ಆಸ್ತಿಗಾಗಿ ಸಂಬಂಧಿಕರಿಂದಲೇ ಮಹಿಳೆಯ ಬರ್ಬರ ಕೊಲೆ.. ಎಲ್ಲಿ?
ಮೈಸೂರು: ಆಸ್ತಿಗಾಗಿ ಸಂಬಂಧಿಕರಿಂದಲೇ ಮಹಿಳೆಯ ಬರ್ಬರ ಕೊಲೆ ನಡೆದಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಘಟನೆ ಸಂಬಂಧ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಂಗಮ್ಮ (45) ಕೊಲೆಯಾದ ದುರ್ದೈವಿ. ಗಂಗಮ್ಮ ಪಿರಿಯಾಪಟ್ಟಣ ತಾಲೂಕು ಬೆಟ್ಟದ ಪುರದ ನಿವಾಸಿ. ಆಗಸ್ಟ್ 3 ರಂದು ಇವರು ನಾಪತ್ತೆಯಾಗಿದ್ದರು. ಗಂಗಮ್ಮ ಪತಿ 7 ವರ್ಷದ ಹಿಂದೆ ಸಾವನ್ನಪ್ಪಿದ್ದರು. ಮಕ್ಕಳಿಲ್ಲದ ಗಂಗಮ್ಮ ಒಂಟಿ ಜೀವನ ನಡೆಸುತ್ತಿದ್ದರು. ಆಕೆಯ ಆಸ್ತಿ ಮೇಲೆ ಕಣ್ಣು ಹಾಕಿದ್ದ ಪತಿಯ ಸಂಬಂಧಿಕರು, ಆಸ್ತಿ ಕಬಳಿಸಲು ಗಂಗಮ್ಮನ […]

ಮೈಸೂರು: ಆಸ್ತಿಗಾಗಿ ಸಂಬಂಧಿಕರಿಂದಲೇ ಮಹಿಳೆಯ ಬರ್ಬರ ಕೊಲೆ ನಡೆದಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಘಟನೆ ಸಂಬಂಧ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಂಗಮ್ಮ (45) ಕೊಲೆಯಾದ ದುರ್ದೈವಿ.
ಗಂಗಮ್ಮ ಪಿರಿಯಾಪಟ್ಟಣ ತಾಲೂಕು ಬೆಟ್ಟದ ಪುರದ ನಿವಾಸಿ. ಆಗಸ್ಟ್ 3 ರಂದು ಇವರು ನಾಪತ್ತೆಯಾಗಿದ್ದರು. ಗಂಗಮ್ಮ ಪತಿ 7 ವರ್ಷದ ಹಿಂದೆ ಸಾವನ್ನಪ್ಪಿದ್ದರು. ಮಕ್ಕಳಿಲ್ಲದ ಗಂಗಮ್ಮ ಒಂಟಿ ಜೀವನ ನಡೆಸುತ್ತಿದ್ದರು. ಆಕೆಯ ಆಸ್ತಿ ಮೇಲೆ ಕಣ್ಣು ಹಾಕಿದ್ದ ಪತಿಯ ಸಂಬಂಧಿಕರು, ಆಸ್ತಿ ಕಬಳಿಸಲು ಗಂಗಮ್ಮನ ಹತ್ಯೆಗೈದಿದ್ದಾರೆ.
ಟವೆಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಕಾವೇರಿ ನದಿಗೆ ಬಿಸಾಕಿದ್ದಾರೆ. ಈ ಬಗ್ಗೆ ವಿಚಾರಣೆ ವೇಳೆ ಪೊಲೀಸರೆದುರು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಆರೋಪಿಗಳಾದ ಶಿವರಾಜ್, ಕಿರಣ್, ರವಿಶಂಕರ್, ಮಂಜು, ರಾಜೇಶ್, ವೆಂಕಟೇಶ್ ಸೇರಿದಂತೆ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸದ್ಯ ಗಂಗಮ್ಮನ ಶವಕ್ಕಾಗಿ ಶೋಧ ನಡೆಯುತ್ತಿದೆ.





