ಈ ಕಂಪನಿಗೆ ಸೇರಿದ್ರೆ ಮಧ್ಯಾಹ್ನ ಮಲಗುವುದಕ್ಕೂ ಟೈಂ ಕೊಡ್ತಾರೆ!

ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಪ್ರಪಂಚದಾದ್ಯಂತದ ಕಂಪನಿಗಳ ನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಇದೀಗ ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳ ಅನುಕೂಲ ಹಾಗೂ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿವೆ.

ಈ ಕಂಪನಿಗೆ ಸೇರಿದ್ರೆ ಮಧ್ಯಾಹ್ನ ಮಲಗುವುದಕ್ಕೂ ಟೈಂ ಕೊಡ್ತಾರೆ!
ಕಚೇರಿಯಲ್ಲಿ ಸಣ್ಣ ನಿದ್ರೆ
Follow us
TV9 Web
| Updated By: ನಯನಾ ರಾಜೀವ್

Updated on: May 07, 2022 | 6:43 PM

ಕೊರೊನಾ( Corona)ಸಾಂಕ್ರಾಮಿಕ ಶುರುವಾದಾಗಿನಿಂದ ಪ್ರಪಂಚದಾದ್ಯಂತದ ಕಂಪನಿಗಳ ನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಇದೀಗ ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳ ಅನುಕೂಲ ಹಾಗೂ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿವೆ. ವಿಶಿಷ್ಟ ಉಪಕ್ರಮವನ್ನು ಕೈಗೊಳ್ಳುವ ಮೂಲಕ, ಬೆಂಗಳೂರು ಮೂಲದ ಭಾರತೀಯ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ನಿತ್ಯ ಕೆಲಸದ ಸಮಯದಲ್ಲಿ ಸ್ವಲ್ಪ ನಿದ್ರೆ (Sleep)ಮಾಡಲು ಅವಕಾಶ ನೀಡುವುದಾಗಿ ತಿಳಿಸಿದೆ.

ಈ ಸಮಯದಲ್ಲಿ ಯಾವುದೇ ಉದ್ಯೋಗಿಯ ಸಂಬಳವನ್ನು ಕಡಿತಗೊಳಿಸಲಾಗುವುದಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಹೇಳಿದ್ದಾರೆ. ನೌಕರರು ಕರ್ತವ್ಯದ ಸಮಯದಲ್ಲಿ ಅರ್ಧ ಗಂಟೆ ನಿದ್ರಿಸಲು ಅವಕಾಶ ಮಾಡಿಕೊಡುತ್ತಿದೆ. ಉದ್ಯೋಗಿಗಳ ಹಿತದೃಷ್ಟಿಯಿಂದ ಈ ಮಹತ್ತರವಾದ ಕ್ರಮವನ್ನು ಕೈಗೊಂಡ ಕಂಪನಿಯ ಹೆಸರು ವೇಕ್‌ಫಿಟ್ ಸಲ್ಯೂಶನ್ಸ್.

ಬೆಂಗಳೂರಿನಲ್ಲಿರುವ ಈ ಭಾರತೀಯ ಸ್ಟಾರ್ಟ್ ಅಪ್ ಕಂಪನಿಯು ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ನಿತ್ಯ ಕೆಲಸದ ಅವಧಿಯಲ್ಲಿ 30 ನಿಮಿಷಗಳ ಕಾಲ ಅಂದರೆ ದೈನಂದಿನ ಕರ್ತವ್ಯದ ಸಮಯದಲ್ಲಿ ಅರ್ಧ ಗಂಟೆ ಮಲಗಲು ಸಾಧ್ಯವಾಗುತ್ತದೆ ಎಂದು ಹೇಳಿದೆ. ಈಗ ಉದ್ಯೋಗಿಗಳು ಪ್ರತಿದಿನ ಮಧ್ಯಾಹ್ನ 2 ರಿಂದ 2.30 ರ ನಡುವೆ ಅರ್ಧ ಗಂಟೆ ನಿದ್ದೆ ಮಾಡಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ. ಕಚೇರಿಯಲ್ಲಿ ನೌಕರರು ತಾತ್ಕಾಲಿಕವಾಗಿ ಮಲಗಲು ವ್ಯವಸ್ಥೆ ಕೂಡ ಮಾಡಲಾಗಿದೆ.

ಈ ನಿರ್ಧಾರದಿಂದ ತನ್ನ ಉದ್ಯೋಗಿಗಳು ಫಿಟ್ ಆಗುತ್ತಾರೆ ಮತ್ತು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂಬುದು ಕಂಪನಿಯ ನಂಬಿಕೆಯಾಗಿದೆ. ಈ ಸಂಬಂಧ ಟೈಮ್ ಟೇಬಲ್ ಅನ್ನು ಸಹ ಬಿಡುಗಡೆ ಮಾಡಿರುವ ಕಂಪನಿ ಈ ಕಂಪನಿಯು ನಿದ್ರೆಯ ಪರಿಹಾರಗಳನ್ನು ಅಂದರೆ ಸ್ಲೀಪ್ ಸಲ್ಯೂಶನ್ ಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತದೆ ಎಂದು ತಿಳಿದುಬಂದಿದೆ.

ಕಂಪನಿಯ ನಿರ್ಧಾರಕ್ಕೆ ಉದ್ಯೋಗಿಗಳು ಖುಷ್ ಕಂಪನಿಯ ಸಹ ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಈ ಕುರಿತು ಎಲ್ಲಾ ಸಿಬ್ಬಂದಿಗೂ ಇ-ಮೇಲ್ ಮಾಡಿ ಮಾಹಿತಿ ನೀಡಿದ್ದಾರೆ. ನಾಸಾ ಹೊವರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನವು ಮಧ್ಯಾಹ್ನ ಪ್ರತಿದಿನ ಅರ್ಧ ಗಂಟೆ ನಿದ್ದೆಮಾಡುವುದರಿಂದ ವ್ಯಕ್ತಿಯನ್ನು ಫ್ರೆಶ್ ಆಗಿರಿಸುತ್ತದೆ ಮತ್ತು ಅವರ ಕೆಲಸದ ಕಾರ್ಯಕ್ಷಮತೆಯು ಶೇ. 33 ರಷ್ಟು ಸುಧಾರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