AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England Test Series : ಗಿಲ್ ಆಡುವುದನ್ನು ನೋಡುತ್ತಿದ್ದರೆ ಮಾರ್ಟಿನ್ ಕ್ರೋವ್ ನೆನಪಾಗುತ್ತಾರೆ: ಕೈಲ್ ಮಿಲ್ಸ್

ಗಿಲ್ ಹೊರತಾಗಿ ಚೇತೇಶ್ವರ್ ಪೂಜಾರಾ ಅವರ ಮೇಲೂ ಮಿಲ್ಸ್ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅವರು ಆಸ್ಟ್ರೇಲಿಯಾ ಬೌಲರ್​ಗಳಿಂದ ಹಲವಾರು ಬಾರಿ ಪೆಟ್ಟು ತಿಂದರೂ ಸಿಡ್ನಿ ಮತ್ತು ಬ್ರಿಸ್ಬೇನ್​ನಲ್ಲಿ ದಿಟ್ಟತನದ ಬ್ಯಾಟಿಂಗ್ ಪ್ರದರ್ಶನ ನೀಡಿದರು ಎಂದು ಮಿಲ್ಸ್ ಹೇಳಿದ್ದಾರೆ.

India vs England Test Series : ಗಿಲ್ ಆಡುವುದನ್ನು ನೋಡುತ್ತಿದ್ದರೆ ಮಾರ್ಟಿನ್ ಕ್ರೋವ್ ನೆನಪಾಗುತ್ತಾರೆ: ಕೈಲ್ ಮಿಲ್ಸ್
ಶುಭ್​ಮನ್ ಗಿಲ್
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 03, 2021 | 11:02 PM

Share

ಪ್ರತಿಷ್ಠಿತ ಭಾರತ-ಇಂಗ್ಲೆಂಡ್ ಸರಣಿ ಶುರುವಾಗಲು ಕೇವಲ ಎರಡು ದಿನಗಳು ಮಾತ್ರ ಉಳಿದಿವೆ. ಸಹಜವಾಗಿಯೇ ಎಲ್ಲ ಕ್ರಿಕೆಟ್ ಪ್ರೇಮಿಗಳ ಗಮನ ಟೀಮಿಗೆ ವಾಪಸ್ಸಾಗಿರುವ ನಾಯಕ ವಿರಾಟ್ ಕೊಹ್ಲಿ ಮೇಲಿರಲಿದೆ. ಭಾರತ ಡೌನ್ಅಂಡರ್ ಪ್ರವಾಸದಲ್ಲಿ ಅವರು ಮೊದಲ ಟೆಸ್ಟ್​ನಲ್ಲಿ ಭಾಗವಹಿಸಿದ ನಂತರ ಸ್ವದೇಶಕ್ಕೆ ಮರಳಿದ್ದು ಎಲ್ಲರಿಗೂ ಗೊತ್ತಿದೆ.

ಪ್ರಸ್ತುತವಾಗಿ ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ವಿರಾಟ್ ಲೈಮ್​ಲೈಟ್​ನ್ನು ತಮ್ಮತ್ತ ಸೆಳೆದುಕೊಳ್ಳಲಿದುವುದು ನಿಜವೇ; ಅದರೆ, ಆಸ್ಟ್ರೇಲಿಯಾದಲ್ಲಿ ಮಿಂಚಿದ ಕೆಲ ಯುವ ಆಟಗಾರರು ಸಹ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ. ಶುಭ್​ಮನ್ ಗಿಲ್, ರಿಷಭ್ ಪಂತ್ ಮತ್ತು ಮೊಹಮ್ಮದ್ ಸಿರಾಜ್ ಸಹ ಈ ಸರಣಿಯಲ್ಲಿ ಕ್ರಿಕೆಟ್ ಪ್ರೇಮಿಗಳ ಗಮನ ತಮ್ಮತ್ತ ಸೆಳೆದುಕೊಳ್ಳಲಿದ್ದಾರೆ.

ನ್ಯೂಜಿಲೆಂಡ್ ಮಾಜಿ ವೇಗದ ಬೌಲರ್ ಕೈಲ್ ಮಿಲ್ಸ್, ಗಿಲ್​ರ ಬ್ಯಾಟಿಂಗ್ ಪ್ರತಿಭೆಯನ್ನು ಕೊಂಡು ಬೆರಗಾಗಿದ್ದಾರಲ್ಲದೆ ಅವರನ್ನು ತಮ್ಮ ದೇಶ ಮಾತ್ರವಲ್ಲದೆ ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ದಿವಂಗತ ಮಾರ್ಟಿನ್ ಕ್ರೋವ್ ಅವರಿಗೆ ಹೋಲಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಗಿಲ್ ಅಕರ್ಷಕ ಮತ್ತು ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿ 2 ಅರ್ಧ ಶತಕಗಳೊಂದಿಗೆ 259ರನ್ ಗಳಿಸಿದರು.

