ವಾಟಾಳು ಗ್ರಾಮದಲ್ಲಿ ದಾಯಾದಿ ಕಲಹ: ಕಟಾವಿಗೆ ಬಂದಿದ್ದ ಬಾಳೆ ತೋಟ ನಾಶ
ಮೈಸೂರು: ದಾಯಾದಿ ಕಲಹದಿಂದಾಗಿ ಒಂದು ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡಗಳನ್ನು ಸಂಬಂಧಿಕರೆ ಕಡಿದು ಹಾಕಿರುವ ಘಟನೆ ಮೈಸೂರು ಜಿಲ್ಲೆ T ನರಸೀಪುರ ತಾಲ್ಲೂಕಿನ ವಾಟಾಳು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಲಕ್ಷ್ಮಮ್ಮ ಎಂಬುವವರ ಒಂದು ಎಕರೆ ಬಾಳೆ ತೋಟವನ್ನು ಸಂಬಂಧಿಕರೆ ನಾಶ ಮಾಡಿದ್ದರು. ಈ ವಿಚಾರ ತಿಳಿದ ಕೂಡಲೇ ಶಾಸಕ ಅಶ್ವಿನ್ ಕುಮಾರ್ ಬಾಳೆ ತೋಟಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಲಕ್ಷ್ಮಮ್ಮ ಕುಟುಂಬಕ್ಕೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರ ಬಗ್ಗೆ ಮಾತಾನಾಡಿದ ಶಾಸಕ […]

ಮೈಸೂರು: ದಾಯಾದಿ ಕಲಹದಿಂದಾಗಿ ಒಂದು ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡಗಳನ್ನು ಸಂಬಂಧಿಕರೆ ಕಡಿದು ಹಾಕಿರುವ ಘಟನೆ ಮೈಸೂರು ಜಿಲ್ಲೆ T ನರಸೀಪುರ ತಾಲ್ಲೂಕಿನ ವಾಟಾಳು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಲಕ್ಷ್ಮಮ್ಮ ಎಂಬುವವರ ಒಂದು ಎಕರೆ ಬಾಳೆ ತೋಟವನ್ನು ಸಂಬಂಧಿಕರೆ ನಾಶ ಮಾಡಿದ್ದರು. ಈ ವಿಚಾರ ತಿಳಿದ ಕೂಡಲೇ ಶಾಸಕ ಅಶ್ವಿನ್ ಕುಮಾರ್ ಬಾಳೆ ತೋಟಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಲಕ್ಷ್ಮಮ್ಮ ಕುಟುಂಬಕ್ಕೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದರ ಬಗ್ಗೆ ಮಾತಾನಾಡಿದ ಶಾಸಕ ಅಶ್ವಿನ್ ಕುಮಾರ್, ಕಟಾವಿಗೆ ಬಂದಿರುವ ಬಾಳೆ ತೋಟವನ್ನ ಕಡಿದು ಹಾಕಿರುವುರು ಬೇಸರದ ಸಂಗತಿಯಾಗಿದೆ. ಘಟನೆಗೆ ಕಾರಣವಾದ ಆರೋಪಿಯನ್ನು ಕೂಡಲೇ ಬಂಧಿಸಬೇಕು. ಹಾಗೂ ಘಟನೆಗೆ ಕಾರಣವಾಗಿರುವ ವ್ಯಕ್ತಿಯಿಂದಲೇ ಲಕ್ಷ್ಮಮ್ಮ ಕುಟುಂಬಕ್ಕೆ ಪರಿಹಾರ ಕೊಡಿಸಬೇಕು ಎಂದು ಶಾಸಕರು ಸೂಚನೆ ನೀಡಿ ತೆರಳಿದರು.



