AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krishna Janmashtami 2021: ಈ ವರ್ಷ ಕೃಷ್ಣ ಜನ್ಮಾಷ್ಟಮಿಯ ಶುಭ ಮುಹೂರ್ತ-ಮಹತ್ವ, ಪೂಜಾ ವಿಧಿ ವಿಧಾನ ಏನು ತಿಳಿಯೋಣ

ಹಸುವಿಗೆ ಪ್ರತಿ ದಿನ ಮೇವನ್ನು ಕೊಡಮಾಡಬೇಕು. ಇದು ಪ್ರತಿ ದಿನ ಆಗದಿದ್ದರೆ ಕೃಷ್ಣ ಜನ್ಮಾಷ್ಟಮಿಯ ದಿನವಾದರೂ ಹಸುವಿಗೆ ಗೋಗ್ರಾಸ ಅಂದರೆ ಮೇವನ್ನು ಕೊಡಬಹುದು. ಹೀಗೆ ಮಾಡುವುದರಿಂದ ಗೋಮಾತೆಯ ಆಶೀರ್ವಾದದ ಜೊತೆಗೆ ಶ್ರೀಕೃಷ್ಣನ ಆಶೀರ್ವಾದವೂ ಪ್ರಾಪ್ತಿಯಾಗುತ್ತದೆ.

Krishna Janmashtami 2021: ಈ ವರ್ಷ ಕೃಷ್ಣ ಜನ್ಮಾಷ್ಟಮಿಯ ಶುಭ ಮುಹೂರ್ತ-ಮಹತ್ವ, ಪೂಜಾ ವಿಧಿ ವಿಧಾನ ಏನು ತಿಳಿಯೋಣ
ಈ ಬಾರಿ ಕೃಷ್ಣ ಜನ್ಮಾಷ್ಟಮಿಯ ಶುಭ ಮುಹೂರ್ತ-ಮಹತ್ವ, ಪೂಜಾ ವಿಧಿ ವಿಧಾನ ಏನು ಎಂಬುದನ್ನು ತಿಳಿಯೋಣ
TV9 Web
| Updated By: ಆಯೇಷಾ ಬಾನು|

Updated on: Aug 17, 2021 | 7:29 AM

Share

ಶ್ರೀ ಕೃಷ್ಣ ಜನ್ಮಾಷ್ಟಮಿ ಹಿಂದೂ ಧರ್ಮೀಯರಿಗೆ ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ಅಷ್ಟಮಿ ತಿಥಿಯಂದು ಬರುತ್ತದೆ. ಇದು ಹಿಂದೂಗಳಿಗೆ ಉತ್ಸಾಹದ, ಲವಲವಿಕೆಯ, ಜೀವಂತಿಕೆಯ, ಧರ್ಮ ಪ್ರಧಾನ ಹಬ್ಬ. ಇದು ವಿಶೇಷವಾಗಿ ಬಾಲ ಕೃಷ್ಣನ ಹಬ್ಬವಾಗಿದ್ದು, ಬಾಲ ಬಾಲಕಿಯರಿಗೆ ವಿಶೇಷ ಹಬ್ಬವಾಗಿದೆ (Krishna Janmashtami ). ಈ ದಿನ ವಿಶೇಷ ಏನು, ಮಹತ್ವ ಏನು ಎಂಬುದನ್ನು ತಿಳಿಯೋಣ ಬನ್ನೀ.

ಹಿಂದೂ ಧರ್ಮದಲ್ಲಿಒಂದೊಂದು ತಿಂಗಳಿಗೂ ಒಂದೊಂದು ಮಹತ್ವದ ಸ್ಥಾನವಿದೆ. ಚಾತುರ್ಮಾಸದಲ್ಲಿ ಭಗವಂತ ವಿಷ್ಣುನನ್ನು ನಾನಾ ಅವತಾರಗಳಲ್ಲಿ ಪೂಜಿಸುತ್ತಾರೆ. ಭಾದ್ರಪದ ಮಾಸದಲ್ಲಿ ಭಗವಂತ ವಿಷ್ಣು, ಶ್ರೀಕೃಷ್ಣನ ರೂಪದಲ್ಲಿ ಅವತರಿಸಿದ್ದಾನೆ. ಶ್ರೀಕೃಷ್ಣ ಜನ್ಮ ತಾಳಿದ ಆ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಕರೆಯಲಾಗುವುದು. ಶ್ರೀಕೃಷ್ಣನ ಜನ್ಮ ಸ್ಥಳವಾದ ಮಥುರಾದಲ್ಲಿ ಈ ದಿನವನ್ನು ವಿಶಿಷ್ಟವಾಗಿ ಆಚರಸಿಲಾಗುವುದು. ಧಾಂಧೂಂ ಅಂತಾ ಜೋರಾಗಿ ಆಚರಿಸಲ್ಪಡುತ್ತದೆ.

