ರಂಗನಾಥ್ ಯೂ ಆರ್ ಫ್ರಾಡ್, ಯು ಕಮಿಟೆಡ್ ಫ್ರಾಡ್, ಹೀಗೆ ಹೇಳಿದವಱರು?
ತುಮಕೂರು: ಹಿಂದುಳಿದ ವರ್ಗಗಳ ಜನರಿಗೆ ಮನೆ ನಿರ್ಮಿಸಲು ಹಣ ನೀಡಿಲ್ಲ ಎಂಬ ವಿಚಾರವಾಗಿ ಸಚಿವ ಮತ್ತು ಶಾಸಕರೊಬ್ಬರು ವಾಗ್ವಾದ ನಡೆಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಘಟನೆ ಸಂಭವಿಸಿದೆ. ಹಿಂದುಳಿದ ವರ್ಗದ ಜನರಿಗೆ ಮನೆ ನಿರ್ಮಿಸಿಕೊಡಲು ಹಣ ನೀಡಿಲ್ಲ, ಮೂರು ತಿಂಗಳಿಂದ ಸರ್ಕಾರದಲ್ಲಿ ಹಣ ಇಲ್ಲ, ಕೊಡೋಕಾಗ್ತಿಲ್ಲ ಅಂತ ಹೇಳಿ ಒಪ್ಪಿಕೊಳ್ತೀವಿ. ಆದ್ರೆ ಕೊಟ್ಟಿದ್ದೀವಿ ಅಂತ ಸುಳ್ಳು ಹೇಳ್ಬೇಡಿ ಎಂದು ತುಮಕೂರು ಶಾಸಕ ಡಾಕ್ಟರ್ ರಂಗನಾಥ್ ಸಚಿವ […]

ತುಮಕೂರು: ಹಿಂದುಳಿದ ವರ್ಗಗಳ ಜನರಿಗೆ ಮನೆ ನಿರ್ಮಿಸಲು ಹಣ ನೀಡಿಲ್ಲ ಎಂಬ ವಿಚಾರವಾಗಿ ಸಚಿವ ಮತ್ತು ಶಾಸಕರೊಬ್ಬರು ವಾಗ್ವಾದ ನಡೆಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಘಟನೆ ಸಂಭವಿಸಿದೆ. ಹಿಂದುಳಿದ ವರ್ಗದ ಜನರಿಗೆ ಮನೆ ನಿರ್ಮಿಸಿಕೊಡಲು ಹಣ ನೀಡಿಲ್ಲ, ಮೂರು ತಿಂಗಳಿಂದ ಸರ್ಕಾರದಲ್ಲಿ ಹಣ ಇಲ್ಲ, ಕೊಡೋಕಾಗ್ತಿಲ್ಲ ಅಂತ ಹೇಳಿ ಒಪ್ಪಿಕೊಳ್ತೀವಿ. ಆದ್ರೆ ಕೊಟ್ಟಿದ್ದೀವಿ ಅಂತ ಸುಳ್ಳು ಹೇಳ್ಬೇಡಿ ಎಂದು ತುಮಕೂರು ಶಾಸಕ ಡಾಕ್ಟರ್ ರಂಗನಾಥ್ ಸಚಿವ ಮಾಧುಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.
ಇದರಿಂದ ಕೋಪಗೊಂಡ ಸಚಿವ ಮಾಧುಸ್ವಾಮಿ ಯು ಆರ್ ಫ್ರಾಡ್, ಯು ಆರ್ ಕಮಿಟೆಡ್ ಫ್ರಾಡ್, ನೀವು ಫ್ರಾಡ್ ಮಾಡಿದ್ರಿಂದಲೇ ರಾಜ್ಯಾದ್ಯಂತ ಎರಡು ತಿಂಗಳು ಹಣ ರಿಲೀಸ್ ಮಾಡೋದು ವಿಳಂಬ ಆಯ್ತು. ಹೀಗಾಗಿ ತನಿಖೆ ಮಾಡಿದಾಗ ನಿಮ್ಮ ತಾಲೂಕಿನಲ್ಲಿ 38 ಮನೆಗಳು ಫ್ರಾಡ್ ಆಗಿವೆ. ಇದನ್ನು ತನಿಖೆ ನಡೆಸಲು ಎರಡು ತಿಂಗಳು ಬೇಕಾಯಿತು. ಹೀಗಾಗಿ ಹಣ ರಿಲೀಸ್ ಮಾಡೋದು ವಿಳಂಬವಾಯಿತು ಎಂದು ಸಚಿವರು ರಂಗನಾಥ್ ಮೇಲೆ ಹರಿಹಾಯ್ದಿದ್ದಾರೆ.
Published On - 6:49 pm, Fri, 7 August 20




