AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಮುಂದೆ ಸಗಣಿ ಸಾರಿಸುವುದರ ಹಿಂದಿರೋ ರಹಸ್ಯವೇನು?

ಗೋಮೂತ್ರವನ್ನು ಮನೆ ಮುಂದೆ ಇರುವ ಅಂಗಳಕ್ಕೆ ಹಾಕಿ, ಸಗಣಿಯಿಂದ ಸಾರಿಸಿ, ಸುಂದರವಾದ ರಂಗೋಲಿ ಹಾಕಲಾಗುತ್ತೆ. ಇಂತಹ ಆಚರಣೆಗಳು ಹೆಚ್ಚಾಗಿ ಹಳ್ಳಿಗಳಲ್ಲಿ ಇಂದಿಗೂ ಕಂಡುಬರುತ್ತೆ. ಇನ್ನು ಸಗಣಿಯಿಂದ ಮನೆಯ ಅಂಗಳವನ್ನು ಸಾರಿಸುವುದರ ಹಿಂದಿರೋ ವೈಜ್ಞಾನಿಕ ಕಾರಣಗಳೇನು? ಎಂಬುದನ್ನು ಇಲ್ಲಿ ಓದಿ ತಿಳಿಯಿರಿ.

ಮನೆ ಮುಂದೆ ಸಗಣಿ ಸಾರಿಸುವುದರ ಹಿಂದಿರೋ ರಹಸ್ಯವೇನು?
ಮನೆ ಮುಂದೆ ಸಗಣಿ ಸಾರುತ್ತಿರುವುದು
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Nov 30, 2020 | 10:00 AM

Share

ಪ್ರಾಣಿಗಳಿಗೆ ಗೌರವವನ್ನು ಸಲ್ಲಿಸುವುದು ನಮ್ಮ ಸನಾತನ ಧರ್ಮದ ಆಚರಣೆಗಳಲ್ಲಿ ಒಂದಾಗಿದೆ. ಅದರಲ್ಲೂ ಗೋವಿಗೆ ಪೂಜ್ಯನೀಯ ಸ್ಥಾನಮಾನ ನೀಡಿ, ಅತ್ಯಂತ ಪವಿತ್ರ ಪ್ರಾಣಿ ಎನ್ನಲಾಗುತ್ತೆ. ಹಿ೦ದೂ ಸಂಪ್ರದಾಯದ ಪ್ರಕಾರ, ಗೋವನ್ನು ಗೋಮಾತೆ ಅಂತಲೂ ಕರೆಯಲಾಗುತ್ತೆ. ಗೋವು 33 ಕೋಟಿ ದೇವತೆಗಳ ಆವಾಸ ಸ್ಥಾನವಾಗಿ, ಆಧ್ಯಾತ್ಮದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ.

ಪ್ರಕೃತಿ ಜನ್ಯ ಪದಾರ್ಥಗಳನ್ನು ತಿಂದು ಔಷಧಯುಕ್ತ ಅಮೃತ ಸಮಾನವಾದ ಹಾಲನ್ನು ನೀಡುತ್ತೆ ಗೋವು. ಪುರಾಣಗಳ ಪ್ರಕಾರ, ಸಮುದ್ರ ಮಥನ ಕಾಲದಲ್ಲಿ ಕ್ಷೀರಸಮುದ್ರದಲ್ಲಿ ಹುಟ್ಟಿದ ಕಲ್ಪವೃಕ್ಷವೇ ಮೊದಲಾದ ಹದಿನಾಲ್ಕು ಸುವಸ್ತುಗಳಲ್ಲಿ ಕಾಮಧೇನುವೂ ಒಂದು. ಕಾಮಧೇನು ಎಂದರೆ ಇಚ್ಛಿಸಿದ್ದನ್ನು ನೀಡುವ ಹಸು. ಈ ಹಸುವನ್ನು ದೇವತೆಗಳ ರಾಜನಾದ ಇಂದ್ರನಿಗೆ ಲೋಕಕಲ್ಯಾಣಾರ್ಥವಾಗಿ ನೀಡಲಾಯ್ತು ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಶತಪಥ ಬ್ರಾಹ್ಮಣ ಗ್ರಂಥದ ಪ್ರಕಾರ, ದಕ್ಷ ಪ್ರಜಾಪತಿಯು ಪ್ರಾಣಿಗಳನ್ನು ಸೃಷ್ಟಿಸಿದ ನಂತರ ತುಸು ಅಮೃತವನ್ನು ಸೇವಿಸ್ತಾನೆ. ಅದೇ ಅಮೃತದಿಂದ ಸಂತುಷ್ಟನಾದ ದಕ್ಷ ಪ್ರಜಾಪತಿಯ ಮೂಗಿನಿಂದ ಗೋವು ಜನ್ಮ ತಾಳುತ್ತೆ. ಹೀಗೆ ಗೋವು ದೈವೀಶಕ್ತಿಯನ್ನು ಪಡೆದು ಬೇಡಿದ್ದನ್ನು ಕರುಣಿಸುತ್ತೆ ಎನ್ನಲಾಗುತ್ತೆ.