ಈ ಬಾರಿ ಕೃಷ್ಣ ಜನ್ಮಾಷ್ಟಮಿ 2021ನೇ ಸಾಲಿನ ಆಗಸ್ಟ್​ 30ರಂದು ಆಚರಿಸಲ್ಪಡುತ್ತದೆ. ಅಂದು ಕೃಷ್ಣ ಮಂದಿರದಲ್ಲಿ ಲಡ್ಡು ಗೋಪಾಲನ ಜನ್ಮದಿನ ಎಂದೂ ಈ ಹಬ್ಬ ಆಚರಿಸಲಾಗುತ್ತದೆ. ಸಂತಾನವಿಲ್ಲದ ದಂಪತಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದರೆ, ಜನ್ಮಾಷ್ಟಮಿ ವ್ರತ ಆಚರಿಸಿದರೆ ಎಲ್ಲ ಮನೋಕಾಮನೆಗಳು ಈಡೇರಿ, ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಬನ್ನೀ ಆಗಸ್ಟ್​ 30ರಂದು ಆಚರಿಸಲ್ಪಡುವ ಕೃಷ್ಣ ಜನ್ಮಾಷ್ಟಮಿ ದಿನಕ್ಕೆ ಇರುವ ಇನ್ನೂ ಮಹತ್ವದ ಸಂಗತಿಗಳನ್ನು ತಿಳಿದುಕೊಳ್ಳೋಣ.

ಕೃಷ್ಣ ಜನ್ಮಾಷ್ಟಮಿ ಶುಭ ಮುಹೂರ್ತ ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ಅಷ್ಟಮಿ ದಿನದಂದು ಶ್ರೀ ಕೃಷ್ಣ ಜನ್ಮ ತಳೆದಿದ್ದ. ಈ ಬಾರಿ ಆಗಸ್ಟ್​ 29 ಭಾನುವಾರ ರಾತ್ರಿ 11 ಗಂಟೆ 25 ನಿಮಿಷದಿಂದ ಆಗಸ್ಟ್​ 30 ಸೋಮವಾರದ ರಾತ್ರಿ 1 ಗಂಟೆ 59 ನಿಮಿಷದವರೆಗೂ ಕೃಷ್ಣ ಜನ್ಮಾಷ್ಟಮಿ ಶುಭ ಮುಹೂರ್ತ ಇರುತ್ತದೆ. ಸೂರ್ಯೋದಯಕ್ಕೆ ಹುಟ್ಟು ಹಬ್ಬ ಆಚರಣೆ ಇರುವುದರಿಂದ ಆಗಸ್ಟ್​ 30 ಸೋಮವಾರ ಕೃಷ್ಣ ಜನ್ಮಾಷ್ಟಮಿ ಆಚರಿಸಲ್ಪಡುತ್ತದೆ. ಕೃಷ್ಣ ಜನ್ಮಾಷ್ಟಮಿಯಂದು ಈ ಅವಧಿಯಲ್ಲಿ ಭಕ್ತಾದಿಗಳು ವ್ರತ ಆಚರಿಸುತ್ತಾರೆ. ಸ್ವಚ್ಛ ಮನಸಿನಿಂದ, ಶ್ರದ್ಧಾ ಭಕ್ತಿಯಿಂದ ಯಾರು ಶ್ರೀಕಷ್ಣನನ ಉಪಾಸನೆ ಮಾಡುತ್ತಾರೋ ಅವರ ಮನೋಕಾಮನೆಗಳು ಪೂರೈಸುತ್ತವೆ.

ಹಸುವಿಗೆ ಪ್ರತಿ ದಿನ ಮೇವನ್ನು ಕೊಡಮಾಡಬೇಕು. ಇದು ಪ್ರತಿ ದಿನ ಆಗದಿದ್ದರೆ ಕೃಷ್ಣ ಜನ್ಮಾಷ್ಟಮಿಯ ದಿನವಾದರೂ ಹಸುವಿಗೆ ಗೋಗ್ರಾಸ ಅಂದರೆ ಮೇವನ್ನು ಕೊಡಬಹುದು. ಹೀಗೆ ಮಾಡುವುದರಿಂದ ಗೋಮಾತೆಯ ಆಶೀರ್ವಾದದ ಜೊತೆಗೆ ಶ್ರೀಕೃಷ್ಣನ ಆಶೀರ್ವಾದವೂ ಪ್ರಾಪ್ತಿಯಾಗುತ್ತದೆ. ಹಸುವಿಗೆ ಬೆಲ್ಲ ತಿನ್ನಿಸಬೇಕು. ಇದರಿಂದ ಗೋಮಾತೆ ಸುಪ್ರಸನ್ನಳಾಗಿ ಆಶೀರ್ವಾದ ಕೊಡುತ್ತಾಳೆ. ಎಲ್ಲಿ ಹಸುಗಳು ಖುಷಿಖುಷಿಯಾಗಿರುತ್ತವೋ ಅಲ್ಲೆಲ್ಲಾ ನಕಾರಾತ್ಮಕ ಭಾವಗಳು ತನ್ನಿಂತಾನೇ ನಾಶಗೊಳ್ಳುತ್ತವೆ. ಕೃಷ್ಣ ಜನ್ಮಾಷ್ಟಮಿ ದಿನ ಹಸುಗಳ ಮೈತೊಳೆದು, ಸ್ನಾನ ಮಾಡಿಸುವುದು ಉತ್ಕೃಷ್ಟವಾಗಿರುತ್ತದೆ. ಇದರಿಂದ ಶ್ರೀಕೃಷ್ಣನನ್ನು ಸಂಪ್ರೀತಗೊಳಿಸುವುದರ ಜೊತೆಗೆ 33 ಕೋಟಿ ದೇವ-ದೇವತೆಯನ್ನು ಆರಾಧಿಸಿದಂತಾಗುತ್ತದೆ.

(krishna janmashtami 2021 know the date shubha muhurat and importance)