Good News: ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ, ಎಲ್ಲಿ?
ಹಾವೇರಿ: ಸೋಂಕಿತರು ಅಂದರೆ ಸಾಕು ಜನರು ದೃಷ್ಟಿಕೋನವೇ ಬದಲಾಗುತ್ತದೆ. ಆದರೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಜೀವದ ಹಂಗು ತೊರೆದು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅದರಲ್ಲೂ ಇಬ್ಬರು ಸೋಂಕಿತ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸುವ ಮೂಲಕ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜಿಲ್ಲೆಯ ಬಂಕಾಪುರ ಪಟ್ಟಣದ 21 ವರ್ಷದ ಮತ್ತು ಸವಣೂರು ಪಟ್ಟಣದ 25 ವರ್ಷದ ಗರ್ಭಿಣಿಯರಿಗೆ ಜುಲೈ 29ರಂದು ಸೋಂಕು ದೃಢಪಟ್ಟಿತ್ತು. ಹೀಗಾಗಿ, ಗರ್ಭಿಣಿಯರನ್ನು ಕೊವಿಡ್19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರು ಗರ್ಭಿಣಿಯರಿಗೆ ಇಂದು […]

ಹಾವೇರಿ: ಸೋಂಕಿತರು ಅಂದರೆ ಸಾಕು ಜನರು ದೃಷ್ಟಿಕೋನವೇ ಬದಲಾಗುತ್ತದೆ. ಆದರೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಜೀವದ ಹಂಗು ತೊರೆದು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅದರಲ್ಲೂ ಇಬ್ಬರು ಸೋಂಕಿತ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸುವ ಮೂಲಕ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜಿಲ್ಲೆಯ ಬಂಕಾಪುರ ಪಟ್ಟಣದ 21 ವರ್ಷದ ಮತ್ತು ಸವಣೂರು ಪಟ್ಟಣದ 25 ವರ್ಷದ ಗರ್ಭಿಣಿಯರಿಗೆ ಜುಲೈ 29ರಂದು ಸೋಂಕು ದೃಢಪಟ್ಟಿತ್ತು. ಹೀಗಾಗಿ, ಗರ್ಭಿಣಿಯರನ್ನು ಕೊವಿಡ್19 ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಬ್ಬರು ಗರ್ಭಿಣಿಯರಿಗೆ ಇಂದು ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನಂತರ ಇಬ್ಬರನ್ನು ಆಸ್ಪತ್ರೆಯಲ್ಲಿ ಆರಂಭಿಸಿರುವ ಪ್ರತ್ಯೇಕ ಹೆರಿಗೆ ವಾರ್ಡ್ಗೆ ದಾಖಲಿಸಲಾಯಿತ್ತು. ಬೆಳಿಗ್ಗೆ 10.20ಕ್ಕೆ ಓರ್ವ ಗರ್ಭಿಣಿಗೆ ಹೆರಿಗೆಯಾಗಿದ್ದು, ಮತ್ತೊಬ್ಬರಿಗೆ 12.10ಕ್ಕೆ ಹೆರಿಗೆ ಆಗಿದೆ.

ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ಶ್ರಮದಿಂದ ಇಬ್ಬರಿಗೂ ನಾರ್ಮಲ್ ಹೆರಿಗೆ ಮಾಡಿಸಲಾಗಿದೆ. ಒಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮತ್ತೊಬ್ಬರು ಗಂಡು ಮಗು ಹೆತ್ತಿದ್ದಾರೆ. ಬಾಣಂತಿಯರು ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ.
ಸೋಂಕಿತೆಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿರುವ ವೈದ್ಯಕೀಯ ಸಿಬ್ಬಂದಿಗೆ ಕುಟುಂಬದವರು ಹಾಗೂ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಭುಗೌಡ.ಎನ್.ಪಾಟೀಲ
Published On - 7:19 pm, Sun, 2 August 20




