ಕೊರೊನಾ ಚಿಕಿತ್ಸೆಗೆ 9 ಲಕ್ಷ ಬಿಲ್ ಮಾಡಿದ್ದ ಖಾಸಗಿ ಆಸ್ಪತ್ರೆ, ಡಿಸ್ಕೌಂಟ್ ಎಷ್ಟು ಕೊಟ್ಟಿದೆ ಗೊತ್ತಾ?
ಚಿಕ್ಕಮಗಳೂರು: ಕ್ರೂರಿ ಕೊರೊನಾ ಕಾಲಿಟ್ಟ ಮೇಲೆ ವಿಶ್ವಕ್ಕೆ ವಿಶ್ವವೇ ಕಂಗಾಲಾಗಿ ಹೋಗಿದೆ. ಮೊದ ಮೊದಲು ಕೊರೊನಾ ಅಂದ್ರೆ ಭಯ ಬೀಳುತ್ತಿದ್ದ ಜನ ಈಗ ಡೋಂಟ್ ಕೇರ್ ಅನ್ನುತ್ತಿದ್ದಾರೆ. ಆದ್ರೆ ಹೆಮ್ಮಾರಿ ಕೊರೊನಾದ ಅಟ್ಟಹಾಸ ಮಾತ್ರ ಕಮ್ಮಿಯಾಗಿಲ್ಲ. ಈ ಪಾಪಿ ಕೊರೊನಾ ಜನಸಾಮಾನ್ಯರಿಗೆ ಶಾಪವಾದ್ರೆ, ಕೆಲವರಿಗೆ ವರವಾಗಿದೆ. ಆಸ್ಪತ್ರೆಗಳು ಇದರ ಹೆಸರಿನಲ್ಲಿ ದಂಧಗೆ ಇಳಿದಿವೆ. 9 ಲಕ್ಷ ಬಿಲ್‌ಗೆ ಒಂದು ರೂಪಾಯಿ ಡಿಸ್ಕೌಂಟ್..! ನಂಬೋಕೆ ಸಾಧ್ಯವಿಲ್ಲದಿದ್ದರು ನಂಬಲೇಬೇಕಾದ ಸುದ್ದಿ ಇದು. ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣದ ಪಿಳ್ಳೇನಹಳ್ಳಿಯ 70 ವರ್ಷದ […]

ಚಿಕ್ಕಮಗಳೂರು: ಕ್ರೂರಿ ಕೊರೊನಾ ಕಾಲಿಟ್ಟ ಮೇಲೆ ವಿಶ್ವಕ್ಕೆ ವಿಶ್ವವೇ ಕಂಗಾಲಾಗಿ ಹೋಗಿದೆ. ಮೊದ ಮೊದಲು ಕೊರೊನಾ ಅಂದ್ರೆ ಭಯ ಬೀಳುತ್ತಿದ್ದ ಜನ ಈಗ ಡೋಂಟ್ ಕೇರ್ ಅನ್ನುತ್ತಿದ್ದಾರೆ. ಆದ್ರೆ ಹೆಮ್ಮಾರಿ ಕೊರೊನಾದ ಅಟ್ಟಹಾಸ ಮಾತ್ರ ಕಮ್ಮಿಯಾಗಿಲ್ಲ. ಈ ಪಾಪಿ ಕೊರೊನಾ ಜನಸಾಮಾನ್ಯರಿಗೆ ಶಾಪವಾದ್ರೆ, ಕೆಲವರಿಗೆ ವರವಾಗಿದೆ. ಆಸ್ಪತ್ರೆಗಳು ಇದರ ಹೆಸರಿನಲ್ಲಿ ದಂಧಗೆ ಇಳಿದಿವೆ.

