AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ಮರುಚಿಂತನೆಗೆ ಅವಕಾಶ ನೀಡಲಿದೆ ಯೂಟ್ಯೂಬ್

ಯುಟ್ಯೂಬ್ ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ನಿಮ್ಮ ಕಾಮೆಂಟ್ ಅಸಭ್ಯವಾಗಿಲ್ಲ ಎಂದು ಖಾತರಿ ಪಡಿಸಿದ ನಂತರವೇ ಮಂದುವರಿಯಿರಿ ಎಂಬ ಸಂದೇಶ ಇನ್ನು ಮುಂದೆ ಕಾಣಿಸಿಕೊಳ್ಳಲಿದೆ.

ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ಮರುಚಿಂತನೆಗೆ ಅವಕಾಶ ನೀಡಲಿದೆ ಯೂಟ್ಯೂಬ್
ಪ್ರಾತಿನಿಧಿಕ ಚಿತ್ರ
Ghanashyam D M | ಡಿ.ಎಂ.ಘನಶ್ಯಾಮ
|

Updated on: Dec 04, 2020 | 7:21 PM

Share

ವಾಷಿಂಗ್ಟನ್: ಯುಟ್ಯೂಬ್ ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ನಿಮ್ಮ ಕಾಮೆಂಟ್ ಅಸಭ್ಯವಾಗಿಲ್ಲ ಎಂದು ಖಾತರಿ ಪಡಿಸಿದ ನಂತರವೇ ಮಂದುವರಿಯಿರಿ ಎಂಬ ಸಂದೇಶ ಇನ್ನು ಮುಂದೆ ಕಾಣಿಸಿಕೊಳ್ಳಲಿದೆ.

ಯುಟ್ಯೂಬ್ ಸಂಸ್ಥೆಯ ಸಮುದಾಯ ಮಾರ್ಗಸೂಚಿ ಪ್ರಕಾರ ಕಾಮೆಂಟ್ ಪೋಸ್ಟಿಸುವ ಮುನ್ನ ಅದು ಯಾವುದೇ ರೀತಿಯಲ್ಲಿ ಅಸಭ್ಯವಾಗಿಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಕಾಮೆಂಟ್ ಅಸಭ್ಯವಾಗಿದೆಯೇ ಎಂಬುದನ್ನು ಗೂಗಲ್​ನ ಕೃತಕ ಬುದ್ಧಿಮತ್ತೆ (ಎಐ) ಪತ್ತೆ ಹಚ್ಚುತ್ತದೆ. ಹೀಗೆ ಪತ್ತೆ ಹಚ್ಚಿದ ನಂತರ ಕಾಮೆಂಟ್ ಎಡಿಟ್ ಮಾಡಲು ಅವಕಾಶ ನೀಡಲಾಗುವುದು.

ಯುಟ್ಯೂಬ್​​ನಲ್ಲಿ ಗೌರವಯುತ ವಿಚಾರ ವಿನಿಮಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಳಕೆದಾರರು ಕಾಮೆಂಟ್ ಮಾಡುವಾಗ ಅವರ ಕಾಮೆಂಟ್ ಇತರರನ್ನು ರೇಗಿಸುವಂತಿರಬಾರದು. ಹಾಗಾಗಿ ಪೋಸ್ಟ್‌ ಮಾಡುವ ಮುನ್ನ ಅದು ಹೇಗಿದೆ ಎಂಬುದನ್ನು ತೋರಿಸಿ ಎಚ್ಚರಿಕೆ ಸಂದೇಶ ನೀಡುವ ಹೊಸ ಫೀಚರ್ ಆರಂಭಿಸುವುದಾಗಿ ಯುಟ್ಯೂಬ್ ತಮ್ಮ ಬ್ಲಾಗ್​ಪೋಸ್ಟ್​ನಲ್ಲಿ ಹೇಳಿದೆ.

ಈ ಫೀಚರ್ ಈಗ ಅಂಡ್ರಾಯ್ಡ್​ನಲ್ಲಿ ಲಭ್ಯವಾಗಿದೆ. ಕಾಮೆಂಟ್ ಅಸಭ್ಯವಾಗಿದ್ದರೆ ಯುಟ್ಯೂಬ್ ಅದನ್ನು ತೆಗೆದುಹಾಕಲಿದೆ. ಒಂದು ವೇಳೆ ಅಸಭ್ಯ ಕಾಮೆಂಟ್ ಎಂಬ ಎಚ್ಚರಿಕೆ ಬಂದರೂ ಬಳಕೆದಾರರು ಆ ಕಾಮೆಂಟ್ ಪೋಸ್ಟಿಸಿದ್ದರೆ ಅದನ್ನು ಯುಟ್ಯೂಬ್ ತೆಗೆದುಹಾಕಲೇ ಬೇಕೆಂದೇನಿಲ್ಲ. ಆದರೆ ಅಸಭ್ಯ ಪೋಸ್ಟ್ ಎಂದು ಇತರ ಬಳಕೆದಾರರು ರಿಪೋರ್ಟ್ ಮಾಡಿದ್ದರೆ ಯುಟ್ಯೂಬ್ ಅದನ್ನು ಅಸಭ್ಯ ಎಂದು ಗುರುತಿಸುತ್ತದೆ.

ತಪ್ಪು ಮಾಹಿತಿ, ಸಂಚು, ತಾರತಮ್ಯ, ಕಿರುಕುಳ, ಸಾಮೂಹಿಕ ಹತ್ಯೆ, ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಮೊದಲಾದ ವಿಷಯಗಳಿರುವ ವಿಡಿಯೊಗಳಿಗೆ ಕಡಿವಾಣ ಹಾಕಲು ಯುಟ್ಯೂಬ್ ಕ್ರಮ ಕೈಗೊಂಡಿದ್ದರೂ ಅಲ್ಲಿನ ಕಾಮೆಂಟ್ ಮಾತ್ರ ಸಭ್ಯತೆಯ ಎಲ್ಲೆ ಮೀರುತ್ತಿದ್ದವು.

ತಿಂಗಳಿಗೆ 200 ಕೋಟಿ ಬಳಕೆದಾರರು ಯೂಟ್ಯೂಬ್ ಬಳಸುತ್ತಿದ್ದು ಪ್ರತಿ ನಿಮಿಷಕ್ಕೆ 500 ಗಂಟೆಗಿಂತಲೂ ಹೆಚ್ಚು ಅವಧಿಯ ವಿಡಿಯೊಗಳು ಇಲ್ಲಿ ಅಪ್​ಲೋಡ್ ಆಗುತ್ತವೆ.

Follow Us
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