AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸುಗಳಿಗೆ ವಿಷವುಣಿಸುತ್ತಿದೆಯಾ KMF? ಆಹಾರ ಘಟಕದಲ್ಲಿ ಗೋಲ್ಮಾಲ್ ಶಂಕೆ: ಆಡಿಯೋದಿಂದ ಬಯಲಾಯ್ತು ಸ್ಫೋಟಕ ವಿಚಾರ

ಕೆಎಂಎಫ್‌ನ ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಕಳಪೆ ಗುಣಮಟ್ಟದ ಮೇವು ಉತ್ಪಾದಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಪಶು ಆಹಾರ ನಿರ್ದೇಶಕ ಜಯಕುಮಾರ್ ಅವರ ಆಡಿಯೋ ಒಂದು ವೈರಲ್ ಆಗಿದ್ದು,ಅವ್ಯವಹಾರದ ಸುಳಿವು ದೊರೆತಿದೆ. ರೈತರು ಹಾಗೂ ಗ್ರಾಹಕರ ನಂಬಿಕೆಗೆ ಧಕ್ಕೆ ಉಂಟಾಗಿದೆ.

ಹಸುಗಳಿಗೆ ವಿಷವುಣಿಸುತ್ತಿದೆಯಾ KMF? ಆಹಾರ ಘಟಕದಲ್ಲಿ ಗೋಲ್ಮಾಲ್ ಶಂಕೆ: ಆಡಿಯೋದಿಂದ ಬಯಲಾಯ್ತು ಸ್ಫೋಟಕ ವಿಚಾರ
ಹಾಲು ನೀಡುವ ಹಸುಗಳಿಗೆ ವಿಷವುಣಿಸುತ್ತಿದೆಯಾ KMF?Image Credit source: tv9
ಕಿರಣ ಹೆಚ್​. ವಿ.
| Edited By: |

Updated on: Aug 19, 2026 | 2:36 PM

Share

ಬೆಂಗಳೂರು, ಆಗಸ್ಟ್ 19: ಕರ್ನಾಟಕ ಹಾಲು ಮಹಾಮಂಡಳಿ (KMF)ಯ ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಕಳಪೆ ಗುಣಮಟ್ಟದ ಪಶು ಆಹಾರ ಉತ್ಪಾದನೆ ಮತ್ತು ಅವ್ಯವಹಾರದ ಆರೋಪ ಕೇಳಿಬಂದಿರುವ ಬೆನ್ನಲ್ಲೇ, ಪಶು ಆಹಾರ ನಿರ್ದೇಶಕ ಜಯಕುಮಾರ್ ಅವರದ್ದೆಂದು ಹೇಳಲಾದ ಆಡಿಯೋ ‘ಟಿವಿ9’ಗೆ ಲಭ್ಯವಾಗಿದೆ. ಈ ಆಡಿಯೋದಲ್ಲಿ ಘಟಕದ ಕಚ್ಚಾ ವಸ್ತುಗಳ ಖರೀದಿ ಸೇರಿದಂತೆ ಹಲವು ವಿಚಾರಗಳ ಕುರಿತು ಸಂಭಾಷಣೆ ನಡೆದಿದೆ.

ಕೆಎಂಎಫ್ ಪಶು ಆಹಾರ ಘಟಕದಲ್ಲಿ ಕಳಪೆ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಬಳಸಲಾಗುತ್ತಿದೆ ಎಂಬ ಆರೋಪ ಈಗಾಗಲೇ ಕೇಳಿಬಂದಿತ್ತು. ಇದರ ಬೆನ್ನಲ್ಲೇ ನಿರ್ದೇಶಕ ಜಯಕುಮಾರ್ ಅವರದ್ದೆಂದು ಹೇಳಲಾದ ಆಡಿಯೋ ಬಹಿರಂಗವಾಗಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ.

ಆಡಿಯೋದಲ್ಲಿ ಅವ್ಯವಹಾರದ ಸುಳಿವು?

