AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಇಂತವರನ್ನು ಮದುವೆಯಾದರೆ ಜೀವನ ತುಂಬಾನೇ ಕಷ್ಟ ಎಂದಿದ್ದಾರೆ ಚಾಣಕ್ಯ

ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ. ಹಾಗಾಗಿ ಮದುವೆಯ ನಿರ್ಧಾರಗಳನ್ನು ಕೇವಲ ಹೃದಯದಿಂದ ತೆಗೆದುಕೊಳ್ಳದೆ, ಬುದ್ಧಿವಂತಿಕೆ ಮತ್ತು ಉತ್ತಮ ವಿವೇಚನೆಯಿಂದ ತೆಗೆದುಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಅದರಲ್ಲೂ ಈ ಕೆಲವೊಂದು ಸ್ವಭಾವದ ಜನರನ್ನು ಮದುವೆಯಾದರೆ ಜೀವನಪರ್ಯಂತ ಕಣ್ಣೀರಲ್ಲೇ ಕೈ ತೊಳೆಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಾಗಿದ್ದರೆ ಎಂತಹ ವ್ಯಕ್ತಿಗಳನ್ನು ಮದುವೆಯಾಗಬಾದು ಎಂಬುದನ್ನು ನೋಡೋಣ ಬನ್ನಿ.

Chanakya Niti: ಇಂತವರನ್ನು ಮದುವೆಯಾದರೆ ಜೀವನ ತುಂಬಾನೇ ಕಷ್ಟ ಎಂದಿದ್ದಾರೆ ಚಾಣಕ್ಯ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Jul 05, 2026 | 10:21 PM

Share

ಮದುವೆ (Marriage) ಅನ್ನೋದು ಪ್ರತಿಯೊಬ್ಬರ ಜೀವನದ ಅತಿ ದೊಡ್ಡ ಮತ್ತು ಪ್ರಮುಖ ನಿರ್ಧಾರ.  ಜೀವನ ಸಂಗಾತಿಯ ಆಯ್ಕೆ ಸರಿಯಾಗಿದ್ದರೆ, ದಾಂಪತ್ಯ ಜೀವನ ಸುಖಕರವಾಗಿರುತ್ತದೆ. ಅದೇ ಜೀವನ ಸಂಗಾತಿಯ ಆಯ್ಕೆಯ ವಿಚಾರದಲ್ಲಿ ಸ್ವಲ್ಪ ಎಡವಿದರೆ, ತಪ್ಪಾದ ವ್ಯಕ್ತಿ  ಜೀವನವನ್ನು ಪ್ರವೇಶಿಸಿದರೆ, ಇಡೀ ಜೀವನವೇ ಹಾಳಾಗಬಹುದು. ಹಾಗಾಗಿ ಜೀವನ ಸಂಗಾತಿಯ ಆಯ್ಕೆಯ ವಿಚಾರದಲ್ಲಿ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಮದುವೆಯ ವಿಚಾರದಲ್ಲಿ ಎಂದಿಗೂ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು, ಅದರಲ್ಲೂ ಈ ಕೆಲವು ಸ್ವಭಾವ ಜನರನ್ನು ಮದುವೆಯಾಗಲೇಬಾರದು ಎಂದು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಎಂತಹ ವ್ಯಕ್ತಿಗಳನ್ನು ಮದುವೆಯಾದರೆ ಸಂಪೂರ್ಣ ಜೀವನವೇ ಹಾಳಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.

ಇಂತಹ ವ್ಯಕ್ತಿಗಳನ್ನು ಮದುವೆಯಾಗಬಾರದು:

ಬಾಹ್ಯ ಸೌಂದರ್ಯಕ್ಕೆ ಮಾರುಹೋಗಬೇಡಿ: ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಒಬ್ಬ ವ್ಯಕ್ತಿಯ ಸೌಂದರ್ಯ, ಬಾಹ್ಯ ಅಂದವನ್ನು ನೋಡಿ ಮೆಚ್ಚಿಕೊಳ್ಳಬಾರದು. ಚಾಣಕ್ಯರ ಪ್ರಕಾರ, ವ್ಯಕ್ತಿಯ ನಿಜವಾದ ಸೌಂದರ್ಯವು ಅವರ ಮನಸ್ಸು ಮತ್ತು ಆಲೋಚನೆಗಳಲ್ಲಿದೆ. ವ್ಯಕ್ತಿ ಸುಂದರವಾಗಿದ್ದು, ಆದರೆ ಆತನ ಸ್ವಭಾವ ಮತ್ತು ಆತನ ಗುಣ ಕೆಟ್ಟದಾಗಿದ್ದಾಗಿದ್ದರೆ ಆತನನ್ನು ಮದುವೆಯಾದರೆ ಜೀವನವೇ ಹಾಳು. ಆದ್ದರಿಂದ, ವ್ಯಕ್ತಿಯ ಬಾಹ್ಯ ಸೌಂದರ್ಯದ ಬದಲು, ಆತನ ಮನಸ್ಸು ಮತ್ತು ಆಲೋಚನೆಗಳು ಹೇಗಿವೆ ಎಂಬುದನ್ನು ನೋಡುವುದು ಮುಖ್ಯ.

