ಆ ಎರಡು ಇಲಾಖೆಗಳ ಸಮನ್ವಯ ಕೊರತೆ, ಸಾವಿರಾರು ಮರ ಮಾರಣಹೋಮ

ಬೀದರ್​: ಆ ಎರಡು ಇಲಾಖೆಯ ಹೊಂದಾಣಿಕೆಯ ಕೊರತೆಯಿಂದ ಮರಗಳಿಗೆ ಕೊಡಲಿ ಏಟು ಬೀಳುತ್ತಿದೆ. ಗಿಡ ಮರಗಳನ್ನು ಮಕ್ಕಳಂತೆ ಬೆಳೆಸಿ, ಪೋಷಿಸಿದ ಅರಣ್ಯ ಇಲಾಖೆಗೆ ಮರಗಳು ಬೆಳೆದು ದೊಡ್ಡದಾಗುತ್ತಿದಂತೆ ಮರಗಳ ಕತ್ತು ಕತ್ತರಿಸಲಾಗುತ್ತಿದೆ. ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಖುರ್ಚ ಮಾಡಿ ಬೆಳೆಸಿದ ಗಿಡಗಳನ್ನ ಜೆಸ್ಕಾಂನವರು ಕಡಿದು ಹಾಕುತ್ತಿದ್ದಾರೆ. ಇದು ಪರಿಸರ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಹೌದು, ಬೀದರ್​ನಲ್ಲಿ ಅರಣ್ಯ ಇಲಾಖೆ ಹಾಗೂ ಜೆಸ್ಕಾಂ ಇಲಾಖೆ ಅಧಿಕಾರಿಗಳ ನಡುವಿನ ಸಂಹವನ ಕೊರೆತೆಯಿಂದ ಪ್ರತಿ ವರ್ಷ ಸಾವಿರಾರು ಮರಗಳಿಗೆ ಕೊಡಲಿ […]

ಆ ಎರಡು ಇಲಾಖೆಗಳ ಸಮನ್ವಯ ಕೊರತೆ, ಸಾವಿರಾರು ಮರ ಮಾರಣಹೋಮ
Follow us
ಸಾಧು ಶ್ರೀನಾಥ್​
|

Updated on: Jun 30, 2020 | 2:38 PM

ಬೀದರ್​: ಆ ಎರಡು ಇಲಾಖೆಯ ಹೊಂದಾಣಿಕೆಯ ಕೊರತೆಯಿಂದ ಮರಗಳಿಗೆ ಕೊಡಲಿ ಏಟು ಬೀಳುತ್ತಿದೆ. ಗಿಡ ಮರಗಳನ್ನು ಮಕ್ಕಳಂತೆ ಬೆಳೆಸಿ, ಪೋಷಿಸಿದ ಅರಣ್ಯ ಇಲಾಖೆಗೆ ಮರಗಳು ಬೆಳೆದು ದೊಡ್ಡದಾಗುತ್ತಿದಂತೆ ಮರಗಳ ಕತ್ತು ಕತ್ತರಿಸಲಾಗುತ್ತಿದೆ. ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಖುರ್ಚ ಮಾಡಿ ಬೆಳೆಸಿದ ಗಿಡಗಳನ್ನ ಜೆಸ್ಕಾಂನವರು ಕಡಿದು ಹಾಕುತ್ತಿದ್ದಾರೆ. ಇದು ಪರಿಸರ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗುತ್ತಿದೆ.

ಹೌದು, ಬೀದರ್​ನಲ್ಲಿ ಅರಣ್ಯ ಇಲಾಖೆ ಹಾಗೂ ಜೆಸ್ಕಾಂ ಇಲಾಖೆ ಅಧಿಕಾರಿಗಳ ನಡುವಿನ ಸಂಹವನ ಕೊರೆತೆಯಿಂದ ಪ್ರತಿ ವರ್ಷ ಸಾವಿರಾರು ಮರಗಳಿಗೆ ಕೊಡಲಿ ಏಟು ಬೀಳುತ್ತಿದೆ. ರಸ್ತೆ ಬದಿಯಲ್ಲಿರುವ ಮರಗಳನ್ನು ಜೆಸ್ಕಾಂ ಸಿಬ್ಬಂದಿ ನಿರ್ದಾಕ್ಷಣ್ಯವಾಗಿ ಮರಗಳನ್ನ ಕತ್ತರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಸುಮಾರು ವರ್ಷಗಳಿಂದ ಅರಣ್ಯ ಇಲಾಖೆಯವರು ಬೆಳಸಿದ್ದ ಮರಗಳನ್ನು ವಿದ್ಯುತ್ ತಂತಿಗೆ ತಗಲುತ್ತವೆ ಎನ್ನುವ ಒಂದೇ ಕಾರಣಕ್ಕೆ ಕಡಿದು ಹಾಕುತ್ತಿದ್ದಾರೆ.