ಪಂಚಗವ್ಯಗಳಿಗಿದೆ ಪವಿತ್ರವಾದ ಸ್ಥಾನ: ಇಂತಹ ಗೋವಿಗೆ ಹಾಗೂ ಗೋವಿನಿಂದ ಸಿಗುವ ಪಂಚಗವ್ಯಗಳಿಗೆ ಅತ್ಯ೦ತ ಪವಿತ್ರವಾದ ಸ್ಥಾನ ನೀಡಲಾಗಿದೆ. ಗೋವಿನಿಂದ ಉತ್ಪಾದನೆಯಾಗುವ ಹಾಲು, ಮೊಸರು, ತುಪ್ಪ, ಗೋಮಯ ಹಾಗೂ ಗೋಮೂತ್ರವನ್ನು ಪಂಚಗವ್ಯಗಳು ಅಂತಾ ಕರೆಯಲಾಗುತ್ತೆ. ಪಂಚಗವ್ಯಗಳಲ್ಲಿ ಗೋಮಯ ಅಥವಾ ಸಗಣಿಗೆ ಅದರದ್ದೇ ಆದ ಪ್ರಾಶಸ್ತ್ಯವಿದೆ. ಅನೇಕ ಆಧ್ಯಾತ್ಮಿಕ ಯಜ್ಞಗಳಲ್ಲಿ ಗೋಮೂತ್ರ ಹಾಗೂ ಆಕಳ ತುಪ್ಪವನ್ನು ಬಳಸಲಾಗುತ್ತೆ. ಗೋಮಯವನ್ನು ತುಪ್ಪದೊ೦ದಿಗೆ ಉರಿಸುವ ಪ್ರಕ್ರಿಯೆಯಿಂದ ಮನೆಯು ಶುದ್ಧವಾಗುವುದಲ್ಲದೇ, ಮನೆಯಲ್ಲಿನ ದುಷ್ಟಶಕ್ತಿಗಳು ನಿವಾರಣೆ ಆಗುತ್ತವೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇದಿಷ್ಟೇ ಅಲ್ಲದೇ, ವೈಜ್ಞಾನಿಕವಾಗಿ ಕೆಲ ಸ೦ಶೋಧನೆಗಳು ಗೋಮೂತ್ರ ವಾತಾವರಣದ ಗಾಳಿಯನ್ನು ಶುದ್ಧೀಕರಿಸುತ್ತೆ ಅಂತಾ ದೃಢಪಡಿಸಿವೆ. ಜೊತೆಗೆ ಪರಿಸರವನ್ನು ಮಾಲಿನ್ಯಮುಕ್ತ ಹಾಗೂ ಹಾನಿಕಾರಕ ವಿಕಿರಣಗಳಿ೦ದ ಮುಕ್ತವನ್ನಾಗಿಸುತ್ತೆ ಅಂತಾ ಹೇಳಿವೆ.

ಕೊರೊನಾದಿಂದ ತತ್ತರಿಸಿದ್ದ ಚೀನಾ ವಿಮಾನದಿಂದ ಭೂಮಿಗೆ ಅರಿಶಿನದ ನೀರಿನೊಂದಿಗೆ ಗೋ ಮೂತ್ರವನ್ನು ಮಂತ್ರ ಪೂರ್ವಕ ಪುಣ್ಯಾಹ ಮಾಡಿ ಮಾವಿನ ಎಲೆಯಿಂದ ಪ್ರೋಕ್ಷಣೆ ಮಾಡಿದ್ರು. ಈ ಮೂಲಕ ಕೊರೊನಾ ವೈರಸ್​​ನಿಂದ ಕಾಪಾಡುವಂತೆ ಪ್ರಾರ್ಥನೆ ಸಲ್ಲಿಸಿದ್ದರಂತೆ. ಇಂತಹ ಗೋಮೂತ್ರವನ್ನು ಮನೆ ಮುಂದೆ ಇರುವ ಅಂಗಳಕ್ಕೆ ಹಾಕಿ, ಸಗಣಿಯಿಂದ ಸಾರಿಸಿ, ಸುಂದರವಾದ ರಂಗೋಲಿ ಹಾಕಲಾಗುತ್ತೆ. ಇಂತಹ ಆಚರಣೆಗಳು ಹೆಚ್ಚಾಗಿ ಹಳ್ಳಿಗಳಲ್ಲಿ ಇಂದಿಗೂ ಕಂಡುಬರುತ್ತೆ. ಇನ್ನು ಸಗಣಿಯಿಂದ ಮನೆಯ ಅಂಗಳವನ್ನು ಸಾರಿಸುವುದರ ಹಿಂದಿರೋ ವೈಜ್ಞಾನಿಕ ಕಾರಣಗಳೇನು?

