AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಹೆಂಡತಿಯಾದವಳು ಗಂಡನ ಮುಂದೆ ಎಂದಿಗೂ ಈ ಕೆಲಸಗಳನ್ನು ಮಾಡಬಾರದು ಎನ್ನುತ್ತಾರೆ ಚಾಣಕ್ಯ

ಮದುವೆಯನ್ನು ಸ್ವರ್ಗದಲ್ಲಿಯೇ ನಿಶ್ಚಯ ಮಾಡಿರುತ್ತಾರೆ ದೇವರು ಎಂಬ ಮಾತನ್ನು ಕೇಳಿರುತ್ತೀರಿ ಅಲ್ವಾ. ಆದರೆ ಮದುವೆಯ ನಂತರ ಸಂಸಾರದ ಅಳಿವು ಉಳಿವು ಸಂಪೂರ್ಣವಾಗಿ ಗಂಡ ಹೆಂಡತಿಯ ನಡುವಿನ ಪ್ರೀತಿ, ನಂಬಿಕೆಯ ಮೇಲೆ ನಿಂತಿರುತ್ತದೆ. ಅಲ್ಲದೆ ಸಂಸಾರದಲ್ಲಿ ಮನಸ್ತಾಪ, ಜಗಳಗಳು ತಲೆದೋರಬಾರದೆಂದರೆ ಹೆಂಡತಿಯಾದವಳು ಗಂಡನ ಮುಂದೆ ಈ ಕೆಲಸಗಳನ್ನು ಮಾಡಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ದರೆ ಪತ್ನಿ ತನ್ನ ಪತಿಯ ಮುಂದೆ ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.

Chanakya Niti: ಹೆಂಡತಿಯಾದವಳು ಗಂಡನ ಮುಂದೆ ಎಂದಿಗೂ ಈ ಕೆಲಸಗಳನ್ನು ಮಾಡಬಾರದು ಎನ್ನುತ್ತಾರೆ ಚಾಣಕ್ಯ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 06, 2026 | 7:50 PM

Share

ಗಂಡ ಹೆಂಡತಿಯ (Husband -Wife) ನಡುವಿನ ಸಂಬಂಧ ಚೆನ್ನಾಗಿದ್ದರೆ ಮಾತ್ರ ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ. ಇವರಿಬ್ಬರ ನಡುವೆ ಆಗಾಗ್ಗೆ ಸಣ್ಣಪುಟ್ಟ ಜಗಳಗಳು, ಮನಸ್ತಾಪಗಳು ನಡೆಯುವುದು ಸಾಮಾನ್ಯ. ಈ ಜಗಳಗಳು ಅತಿರೇಕಕ್ಕೆ ತಿರುಗಿದರೆ ಒಂದು ಸುಂದರ ಸಂಬಂಧವೇ ಹಾಳಾಗುತ್ತದೆ. ಆದ್ದರಿಂದ ಸಂಸಾರದಲ್ಲಿ ಮನಸ್ತಾಪ ತಲೆದೋರಬಾರದೆಂದರೆ ಹೆಂಡತಿಯಾದವಳು ಈ ಒಂದಷ್ಟು ಗುಣಗಳನ್ನು ಬೆಳೆಸಿಕೊಳ್ಳಬೇಕು, ಈ ಕೆಲವೊಂದು ವಿಚಾರಗಳನ್ನು ಗಂಡನ ಮುಂದೆ ಮಾತನಾಡಬಾರದು ಎಂದು ಆಚಾರ್ಯ ಚಾಣಕ್ಯರು ಸಲಹೆಯನ್ನು ನೀಡಿದ್ದಾರೆ. ಹಾಗಿದ್ದರೆ ದಾಂಪತ್ಯ ಜೀವನ ಚೆನ್ನಾಗಿರಲು ಹೆಂಡತಿಯಾದವಳು ಗಂಡನ ಮುಂದೆ ಯಾವ ವಿಚಾರಗಳನ್ನು ಮಾತನಾಡಬಾರದು ಎಂಬುದನ್ನು ನೋಡೋಣ ಬನ್ನಿ.

ಹೆಂಡತಿ ತನ್ನ ಗಂಡನ ಮುಂದೆ ಈ ಮಾತುಗಳನ್ನಾಡಬಾರದು:

ಗಂಡನ ಮುಂದೆ ಮತ್ತೊಬ್ಬ ಪುರುಷನನ್ನು ಹೊಗಳುವುದು: ಚಾಣಕ್ಯರ ಪ್ರಕಾರ ಹೆಂಡತಿಯಾದವಳು ತನ್ನ ಗಂಡನನ್ನು ಕೀಳಾಗಿ ನೋಡುತ್ತಾ ಇತರ ಪುರುಷರನ್ನು ಪದೇ ಪದೇ ಹೊಗಳುವುದು ಒಳ್ಳೆಯದಲ್ಲ. ಇದು ಗಂಡನ ಅಹಂಕಾರ, ಆತ್ಮಗೌರವಕ್ಕೆ ನೋವುಂಟು ಮಾಡುತ್ತದೆ. ಈ ರೀತಿ ಪದೇ ಪದೇ ಗಂಡನ ಮುಂದೆ ಪರ ಪುರುಷರನ್ನು ಹೊಗಳಿದರೆ ಖಂಡಿತವಾಗಿಯೂ ಇದರಿಂದ ಸಂಬಂಧ ಮುರಿದು ಬೀಳಬಹುದು. ನಿಮ್ಮಲ್ಲೂ ಈ ಅಭ್ಯಾಸಗಳಿದ್ದರೆ ತಕ್ಷಣ ಇದನ್ನು ಬದಲಾಯಿಸಿಕೊಳ್ಳಿ.

ಕೋಪದಲ್ಲಿ ಮಾತನಾಡುವುದು: ಪ್ರತಿಯೊಂದು ವಿಚಾರಕ್ಕೂ ಗಂಡನ ಮೇಲೆ ಕೋಪ ಮಾಡಿಕೊಳ್ಳುವುದು ಮತ್ತು ಕೋಪದಲ್ಲಿ ಚುಚ್ಚು ಮಾತುಗಳನ್ನಾಡುವುದು ಒಳ್ಳೆಯದಲ್ಲ. ಕೋಪದಲ್ಲಿ ಏನನ್ನಾದರೂ ಹೇಳಿದರೆ, ಅದು ನಿಮ್ಮ ಗಂಡನ ಭಾವನೆಗಳಿಗೆ ನೋವುಂಟು ಮಾಡುವ ಸಾಧ್ಯತೆಯಿದೆ. ನಿಮ್ಮ ದಾಂಪತ್ಯ ಜೀವನ  ಸಂತೋಷದಿಂದ ಕೂಡಿರಬೇಕೆಂದು ಬಯಸಿದರೆ, ನೀವು ನಿಮ್ಮ ಗಂಡನ ಮೇಲೆ ಕೋಪ ಮಾಡಿಕೊಳ್ಳುವುದನ್ನು ನಿಲ್ಲಿಸಿ.

ಗಂಡನನ್ನು ಇತರರೊಂದಿಗೆ ಹೋಲಿಸುವುದು: ಅನೇಕ ಮಹಿಳೆಯರು ಈ ಒಂದು ತಪ್ಪನ್ನು ಮಾಡುತ್ತಾರೆ. ಹೌದು ಹಣ, ಸೌಂದರ್ಯ ಮತ್ತು ಸ್ಥಾನಮಾನ, ಏನಾನ್ನಾದರೂ ತಂದುಕೊಡುವ  ವಿಷಯದಲ್ಲಿ ಮಹಿಳೆಯರು ತಮ್ಮ ಗಂಡನನ್ನು ಇತರರೊಂದಿಗೆ ಹೋಲಿಸುತ್ತಾರೆ. ಈ ರೀತಿ ಇತರರೊಂದಿಗೆ ಹೋಲಿಕೆ ಮಾಡುವ ಸಣ್ಣ ತಪ್ಪು ಸಂಸಾರದಲ್ಲಿ ದೊಡ್ಡ ಬಿರುಕನ್ನು ಮೂಡಿಸುತ್ತದೆ. ಹಾಗಾಗಿ ಗಂಡ ಮತ್ತು ಹೆಂಡತಿ ಇಬ್ಬರೂ ಸಹ ತಮ್ಮಲ್ಲಿರುವದರಲ್ಲಿ ತೃಪ್ತರಾಗಿರಬೇಕು. ಹಾಗಿದ್ದರೆ ಮಾತ್ರ ಜೀವನದಲ್ಲಿ ಸಂತೋಷ, ನೆಮ್ಮದಿ ನೆಲೆಸಲು ಸಾಧ್ಯ ಎಂದಿದ್ದಾರೆ ಆಚಾರ್ಯ ಚಾಣಕ್ಯ.

ಇದನ್ನೂ ಓದಿ: ಇಂತವರನ್ನು ಮದುವೆಯಾದರೆ ಜೀವನ ತುಂಬಾನೇ ಕಷ್ಟ ಎಂದಿದ್ದಾರೆ ಚಾಣಕ್ಯ

ಅತ್ತೆ- ಮಾವನ ಬಗ್ಗೆ ಕೆಟ್ಟ ಮಾತುಗಳನ್ನಾಡುವುದು: ಅನೇಕ ಮಹಿಳೆಯರು ತಮ್ಮ ಗಂಡಂದಿರ ಮುಂದೆ ಅತ್ತೆ ಮಾವನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ, ಅವರ ಬಗ್ಗೆ ಚಾಡಿ ಹೇಳುತ್ತಾರೆ. ಇದು ಎಂದಿಗೂ ಒಳ್ಳೆಯದಲ್ಲ ಎನ್ನುತ್ತಾರೆ ಚಾಣಕ್ಯ.  ಹೆಂಡತಿಯಾದವಳು  ತನ್ನ ಮನೆಯಲ್ಲಿ ಜಗಳಗಳನ್ನು ತಪ್ಪಿಸಲು, ತನ್ನ ಗಂಡನೊಂದಿಗೆ ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸಿದರೆ, ಅವಳು ತನ್ನ ಗಂಡನ ಮುಂದೆ ತನ್ನ ಅತ್ತೆಯ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಬಾರದು ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನ ಎಡವಟ್ಟಿನಿಂದ ಆಸ್ಪತ್ರೆ ಸೇರಿದ ಯುವತಿ
ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನ ಎಡವಟ್ಟಿನಿಂದ ಆಸ್ಪತ್ರೆ ಸೇರಿದ ಯುವತಿ
ಇಂಡೋನೇಷ್ಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಸರ್ಕಾರಿ ಗೌರವದ ಸ್ವಾಗತ
ಇಂಡೋನೇಷ್ಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಸರ್ಕಾರಿ ಗೌರವದ ಸ್ವಾಗತ
ಈ ತಿಂಗಳ ಅಂತ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆ
ಈ ತಿಂಗಳ ಅಂತ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆ
ಗುಂಪು ಸೇರಿಸಿ SIR ಮಾಡ್ತಿರುವ ಸ್ಥಳಕ್ಕೆ ಮಾಜಿ ಸಂಸದರ ಸಪ್ರೈಸ್​​ ಎಂಟ್ರಿ!
ಗುಂಪು ಸೇರಿಸಿ SIR ಮಾಡ್ತಿರುವ ಸ್ಥಳಕ್ಕೆ ಮಾಜಿ ಸಂಸದರ ಸಪ್ರೈಸ್​​ ಎಂಟ್ರಿ!
ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಸಚಿವ ಖಾದರ್​​
ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಸಚಿವ ಖಾದರ್​​
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಬೆಳಗಾವಿಯಲ್ಲಿ ಪರಿಸ್ಥಿತಿ ಹೇಗಿದೆ?
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಬೆಳಗಾವಿಯಲ್ಲಿ ಪರಿಸ್ಥಿತಿ ಹೇಗಿದೆ?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