ಮಾರ್ಟಿನ್ ಕ್ರೋವ್

‘ಶುಭ್​ಮನ್ ಗಿಲ್ ನಿಸ್ಸಂದೇಹವಾಗಿ ಒಬ್ಬ ಕ್ಲಾಸ್ ಬ್ಯಾಟ್ಟ್​ಮನ್. ಅವರಾಡುವುದನ್ನು ನೋಡುತ್ತಲೇ ಇರಬೇಕೆನಿಸಸುತ್ತದೆ. ನಾನು ಬೆಳೆಯುವ ದಿನಗಳಲ್ಲಿ ನ್ಯೂಜಿಲೆಂಡ್​​ನಲ್ಲಿ ಮಾರ್ಟಿನ್ ಕ್ರೋವ್ ಹೆಸರಿನ ಅತ್ಯಂತ ಆಕರ್ಷಕ ಬ್ಯಾಟ್ಸ್​ಮನ್ ಇದ್ದರು. ನಮ್ಮ ದೇಶದ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಅವರೊಬ್ಬರು. ಅವರ ಮನಮೋಹಕ ಬ್ಯಾಟಿಂಗ್ ಶೈಲಿ ಕಣ್ಣಿಗೆ ಹಬ್ಬದಂತಿರುತಿತ್ತು. ಭಾರತದ ಯುವ ಬ್ಯಾಟ್ಸ್​ಮನ್ ಗಿಲ್ ಸಹ ಕ್ರೋವ್​ರಂತೆಯೇ ಅಡುತ್ತಾರೆ. ಮೈದಾನದಲ್ಲಿ ಗಿಲ್ ಆಡುವುದನ್ನು ನಾನು ಬಿಡುವಿಲ್ಲದೆ ನೋಡಬಯಸುತ್ತೇನೆ. ಮುಂಬರುವ ದಶಕದಲ್ಲಿ ಅವರು ಹೇಗೆ ತಮ್ಮ ಕರೀಯರ್ ರೂಪಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲಕಾರಿ ಸಂಗತಿಯಾಗಿದೆ,’ ಎಂದು ಮಿಲ್ಸ್ ಹೇಳಿದ್ದಾರೆ.

ಗಿಲ್ ಹೊರತಾಗಿ ಚೇತೇಶ್ವರ್ ಪೂಜಾರಾ ಅವರ ಮೇಲೂ ಮಿಲ್ಸ್ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅವರು ಆಸ್ಟ್ರೇಲಿಯಾ ಬೌಲರ್​ಗಳಿಂದ ಹಲವಾರು ಬಾರಿ ಪೆಟ್ಟು ತಿಂದರೂ ಸಿಡ್ನಿ ಮತ್ತು ಬ್ರಿಸ್ಬೇನ್​ನಲ್ಲಿ ದಿಟ್ಟತನದ ಬ್ಯಾಟಿಂಗ್ ಪ್ರದರ್ಶನ ನೀಡಿದರು ಎಂದು ಮಿಲ್ಸ್ ಹೇಳಿದ್ದಾರೆ. ‘ಅಸ್ಟ್ರೇಲಿಯಾದ ವಿರುದ್ಧ ನಡೆದ ಸರಣಿಯಲ್ಲಿ ಪೂಜಾರಾ

ಕೈಲ್ ಮಿಲ್ಸ್‘

ಉತ್ತಮವಾಗಿ ಆಡಿದರು. ಅವರ ತಿಂದ ಪೆಟ್ಟುಗಳು ವಾಸಿಯಾಗಿವೆಯೆಂದು ಭಾವಿಸತ್ತೇನೆ. ಆಸ್ಸೀ ಬೌಲರ್​ಗಳು ಶಾರ್ಟ್ ಎಸೆತಗಳಿಂದ ಅವರನ್ನು ತೊಂದರೆಗೆ ಸಿಲುಕಿಸಿದ್ದರು. ಆದರೂ ಪುಜಾರಾ ಹೆದರದೆ, ದಿಟ್ಟ ಆಟವಾಡಿದ್ದಲ್ಲದೆ, ಸುದೀರ್ಘ ಸಮಯದವರೆಗೆ ಕ್ರೀಸನ್ನು ಆಕ್ರಮಿಸಿಕೊಂಡಿದ್ದರು’ ಎಂದು ಮಿಲ್ಸ್ ಹೇಳಿದ್ದಾರೆ.

ಇಂಗ್ಲಿಷ್ ಬೌಲರ್​ಗಳಾದ ಜೇನ್ಸ್ ಅ್ಯಂಡರ್ಸನ್ ಮತ್ತು ಕ್ರಿಸ್ ಬ್ರಾಡ್ ಬಸವಳಿಯುವಂತೆ ಮಾಡುವುದು ಪೂಜಾರಾಗೆ ಮಾತ್ರ ಸಾಧ್ಯ ಎಂದು ಮಿಲ್ಸ್ ಹೇಳಿದ್ದಾರೆ.

India vs England: 2016 ರ ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ಮಿಂಚಿ ಮರೆಯಾದವರನ್ನು ನೆನೆಯುವ ಸಮಯ

Published On - 11:00 pm, Wed, 3 February 21