ಮೈಸೂರು: 100 ಅಡಿ ಆಳದ ಕಿರಿದಾದ ಬಾವಿಯೊಳಗೆ ಚಿರತೆ ಒಂದು ಬಿದ್ದಿದೆ ಎಂಬ ಮಾಹಿತಿ ಮೇರೆಗೆ ಅದನ್ನ ಹುಡುಕಲು ಅರಣ್ಯ ಇಲಾಖೆ ಅಧಿಕಾರಿ ಬೋನಿನಲ್ಲಿ ಕೂತು ಬಾವಿಯೊಳಗೆ ಇಳಿದ ಸ್ವಾರಸ್ಯಕರ ಪ್ರಸಂಗ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಾರಾಪುರದಲ್ಲಿ ನಡೆದಿದೆ.
ನಿನ್ನೆ ಬಾವಿಯೊಳಗೆ ಚಿರತೆ ಒಂದು ಬಿದ್ದಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಹೀಗಾಗಿ, ಸ್ಥಳಕ್ಕೆ ಭೇಟಿಕೊಟ್ಟ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದರು. ಆದರೆ, ಚಿರತೆ ಬಿದ್ದರುವ ಬಗ್ಗೆ ಯಾವುದೇ ಕುರುಹು ಸಿಕ್ಕಿರಲಿಲ್ಲ.
ಹಾಗಾಗಿ, ಬಾವಿಯಲ್ಲಿ ಇಳಿದು ಚಿರತೆಯನ್ನ ಹುಡುಕಲು ನಾಗರಹೊಳೆಯ ಅಂತರಸಂತೆ ವ್ಯಾಪ್ತಿಯ RFO ಸಿದ್ದರಾಜು ಮುಂದಾದರು. ಕಿರಿದಾದ ಬಾವಿ ಆಗಿದ್ದ ಕಾರಣ ಸಿದ್ದರಾಜು ಬೋನಿನಲ್ಲಿ ಕುಳಿತು ಬಾವಿಯೊಳಗೆ ಇಳಿದು ಪರಿಶೀಲನೆ ನಡೆಸಿದರು. ಆದರೆ, ಚಿರತೆ ಎಲ್ಲೂ ಕಾಣಿಸಲಿಲ್ಲ ಎಂದು ತಿಳಿದುಬಂದಿದೆ. ಅದರೆ, ಜೀವದ ಹಂಗು ತೊರೆದು ಬಾವಿಗಿಳಿದ RFO ಸಿದ್ದರಾಜು ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.