9 ಲಕ್ಷ ಬಿಲ್‌ಗೆ ಒಂದು ರೂಪಾಯಿ ಡಿಸ್ಕೌಂಟ್..! ನಂಬೋಕೆ ಸಾಧ್ಯವಿಲ್ಲದಿದ್ದರು ನಂಬಲೇಬೇಕಾದ ಸುದ್ದಿ ಇದು. ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣದ ಪಿಳ್ಳೇನಹಳ್ಳಿಯ 70 ವರ್ಷದ ವ್ಯಕ್ತಿ 25 ದಿನಗಳಿಂದ ಚಿಕ್ಕಮಗಳೂರಿನ ಆಶ್ರಯ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ರು. ಮೊದಲಿಗೆ ಉಸಿರಾಟದ ತೊಂದರೆ ಎಂದು ಆಸ್ಪತ್ರೆಗೆ ದಾಖಲು ಮಾಡಿಕೊಂಡ ಖಾಸಗಿ ಆಸ್ಪತ್ರೆ, ಪರವಾಗಿಲ್ಲ ಚೇತರಿಕೆ ಆಗುತ್ತಿದ್ದಾರೆ ಅಂತಾ ರೋಗಿ ಕುಟುಂಬದವರಿಗೆ ಹೇಳಿದ್ದಾರೆ.
ಇಲ್ಲಾ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗ್ತೀವಿ ಅಂತಾ ರೋಗಿಯ ಕುಟುಂಬಸ್ಥರು ಹೇಳಿದ್ದಾರೆ. ಆದ್ರೆ ಆಸ್ಪತ್ರೆಯವರು ಮಾತ್ರ ಬೇಡ ಬೇಡ ನಾವೇ ಚಿಕಿತ್ಸೆ ಕೊಡ್ತೀವಿ ಅಂತ ಹೇಳಿದ್ದಾರೆ. ವ್ಯಕ್ತಿ ಮೃತಪಟ್ಟ ಬಳಿಕ ಕೊರೊನಾ ಅಂತಾ ತಿಳಿಸಿದ್ದಾರಂತೆ. ಅಲ್ದೆ, ಬರೋಬ್ಬರಿ 9,25,601ರೂಪಾಯಿ ಬಿಲ್ ಮಾಡಿ, ಈ ಬಿಲ್ ಕಟ್ಟಿದ್ರೆ ಮಾತ್ರ ಮೃತದೇಹ ಕೊಡೋದಾಗಿ ಪೀಡಿಸಿದ್ದಾರೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಹೇಗೋ ನಮ್ಮವರನ್ನ ಕಳೆದುಕೊಂಡ್ವಿ. ಕೊನೆಪಕ್ಷ ಡಿಸ್ಕೌಂಟ್ ಆದ್ರೂ ಕೊಡಿ ಅಂತಾ ಮೃತರ ಸಂಬಂಧಿಕರು ಅಂಗಲಾಚಿದಾಗ 9,25,601ರೂಪಾಯಿಯಲ್ಲಿ ನೀವು ಬೆಚ್ಚಿ ಬೀಳುವ ರೀತಿಯಲ್ಲಿ ಡಿಸ್ಕೌಂಟ್ ಮಾಡಿದ್ದಾರೆ. ಬರೋಬ್ಬರಿ 1 ರೂಪಾಯಿ ವಿನಾಯಿತಿ ನೀಡಿದ್ದಾರೆ. ಈ ಪರಿ ಖಾಸಗಿ ಆಸ್ಪತ್ರೆಯವರು ಅಮಾಯಕರ ಮೇಲೆ ಬರೆಯನ್ನ ಹಾಕ್ತಿದ್ರೂ ಜಿಲ್ಲಾಡಳಿತ ಹಾಗೂ ಸರ್ಕಾರ ಕಣ್ಮುಚ್ಚಿ ಕುಳಿತಿರೋದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಆಸ್ಪತ್ರೆಯಲ್ಲಿ ಮಾತ್ರವಲ್ಲ, ಬಹುತೇಕ ಖಾಸಗಿ ಆಸ್ಪತ್ರೆಗಳ ಇದೆೇ ರೀತಿ ದಂಧೆ ನಡೆಯುತ್ತಿದೆ. ಇದೆಲ್ಲವನ್ನ ನೋಡ್ತಾ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತುಕೊಂಡಿರುವುದು ಮಾತ್ರ ದುರಂತ.
Published On - 2:31 pm, Sat, 19 September 20




