ವೀಸಾ ಅವಧಿ ಮುಗಿದರೂ ತವರಿಗೆ ಹಾರದ ವಿದ್ಯಾರ್ಥಿಗಳು.. ಪೊಲೀಸರ ಹದ್ದಿನ ಕಣ್ಣು
ಕೆಲ ವರ್ಷಗಳ ಹಿಂದೆ ಇಲ್ಲಿಗೆ ವ್ಯಾಸಂಗಕ್ಕೆಂದು ಒಂದು ಸಾವಿರಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳು ಬಂದಿದ್ರು. ಈಗ ವಿದೇಶಿಗರ ಸಂಖ್ಯೆ ಕಡಿಮೆ ಆಗಿದೆ. ಪೊಲೀಸ್ ದಾಖಲೆಗಳ ದಾವಣಗೆರೆಯಲ್ಲಿ ಚೀನಾ, ರಷ್ಯಾ, ಜಪಾನ್, ನೇಪಾಳ ಸೇರಿದಂತೆ ವಿವಿಧ ದೇಶಗಳ 22 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆ ವಿದ್ಯಾ ನಗರಿ ಆಗಿದೆ ಎನ್ನಲು ಇಲ್ಲಿವೆ ನೋಡಿ ಸಾಕ್ಷಿಗಳು. ಎರಡು ಮೆಡಿಕಲ್ ಕಾಲೇಜ್, ನಾಲ್ಕು ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜ್, ಎರಡು ಆರ್ಯವೇದ ಮೆಡಿಕಲ್ ಕಾಲೇಜ್, ಎರಡು ಡೆಂಟಲ್ ಕಾಲೇಜ್ ಇನ್ನು ಹತ್ತಾರು ನರ್ಸಿಂಗ್ ಕಾಲೇಜುಗಳು ಜೊತೆಗೆ ವಿಶ್ವವಿದ್ಯಾಲಯ.
ಕೆಲ ವರ್ಷಗಳ ಹಿಂದೆ ಇಲ್ಲಿಗೆ ವ್ಯಾಸಂಗಕ್ಕೆ ಅಂತಾ ಒಂದು ಸಾವಿರಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳು ಬಂದಿದ್ರು. ಆದ್ರೆ ಈಗ ವಿದೇಶಿಗರ ಸಂಖ್ಯೆ ಕಡಿಮೆ ಆಗಿದೆ. ಸಿಇಟಿ ಬಂದ ಬಳಿಕ ಮೆಡಿಕಲ್ ಸೀಟ್‌ಗಳು ಕಾಲೇಜು ಆಡಳಿತ ಮಂಡಳಿಗೆ ಕಡಿತವಾಗಿವೆ. ಪೊಲೀಸ್ ದಾಖಲೆಗಳ ಪ್ರಕಾರ ಚೀನಾ, ರಷ್ಯಾ, ಜಪಾನ್, ನೇಪಾಳ ಸೇರಿದಂತೆ ವಿವಿಧ ದೇಶಗಳ 22 ವಿದ್ಯಾರ್ಥಿಗಳು ಓದುತ್ತಿದ್ದಾರೆ.
ವಿಸಾ ಅವಧಿ ಮುಗಿದರೂ ಇಲ್ಲಿಯೇ ಸುತ್ತಾಟ ಇವರಲ್ಲಿ ಕೆಲವರ ವಿಸಾ ಅವಧಿ ಮುಕ್ತಾಯವಾಗಿದೆ. ಓದು ಸಹ ಮುಕ್ತಾಯವಾಗಿದೆ. ಆದ್ರೆ ಇಲ್ಲಿಯೇ ಸುತ್ತಾಡುತ್ತಿದ್ದಾರೆ. ಇಂತಹ ವಿಚಾರ ವಿದೇಶಾಂಗ ಇಲಾಖೆಯ ಗಮನಕ್ಕೂ ಬಂದಿದೆ. ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಓರ್ವನ ಮೇಲೆ ಕೇಸ್ ಹಾಕಿದ್ದಾರೆ. ಆದ್ರೂ ವಿಸಾ ಅವಧಿ ಮುಗಿದಿದ್ರೂ ಸುತ್ತುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.
ಹೀಗೆ ವ್ಯಾಸಂಗಕ್ಕೆ ಅಂತ ವಿದೇಶಗಳಿಂದ ಬಂದು ದಾವಣಗೆರೆಯಲ್ಲಿ ಸುತ್ತುತ್ತಿರುವ ವ್ಯಕ್ತಿಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ಕಲೆ ಹಾಕಿದೆ. ಯಾಕಂದ್ರೆ 2007 ಮತ್ತು 2008ರಲ್ಲಿ ದಾವಣಗೆರೆಯ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಓದಿದ್ದ ವಿದ್ಯಾರ್ಥಿಯೊಬ್ಬ ಆಸ್ಟ್ರೇಲಿಯಾದ ಏರ್ ಪೋರ್ಟ್‌ನಲ್ಲಿ ದುಷ್ಕೃತ್ಯ ಎಸಗಿದ್ದ. ಹಾಗಾಗಿ ಇಲ್ಲಿರುವ ವಿದೇಶಿಗರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ದಾವಣಗೆರೆ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡ್ತಿರುವ ವಿದ್ಯಾರ್ಥಿಗಳ ಮೇಲೆ ನಿಗಾವಹಿಸಿದ್ದಾರೆ. ಅವರ ವಿಳಾಸ. ಹಾಜರಾತಿ, ಹಿನ್ನೆಲೆಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಆದ್ರೂ ವೀಸಾ ಮುಗಿದಿದ್ರೂ ಇಲ್ಲಿಯೇ ಓಡಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.