‘ಟಿವಿ9’ಗೆ ಲಭ್ಯವಾಗಿರುವ ಆಡಿಯೋದಲ್ಲಿ ಪಶು ಆಹಾರ ಘಟಕದ ಲ್ಯಾಬ್ ಟೆಕ್ನಿಷಿಯನ್ ವೇದಾವತಿ ಅವರೊಂದಿಗೆ ಜಯಕುಮಾರ್ ಮಾತನಾಡಿರುವುದು ಕೇಳಿಬರುತ್ತದೆ ಎನ್ನಲಾಗಿದೆ. ಕಚ್ಚಾ ವಸ್ತುಗಳ ಖರೀದಿ ಹಾಗೂ ಕಡಿಮೆ ಗುಣಮಟ್ಟದ ಮೊಲಾಸಿಸ್ ಬಳಕೆಯ ಕುರಿತು ಮಾತುಕತೆ ನಡೆದಿದೆ ಎಂಬ ಆರೋಪವಿದೆ. ಘಟಕದ ಖರೀದಿ ಪ್ರಕ್ರಿಯೆ, ಅಧಿಕಾರಿಗಳ ನಡುವಿನ ವ್ಯವಹಾರ ಹಾಗೂ ಸಂಸ್ಥೆಗೆ ಆಗಬಹುದಾದ ನಷ್ಟದ ಬಗ್ಗೆ ಸಂಭಾಷಣೆ ನಡೆದಿರುವುದು ಆಡಿಯೋದಿಂದ ಗೊತ್ತಾಗುತ್ತದೆ ಎನ್ನಲಾಗಿದೆ. ಆದರೆ, ಆಡಿಯೋದ ಸಂಪೂರ್ಣ ವಿವರಗಳು ಮತ್ತು ಅದಕ್ಕೆ ಸಂಬಂಧಿಸಿರುವ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

ಆಡಿಯೋದಲ್ಲೇನಿದೆ? ಈ ವಿಡಿಯೋ ನೋಡಿ

₹4.5 ಕೋಟಿ ಅವ್ಯವಹಾರದ ಆರೋಪ

ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಸುಮಾರು ₹4.5 ಕೋಟಿ ಮೊತ್ತದ ಅವ್ಯವಹಾರ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ. ಕಡಿಮೆ ಗುಣಮಟ್ಟದ ಮೊಲಾಸಿಸ್ ಸೇರಿದಂತೆ ಕಚ್ಚಾ ವಸ್ತುಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳಿವೆ.

ಇದಕ್ಕೂ ಮುನ್ನ ಘಟಕದಲ್ಲಿ ತಯಾರಾಗುವ ಪಶು ಆಹಾರದ ಗುಣಮಟ್ಟದ ಬಗ್ಗೆ ರೈತರಿಂದಲೂ ಆಕ್ಷೇಪಗಳು ವ್ಯಕ್ತವಾಗಿದ್ದವು. ಕಳಪೆ ಆಹಾರ ಸೇವನೆಯಿಂದ ಹಸುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ, ಹಾಲಿನ ಇಳುವರಿ ಕಡಿಮೆಯಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ಇದನ್ನೂ ಓದಿ: ಕಳಪೆ ನಂದಿನಿ ಪಶು ಆಹಾರದಿಂದ ಹಸುಗಳ ಸಾವಾಯ್ತಾ? ಕಳಪೆ ಗುಣಮಟ್ಟದ ಬಗ್ಗೆ ಗಂಭೀರ ಆರೋಪ

ರೈತರ ಹಿತದೃಷ್ಟಿಯಿಂದ ಕೆಎಂಎಫ್ ಅಧಿಕಾರಿಗಳು ಈ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಮೆಲೋನಿ
ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಮೆಲೋನಿ
‘ಅಮೆರಿಕ ಅಮೆರಿಕ 2’ ಸಿನಿಮಾ ನೋಡಿ ಮೆಚ್ಚಿಕೊಂಡ ಸುಧಾ ಮೂರ್ತಿ
‘ಅಮೆರಿಕ ಅಮೆರಿಕ 2’ ಸಿನಿಮಾ ನೋಡಿ ಮೆಚ್ಚಿಕೊಂಡ ಸುಧಾ ಮೂರ್ತಿ
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಹಲವೆಡೆ ಎಂಟ್ರಿ-ಎಕ್ಸಿಟ್ ಕ್ಲೋಸ್​​
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಹಲವೆಡೆ ಎಂಟ್ರಿ-ಎಕ್ಸಿಟ್ ಕ್ಲೋಸ್​​
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ
ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ
ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್
ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್