲಿನ ಮ್ಯಾನೇಜ್ಮೆಂಟ್ನ ನೇರ ಹೊಣೆ ಮಾಡ್ತೇವೆ ಎಂದು ಈಗಾಗಲೆ ಹೇಳಿದ್ದೇವೆ. ಇದೀಗ, ಅದನ್ನ ಪಾಲನೆ ಮಾಡ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.