ಮರಗಳಿಗೆ ಕೊಡಲಿ ಪೆಟ್ಟು: ಜಿಲ್ಲೆಯಲ್ಲಿ ಪ್ರತಿ ವರ್ಷವೂ ರಸ್ತೆಯ ಎರಡೂ ಬದಿಯಲ್ಲಿ ಗಿಡಗಳನ್ನ ಬೆಳೆಸಲಾಗುತ್ತಿದೆ. ಆದರೆ ಇಲ್ಲಿ ನೆಟ್ಟ ಸಿಸಿ ಗಿಡವಾಗಿ ಬೆಳೆಯುತ್ತಿದಂತೆ ಅವುಗಳು ವಿದ್ಯುತ್ ತಂತಿಗೆ ತಗಲುತ್ತವೆ ಎಂದು ಮರದ ತಲೆ ಹಾಗೂ ಅದರ ರೆಂಬೆ ಕೊಂಬೆಗಳನ್ನ ಕತ್ತರಿಸಲಾಗುತ್ತಿದೆ. ಇನ್ನೂಂದೆಡೆ ಬಡವರು ಮನೆ ಬಳಕೆಗೆ ಸಣ್ಣ ಗಿಡ ಕಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ದೂರು ದಾಖಲಿಸುತ್ತಾರೆ. ಇತ್ತೀಚೆಗೆ ಭೂರಹಿತ ರೈತರು ಉಳುಮೆ ಮಾಡಿದ್ದ ಜಾಗದಲ್ಲಿ ಬೆಳೆದ ಸಸಿಗಳನ್ನು ರೈತರೇ ಕತ್ತರಿಸುತ್ತಿದ್ದಾರೆಂದು ಸಾಕಷ್ಟು ಜನರ ಮೇಲೆ ಅರಣ್ಯ ಕಾಯಿದೆಯಡಿ ಅರಣ್ಯ ಇಲಾಖೆ ಸಿಬ್ಬಂದಿಯೇ ಮೊಕದ್ದಮೆ ದಾಖಲಿಸಿಕೊಂಡ ಪ್ರಕರಣವೂ ಜಿಲ್ಲೆಯಲ್ಲಿ ಸಾಕಷ್ಟಿವೆ.

ಆದರೆ ಜೆಸ್ಕಾಂ ಇಲಾಖೆಯ ಅಧಿಕಾರಿಗಳ ಮೇಲೆ ಏಕೆ ಅರಣ್ಯ ಇಲಾಖೆ ಅಧಿಕಾರಿಗಳು ದೂರು ದಾಖಲಿಸುತ್ತಿಲ್ಲ ಎಂಬ ಪ್ರಶ್ನೆ ಪರಿಸರ ವಾದಿಗಳನ್ನ ಕಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಾ ಎಲ್ಲಿ ಜೆಸ್ಕಾಂನಿಂದ ವಿದ್ಯುತ್ ತಂತಿ ಹಾದು ಹೋಗಿದೆಯೋ ಅದೇ ತಂತಿಯ ಕೆಳಗಡೆ ಸಸಿಗಳನ್ನ ನೆಡುತ್ತಾರೆ. ಅದು ದೊಡ್ಡದಾದಾಗ ಜೆಸ್ಕಾಂನವರು ಅದನ್ನ ಕಡೆದು ಹಾಕುತ್ತಾರೆ.  ಕೆಲವೊಂದು ಸಲ ಅರಣ್ಯ ಇಲಾಖೆ ಅಧಿಕಾರಿಗಳು ನೆಟ್ಟಿರುವ ಗಿಡದ ಮೇಲೆಯೇ ಜೆಸ್ಕಾಂನವರು ವಿದ್ಯುತ್ ತಂತಿ ಹಾಕುತ್ತಾರೆ. ನಂತರ ವಿದ್ಯುತ್ ತಂತಿಗೆ ಮರ ತಾಗುತ್ತಿದೆ ಎಂದು ಆ ಮರವನ್ನ ಕಡಿದು ಹಾಕುತ್ತಾರೆ.

ಎರಡು ಇಲಾಖೆಯ ಸಮನ್ವಯದ ಕೊರತೆಯಿಂದ ಬೆಳೆದು ನಿಂತ ಗಿಡಗಳನ್ನ ಕಡಿದು ಅರಣ್ಯ ನಾಶಕ್ಕೆ ಮುಂದಾಗುತ್ತಿದ್ದಾರೆ. ಇಂಥವರಿಗೆ ತಕ್ಕ ಶಿಕ್ಷೆಯಾಗಬೇಕು, ಮುಂದೆ ಇಂತಹ ಘಟನೆಗಳನ್ನ ಮರುಕಳಿಸದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚರ ವಹಿಸಬೇಕಾಗಿದೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್