AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಸೇರಿದಂತೆ ಗಜಪಡೆಗೆ ಆತ್ಮೀಯ ಬೀಳ್ಕೊಡುಗೆ..

ಮೈಸೂರು: ಸರಳ ದಸರಾವನ್ನು ಯಾವುದೇ ಅಡಚಣೆಗಳಿಲ್ಲದಂತೆ ಸುಸೂತ್ರವಾಗಿ ನೆರವೇರಿಸಲಾಗಿದೆ. ದಸರಾ ಮುಗಿದ ಹಿನ್ನೆಲೆಯಲ್ಲಿ ಈಗ ಗಜಪಡೆಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ ನೀಡಲಾಗುತ್ತಿದೆ. ನಾಳೆ ಅಭಿಮನ್ಯು ಅಂಡ್ ಟೀಂ ಕಾಡಿನತ್ತ ತೆರಳಲಿದ್ದಾರೆ. ದಸರಾದ ವೈಭವವನ್ನು ಹೆಚ್ಚಿಸುವ ಗಜಪಡೆ ನಾಳೆ ತಮ್ಮ ತಮ್ಮ ‘ಮನೆಗಳಿಗೆ’ ತೆರಳಿವೆ. ಹೀಗಾಗಿ ಇಂದು ದಸರಾ ಆನೆಗಳಿಗೆ ಮತ್ತು ಮಾವುತರಿಗೆ ವಿಶೇಷ ಭೋಜನ ಅತಿಥ್ಯ ಸತ್ಕಾರ ಮಾಡಲಾಗುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಯಶಸ್ವಿಯಾದ ಹಿನ್ನೆಲೆ ಗಜಪಡೆಗೆ ಮೈಸೂರು ಉಸ್ತುವಾರಿ ಸಚಿವ ಸೋಮಶೇಖರ್‌ ಪೂಜೆ ಸಲ್ಲಿಸಿದ್ರು. ಅಭಿಮನ್ಯು, ವಿಕ್ರಮ, […]

ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಸೇರಿದಂತೆ ಗಜಪಡೆಗೆ ಆತ್ಮೀಯ ಬೀಳ್ಕೊಡುಗೆ..
ಆಯೇಷಾ ಬಾನು
| Edited By: |

Updated on: Oct 27, 2020 | 1:19 PM

Share

ಮೈಸೂರು: ಸರಳ ದಸರಾವನ್ನು ಯಾವುದೇ ಅಡಚಣೆಗಳಿಲ್ಲದಂತೆ ಸುಸೂತ್ರವಾಗಿ ನೆರವೇರಿಸಲಾಗಿದೆ. ದಸರಾ ಮುಗಿದ ಹಿನ್ನೆಲೆಯಲ್ಲಿ ಈಗ ಗಜಪಡೆಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ ನೀಡಲಾಗುತ್ತಿದೆ. ನಾಳೆ ಅಭಿಮನ್ಯು ಅಂಡ್ ಟೀಂ ಕಾಡಿನತ್ತ ತೆರಳಲಿದ್ದಾರೆ.

ದಸರಾದ ವೈಭವವನ್ನು ಹೆಚ್ಚಿಸುವ ಗಜಪಡೆ ನಾಳೆ ತಮ್ಮ ತಮ್ಮ ‘ಮನೆಗಳಿಗೆ’ ತೆರಳಿವೆ. ಹೀಗಾಗಿ ಇಂದು ದಸರಾ ಆನೆಗಳಿಗೆ ಮತ್ತು ಮಾವುತರಿಗೆ ವಿಶೇಷ ಭೋಜನ ಅತಿಥ್ಯ ಸತ್ಕಾರ ಮಾಡಲಾಗುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಯಶಸ್ವಿಯಾದ ಹಿನ್ನೆಲೆ ಗಜಪಡೆಗೆ ಮೈಸೂರು ಉಸ್ತುವಾರಿ ಸಚಿವ ಸೋಮಶೇಖರ್‌ ಪೂಜೆ ಸಲ್ಲಿಸಿದ್ರು.

ಅಭಿಮನ್ಯು, ವಿಕ್ರಮ, ಗೋಪಿ, ವಿಜಯಾ, ಕಾವೇರಿಗೆ ಪುಷ್ಪಾರ್ಚನೆ ಮಾಡಿ, ಆನೆಗಳಿಗೆ ಕಬ್ಬು ಬೆಲ್ಲ ನೀಡಿದ್ರು. ಬಳಿಕ ಗಜಪಡೆ ಮಾವುತರು, ಕಾವಾಡಿಗರಿಗೆ ಪ್ರೋತ್ಸಾಹಧನ ವಿತರಿಸಿದ್ರು. ಈ ವೇಳೆ ಶಾಸಕರಾದ ರಾಮದಾಸ್, ನಾಗೇಂದ್ರ, ಮುಡಾ ಅಧ್ಯಕ್ಷ ರಾಜೀವ್ ಸಾಥ್ ಕೊಟ್ರು.

ಅಭಿಮನ್ಯು ಬಗ್ಗೆ ಸಂತಸವಿದೆ ಅಭಿಮನ್ಯು ಯಶಸ್ಸಿನ ಬಗ್ಗೆ ಮಾವುತ ವಸಂತ ಸಂತಸ ಹಂಚಿಕೊಂಡಿದ್ದಾರೆ. ಅಭಿಮನ್ಯು ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು ಸಾಗಿದ. ಪ್ರಾರಂಭದಲ್ಲಿ ಹೆದರಿಕೆ ಇತ್ತು. ಅಧಿಕಾರಿಗಳು ಧೈರ್ಯ ತುಂಬಿದ್ರು. ಮಾಡೇ ಮಾಡ್ತಾನೆ ಹೆದರಬೇಡ ಎಂದಿದ್ರು. ಮರದ ಅಂಬಾರಿ ಹೊತ್ತಿದ್ದ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತಿರಲಿಲ್ಲ.

ಆದರೆ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತಿದ್ದಾನೆ. ಅಭಿಮನ್ಯು ಕಾರ್ಯದ ಬಗ್ಗೆ ಖುಷಿಯಾಗಿದೆ. ಶ್ರೀರಂಗಪಟ್ಟಣದಲ್ಲಿ ಪುಷ್ಪಾರ್ಚನೆ ಮಾಡಿದ ಅನುಭವ ಅಭಿಮನ್ಯುಗೆ ಇತ್ತು. ಅಭಿಮನ್ಯು ಯಶಸ್ವಿಯಾಗಿ ಜಂಬೂಸವಾರಿ ನಡೆಸಿಕೊಟ್ಟಿದ್ದಾನೆ ಎಂದು ಮಾವುತ ವಸಂತ ಖುಷಿಯಲ್ಲಿ ತೇಲಾಡಿದ್ದಾರೆ.

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