ಕೋಪ ಮತ್ತು ಕಠಿಣ ಸ್ವಭಾವದ ಜನರು: ನಿರಂತರವಾಗಿ ಕೋಪಗೊಳ್ಳುವ ಮತ್ತು ಪ್ರತಿಯೊಂದು ಸಣ್ಣ ವಿಷಯಕ್ಕೂ ಕಠಿಣ ಪದಗಳನ್ನು ಬಳಸುವ ವ್ಯಕ್ತಿ ಮನೆಯ ಶಾಂತಿಯನ್ನು ಸಂಪೂರ್ಣವಾಗಿ ಹಾಳುಮಾಡುತ್ತಾನೆ.  ಚಾಣಕ್ಯ ನೀತಿಯ ಪ್ರಕಾರ, ಅಂತಹ ವ್ಯಕ್ತಿಯನ್ನು ಮದುವೆಯಾಗುವ ಮೊದಲು ಎರಡು ಬಾರಿ ಯೋಚಿಸಬೇಕು, ಏಕೆಂದರೆ ತಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗದ ಜನ ನಿಮ್ಮನ್ನು ಎಂದಿಗೂ ಕಾಳಜಿ ವಹಿಸಲು ಸಾಧ್ಯವಿಲ್ಲ. ಅವರು ಕಠೋರ ಮಾತುಗಳನ್ನಾಗಿ ನಿಮ್ಮ ಮನಸ್ಸನ್ನು ನೋಯಿಸುವುದಲ್ಲದೆ, ಸಮಾಜದಲ್ಲಿ ನಿಮ್ಮ ಕುಟುಂಬದ ಖ್ಯಾತಿಯನ್ನು ಸಹ ಹಾಳುಮಾಡಬಹುದು.

ದುರಾಸೆ ಮತ್ತು ಹಣದಾಹಿ: ಆಚಾರ್ಯ ಚಾಣಕ್ಯರ ಪ್ರಕಾರ, ವಿವಾಹ ಸಂಬಂಧವು ಸಂಪೂರ್ಣವಾಗಿ ನಂಬಿಕೆ ಮತ್ತು ಪ್ರೀತಿಯ ಮೇಲೆ ನಿರ್ಮಿಸಲ್ಪಟ್ಟಿದೆ. ಅದು ಎಂದಿಗೂ ಸಂಪತ್ತಿನ ಮೇಲೆ ಅವಲಂಬಿತವಾಗಿಲ್ಲ. ತೀವ್ರ ದುರಾಸೆಯವರು ಅಥವಾ ಹಣಕ್ಕಾಗಿ ಮಾತ್ರ ಸಂಬಂಧಗಳನ್ನು ರೂಪಿಸುವವರು ನಿಮ್ಮ ಕಷ್ಟದ ಸಮಯದಲ್ಲಿ ಎಂದಿಗೂ ನಿಮ್ಮೊಂದಿಗೆ ನಿಲ್ಲುವುದಿಲ್ಲ. ಅಂತಹ ಜನರಿಗೆ ಹಣ ಮತ್ತು ಸ್ಥಾನಮಾನವೇ ಸಂಬಂಧಕ್ಕಿಂತ ಮುಖ್ಯವಾಗಿರುತ್ತದೆ. ಅಂತಹವರನ್ನು ಮದುವೆಯಾದರೆ ನೋವನ್ನೇ ಅನುಭವಿಸಬೇಕಾಗುತ್ತದೆ.

ಇದನ್ನೂ ಓದಿ: ಪ್ರೀತಿಯನ್ನು ಹೆಚ್ಚಿಸುವ, ಸಂಬಂಧವನ್ನು ಬಲಪಡಿಸುವ ಮಧುರ ಸುಳ್ಳುಗಳಿವು

ಇತರರನ್ನು ಹೇಗೆ ಗೌರವಿಸಬೇಕೆಂದು ತಿಳಿದಿಲ್ಲದವರು: ಚಾಣಕ್ಯರು ಹೇಳುವಂತೆ, ತನ್ನ ಹೆತ್ತವರನ್ನು, ಹಿರಿಯರನ್ನು ಅಥವಾ  ಯಾವುದೇ ವ್ಯಕ್ತಿಯನ್ನು  ಗೌರವಿಸದ ವ್ಯಕ್ತಿಯು ನಿಮ್ಮನ್ನು ಎಂದಿಗೂ ಗೌರವಿಸಲು ಸಾಧ್ಯವಾಗುವುದಿಲ್ಲ. ಮದುವೆಯು ಕೇವಲ ಇಬ್ಬರು ಜನರನ್ನು ಮಾತ್ರವಲ್ಲ, ಎರಡು ಕುಟುಂಬಗಳನ್ನು ಸಹ ಒಂದುಗೂಡಿಸುತ್ತದೆ. ಹೀಗಿರುವಾಗ ಪ್ರೀತಿಪಾತ್ರರ ಬಗ್ಗೆ ಗೌರವವಿಲ್ಲದ ವ್ಯಕ್ತಿ, ನಿಮ್ಮನ್ನು ಜೊತೆಗೆ ನಿಮ್ಮ ಕುಟುಂಬದವರನ್ನು ಗೌರವಿಸುವುದಿಲ್ಲ ಮತ್ತು ಅವರನ್ನು ಎಂದಿಗೂ ತಮ್ಮ ಸ್ವಂತದವರು  ಎಂದು ಸ್ವೀಕರಿಸುವುದಿಲ್ಲ.

ಧರ್ಮ ಮತ್ತು ಒಳ್ಳೆಯ ಕಾರ್ಯಗಳಿಂದ ದೂರವಿರುವವರು: ಇಲ್ಲಿ, ಧರ್ಮವು ಕೇವಲ ಪೂಜೆಯ ಬಗ್ಗೆ ಅಲ್ಲ, ಸರಿ ಮತ್ತು ತಪ್ಪುಗಳನ್ನು ಅರ್ಥಮಾಡಿಕೊಳ್ಳುವುದರ ಬಗ್ಗೆಯೂ ಆಗಿದೆ. ಒಳ್ಳೆಯ ಕಾರ್ಯಗಳಲ್ಲಿ ನಂಬಿಕೆ ಇಲ್ಲದ, ನಿರಂತರವಾಗಿ ಸುಳ್ಳು ಹೇಳುವ ಅಥವಾ ಇತರರನ್ನು ಮೋಸಗೊಳಿಸುವ ವ್ಯಕ್ತಿ ಎಂದಿಗೂ ವಿಶ್ವಾಸಾರ್ಹ ಜೀವನ ಸಂಗಾತಿಯಾಗಲು ಸಾಧ್ಯವಿಲ್ಲ. ಆಚಾರ್ಯ ಚಾಣಕ್ಯರ ಪ್ರಕಾರ, ಅಂತಹ ಜನರೊಂದಿಗೆ ಇರುವುದು ನರಕದಲ್ಲಿ ವಾಸಿಸಿದಂತೆ. ಆದ್ದರಿಂದ, ಮದುವೆಗೆ ಮೊದಲು ವ್ಯಕ್ತಿಯ ನಡವಳಿಕೆ ಮತ್ತು ಅಭ್ಯಾಸಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಿಪಿ ಯೋಗೇಶ್ವರ್ ಪುತ್ರನ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ ಸಿಎಂ ಡಿಕೆಶಿ
ಸಿಪಿ ಯೋಗೇಶ್ವರ್ ಪುತ್ರನ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ ಸಿಎಂ ಡಿಕೆಶಿ
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ
ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!
ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!
ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾದ ನಟ ರಿಷಬ್ ಶೆಟ್ಟಿ; ಕಾರಣ ಏನು?
ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾದ ನಟ ರಿಷಬ್ ಶೆಟ್ಟಿ; ಕಾರಣ ಏನು?
ಮನಮೋಹಕವಾಗಿ ಕಾಣುವ ಕೂಡ್ಲು ಫಾಲ್ಸ್ ಅಷ್ಟೇ ಅಪಾಯಕಾರಿ
ಮನಮೋಹಕವಾಗಿ ಕಾಣುವ ಕೂಡ್ಲು ಫಾಲ್ಸ್ ಅಷ್ಟೇ ಅಪಾಯಕಾರಿ
ಕೊನೆಗೂ ತುಂಬಿದ ತುಂಗಾ ಜಲಾಶಯ, ತುಂಗಭದ್ರ ನದಿ ಪಾತ್ರದಲ್ಲಿ ಸಂಭ್ರಮ
ಕೊನೆಗೂ ತುಂಬಿದ ತುಂಗಾ ಜಲಾಶಯ, ತುಂಗಭದ್ರ ನದಿ ಪಾತ್ರದಲ್ಲಿ ಸಂಭ್ರಮ
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ; ಮಲಪ್ರಭಾ ನದಿ ತಟದ ಮಾರುತಿ ಮಂದಿರ ಮುಳುಗಡೆ!
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ; ಮಲಪ್ರಭಾ ನದಿ ತಟದ ಮಾರುತಿ ಮಂದಿರ ಮುಳುಗಡೆ!
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!