ಮನೆ ಮುಂದೆ ಸಗಣಿ ಸಾರಿಸುವುದರ ಹಿಂದಿರೋ ಮಹತ್ವ: 1)ಹೊರಗಡೆಯಿಂದ ಮನೆಯೊಳಗೆ ಕ್ರಿಮಿಕೀಟಗಳು ಪ್ರವೇಶಿಸುವುದಿಲ್ಲ 2)ಗಾಳಿಯಲ್ಲಿನ ಕ್ರಿಮಿಕೀಟಗಳು ನಾಶವಾಗುತ್ತವೆ. 3)ಹೊರಗಡೆ ತಿರುಗಿ ಬಂದವರ ಕಾಲಿನಲ್ಲಿರುವ ಕ್ರಿಮಿಕೀಟಗಳು ನಾಶವಾಗುತ್ತವೆ. 4)ಸುತ್ತಮುತ್ತಲಿನ ವಾತಾವರಣವನ್ನು ಶುದ್ಧಗೊಳಿಸುತ್ತೆ.

ಹೀಗೆ ಸಗಣಿಯಿಂದ ಕ್ರಿಮಿಕೀಟಗಳು ನಾಶವಾಗುತ್ತವೆ ಅಂತಾ ಹೇಳಲಾಗುತ್ತೆ. ಇದಿಷ್ಟೇ ಅಲ್ಲದೇ ಸಗಣಿಯಿಂದ ಅನೇಕ ಉಪಯೋಗಗಳಿವೆ. ಸಗಣಿಯನ್ನು ಇಂಧನವಾಗಿ, ಕಟ್ಟಡ ನಿರ್ಮಾಣಗಳಲ್ಲಿ, ಪೇಪರ್ ತಯಾರಿಕೆಯಲ್ಲಿ, ಕ್ರಿಮಿಕೀಟಗಳನ್ನು ಹೋಗಲಾಡಿಸಲು, ಗೊಬ್ಬರ ತಯಾರಿಕೆಗೆ, ಸೋಪ್ ತಯಾರಿಕೆಗೆ, ಬೆರಣಿ ಹಾಗೂ ವಿಭೂತಿ ತಯಾರಿಸಲು ಬಳಸಲಾಗುತ್ತೆ. ಇಂತಹ ಬಹುಪಯೋಗಿ ಸಗಣಿಯಿಂದ ಮನೆಯ ಅಂಗಳವನ್ನು ಸಾರಿಸಿ ರಂಗೋಲಿ ಹಾಕುವುದು ಭಾರತೀಯರ ಸಂಪ್ರದಾಯಗಳಲ್ಲಿ ಒಂದು.

ಹೀಗೆ ಈ ಮಹತ್ವಪೂರ್ಣವಾದ ಆಚರಣೆಯನ್ನು ಇಂದಿಗೂ ಅನುಸರಿಸಿಕೊಂಡು ಬರಲಾಗಿದೆ. ಆದ್ರೂ ಕೆಲವರಿಗೆ ಮನೆಯ ಅಂಗಳವನ್ನು ಸಗಣಿಯಿಂದ ಸಾರಿಸುವ ಹಿಂದಿರುವ ವೈಜ್ಞಾನಿಕ ಕಾರಣ ಗೊತ್ತಿಲ್ಲ. ಇದರ ಮಹತ್ವ ಅರಿತುಕೊಂಡು ಈ ಆಚರಣೆಯನ್ನು ಅಳವಡಿಸಿಕೊಂಡರೆ ನಮಗೇ ಒಳ್ಳೆಯದು.

Published On - 9:43 am, Sun, 29 November 20

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು