World Environment Day 2022: ವೇಮಗಲ್ ಚೆಲ್ಲಕುಟ್ಟಪ್ಪನಿಗೊಂದು ಹಸಿರು ಸಲಾಂ!

Memory : ಸತ್ತವರ ಸಮಾಧಿಯನ್ನು ತರಹೇವಾರಿ ಗ್ರಾನೈಟ್ ಕಲ್ಲಿನಲ್ಲಿ ವಿನ್ಯಾಸಗೊಳಿಸಿ ನಿರ್ಮಿಸುವ ಹಣವಂತರ ಸಂಖ್ಯೆ ಜಾಸ್ತಿಯಾಗುತ್ತಿರುವ ಈ ಕಾಲದಲ್ಲಿ, 80ರ ಚೆಲ್ಲಕುಟ್ಟಪ್ಪ ಪರಿಸರಪ್ರೇಮಕ್ಕೆ ಬಿದ್ದು 55 ವರ್ಷಗಳಿಂದ ಮಾಡುತ್ತಿರುವ ಈ ಕೆಲಸ ಹೇಗೆ ವಿಭಿನ್ನ? ಓದಿ.

World Environment Day 2022: ವೇಮಗಲ್ ಚೆಲ್ಲಕುಟ್ಟಪ್ಪನಿಗೊಂದು ಹಸಿರು ಸಲಾಂ!
ವೇಮಗಲ್ ಚೆಲ್ಲಗುಟ್ಟಪ್ಪ
Follow us
| Updated By: ಶ್ರೀದೇವಿ ಕಳಸದ

Updated on:Jun 05, 2022 | 12:34 PM

World Environment Day 2022: ದಿನೇದಿನೆ ಹಸಿರು ಕ್ಷೀಣಿಸುತ್ತಿರುವ ಈ ನೆಲದಲ್ಲಿ ಸ್ಫೂರ್ತಿ ಚೇತನಗಳ ಸಂಖ್ಯೆ ವಿರಳವೂ ಹೌದು. ಒಂದಾನೊಂದು ಕಾಲದಲ್ಲಿ ಸಾವಿರಾರು ಕೆರೆ ಮತ್ತು ಸಿರಿಧಾನ್ಯಗಳಿಗೆ ಹೆಸರಾಗಿದ್ದ ಕೋಲಾರ ಜಿಲ್ಲೆಯ ವೇಮಗಲ್ ಗ್ರಾಮದ 80 ವರ್ಷ ಪ್ರಾಯದ ಚೆಲ್ಲಕುಟ್ಟಪ್ಪ ತನ್ನದೇ ಆದ ಹಸಿರು ಹೆಜ್ಜೆಗಳನ್ನು ಮೂಡಿಸುತ್ತ ಬಂದಿದ್ದಾರೆ. ಸತ್ತವರ ಸಮಾಧಿಯನ್ನು ತರಹೇವಾರಿ ಗ್ರಾನೈಟ್ ಕಲ್ಲಿನಲ್ಲಿ ವಿನ್ಯಾಸಗೊಳಿಸಿ ನಿರ್ಮಿಸುವ ಹಣವಂತರ ಸಂಖ್ಯೆ ಜಾಸ್ತಿಯಾಗುತ್ತಿರುವ ಈ ಕಾಲದಲ್ಲಿ, ತನ್ನವರು ಸತ್ತಾಗ ಅವರಿಗೂ ನೆರಳು ಸಿಗಲಿ. ಅಲ್ಲಿ ನೆಟ್ಟ ಗಿಡ ಇತರರಿಗೂ ನೆರಳನ್ನು ಕೊಡಲಿ ಎಂಬ ಆಶಯದೊಂದಿಗೆ ಅವರ ಸಮಾಧಿಯ ಬಳಿ ಅತ್ತಿ, ಆಲ, ಅರಳಿ ಮರಳಗಳನ್ನು ನೆಟ್ಟು ಪೋಷಿಸಿ ಆ ಮರಗಳಲ್ಲಿ ತನ್ನವರ ನೆನಪುಗಳನ್ನು ಮೆಲಕು ಹಾಕುವುದು ಒಂದು ಸೂಕ್ಷ್ಮ ಪ್ರಜ್ಞೆ ಮತ್ತು ಪರಿಸರ ಪ್ರೇಮ. ಡೇವಿಡ್ ಕುಮಾರ್. ಎ (David Kumar A)

ಚೆಲ್ಲಕುಟ್ಟಪ್ಪ ತನ್ನ ತಂದೆ, ತಾಯಿ ಮತ್ತು ಇತರ ಸದಸ್ಯರು ಕಾಲವಾದಾಗ ಅವರ ಸವಿನೆನಪಿಗಾಗಿ ಸುಮಾರು 55 ವರ್ಷಗಳಿಂದಲೂ ಮರಗಳನ್ನು ನೆಡುತ್ತಾ ಬಂದಿದ್ದಾರೆ. ಅವರು ನೆಟ್ಟ ಮರಗಳು ಇಂದು ಹೆಮ್ಮರಗಳಾಗಿ, ಹಸಿರುಮಯವಾಗಿ ಕೇವಲ ಸತ್ತವರ ಸಮಾಧಿಗೆ ಮಾತ್ರ ನೆರಳನ್ನು ನೀಡದೆ ಪಕ್ಷಿಗಳಿಗೆ ಆಹಾರ, ಗೂಡು ಕಟ್ಟಿ ಮರಿಮಾಡಲು ಆಶ್ರಯ, ದಣಿವಾದವರಿಗೆ ನೆರಳು ಹೀಗೆ ನಾನಾ ಬಗೆಯಲ್ಲಿ ಅನುಕೂಲಕರವಾಗಿವೆ. ವೇಮಗಲ್ ಬಳಿಯ ಚೆನ್ನಪ್ಪನ ಕೆರೆ ಅಂಗಳದ ಮೂಲೆಯಲ್ಲಿ 10ಕ್ಕೂ ಹೆಚ್ಚು ಅತ್ತಿ ಮತ್ತು ಅರಳಿ ಮರಗಳು ಕಂಗೊಳಿಸುವುದನ್ನು ನಾವು ನೋಡಬಹುದು. ಈ ಮರಗಳ ಕೆಳಗೆ ವೀರಗಲ್ಲುಗಳನ್ನೂ ಕಾಣಬಹುದಾಗಿದೆ. ಶತಮಾನಗಳ ಹಿಂದೆ ಊರು, ಪ್ರಾಂತ್ಯದ ರಕ್ಷಣೆಗೆ ಹೋರಾಡಿ ಮಡಿದವರ ಬಗ್ಗೆ ಅಲ್ಲಿ ವಿವರಗಳನ್ನು ಕಾಣಬಹುದು.

ಇದನ್ನೂ ಓದಿ : ಶರಣು ಮಣ್ಣಿಗೆ : ಮನುಷ್ಯರು ಮೋಸ ಮಾಡಬಹುದು ಮಣ್ಣು ಎಂದಿಗೂ ವಂಚಿಸಲಾರದು

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

‘ಈ ಕೆಲಸದಲ್ಲಿ ತೊಡಗಿಕೊಳ್ಳುವುದರಲ್ಲಿ ನನಗಂತೂ ನೆಮ್ಮದಿ ಇದೆ. ಮನುಷ್ಯ ಸ್ವಾರ್ಥದ ಹಪಾಹಪಿಗೆ ಬಿದ್ದಿದ್ದಾನೆ. ಆದರೆ ಏನೇ ಆದರೂ ಉಸಿರು ಕೊಡುವುದು ಮರಗಳೇ ಅಲ್ಲವೆ? ಜೀವ ಇರುವ ತನಕ ಗಿಡ ನೆಡುತ್ತಲೇ ಇರುತ್ತೇನೆ. ಸ್ಥಳ ಕೊಟ್ಟರೆ ಇನ್ನೂ ಜಾಸ್ತಿ ಗಿಡಗಳನ್ನು ನೆಡುತ್ತೇನೆ’ ಎನ್ನುವ 80ರ ಚೆಲ್ಲಕುಟ್ಟಪ್ಪನೊಳಗೆ ಓರ್ವ ಪರಿಸರ ಪ್ರೇಮಿ ಇನ್ನೂ ಜಾಗೃತನಾಗಿದ್ದಾನೆ. ಮೊನ್ನೆಯಷ್ಟೇ ಛತ್ರಿ ಮಾತ್ರದ ಗಿಡವನ್ನು ನೆಟ್ಟು ಅದನ್ನು ಮೇಕೆ, ದನಗಳು ತಿನ್ನದಂತೆ, ಗಿಡದ ಸುತ್ತ ಬಿದಿರು ಕಡ್ಡಿಗಳನ್ನು ನೆಟ್ಟು ಅದರ ಬೆಳವಣಿಗೆಯನ್ನು ಪ್ರತಿ ದಿನ ಬಂದು ನೋಡುವಷ್ಟು, ಗಿಡದೊಂದಿಗೆ ಮಾತನಾಡುವಷ್ಟು ಪ್ರೀತಿಯನ್ನು ಇನ್ನೂ ಉಳಿಸಿಕೊಂಡಿದ್ದಾರೆ.  ಆಗಲಿ ಹೋದ ತನ್ನವರ ಆತ್ಮವನ್ನು ಗಿಡದ ಚಿಗುರಿನಲ್ಲಿ ಕಾಣಬಯಸುತ್ತಾರೆ.

‘ಮರ ಬೆಳೆಸಿದವನು ಎಂದಿಗೂ ಸಾಯಲಾರ ‘ – ‘ A gardener never dies’

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 12:26 pm, Sun, 5 June 22

ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್